ಅಮಾಯಕ ನಾಗಚೈತನ್ಯಗೆ ಮೋಸ ಮಾಡಿದ್ದು ಏಕೆ ಎಂದ ಅಭಿಮಾನಿ, ಮುಟ್ಟಿ ನೋಡಿಕೊಳ್ಳುವಂತಹ ಕೌಂಟರ್ ಕೊಟ್ಟ ಸಮಂತಾ……!

Follow Us :

ಸ್ಟಾರ್‍ ನಟಿ ಸಮಂತಾ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಇತ್ತೀಚಿಗೆ ಆಕೆ ಸಿನೆಮಾಗಳ ಜೊತೆಗೆ ವೈಯುಕ್ತಿಕ ಜೀವನದ ಕಾರಣದಿಂದಲೂ ಭಾರಿ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಆಕೆ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಡಿಪ್ರೆಷನ್ ಗೆ ಗುರಿಯಾಗಿದ್ದರು, ಬಳಿಕ ಆಕೆ ಮಯೋಸೈಟೀಸ್ ಎಂಬ ಮಾರಕ ವ್ಯಾಧಿಗೆ ಗುರಿಯಾಗಿದ್ದರು. ಸದ್ಯ ಆಕೆ ಸಿನೆಮಾಗಳಿಂದ ದೂರವುಳಿದಿದ್ದಾರೆ. ಆರೋಗ್ಯದ ಕಾರಣದಿಂದ ಆಕೆ 1 ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ.

ನಟಿ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರೂ ಸಹ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕ ಟಚ್ ನಲ್ಲೇ ಇರುತ್ತಾರೆ. ಪೊಟೋಗಳು, ವಿಡಿಯೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿಗೆ ಆಕೆ ಪಾಡ್ ಕಾಸ್ಟ್ ಸಹ ಆರಂಭಿಸಿದ್ದಾರೆ. ಇದರಲ್ಲಿ ಸಮಂತಾ ಆರೋಗ್ಯಕ್ಕೆ ಸಂಬಂಧಿಸಿಂದತ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಮಂತಾ ಹಂಚಿಕೊಂಡ ವಿಡಿಯೋ ಒಂದಕ್ಕೆ ನೆಟ್ಟಿಗನೋರ್ವ ಮಾಡಿದ ಕಾಮೆಂಟ್ ಗೆ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್‍ ಕೊಟ್ಟಿದ್ದಾರೆ. ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ವಿಚಾರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಅಮಾಯಕ ಗಂಡ ನಾಗಚೈತನ್ಯ ಗೆ ಏಕೆ ಮೋಸ ಮಾಡಿದ್ರಿ ಎಂದು ಕಾಮೆಂಟ್ ಮೂಲಕ ನೆಟ್ಟಿಗನೋರ್ವ ಕಾಮೆಂಟ್ ಮಾಡಿದ್ದಾನೆ.

ಇನ್ನೂ ಸಮಂತಾ ಈ ಕಾಮೆಂಟ್ ಗೆ ಕೊಂಚ ಖಾರವಾಗಿಯೇ ಉತ್ತರ ನೀಡಿದ್ದಾರೆ. ಕ್ಷಮಿಸಿ ಇಂತಹ ಪ್ರಶ್ನೆಗಳು ನಿಮಗ ಅವಶ್ಯಕತೆಯಿಲ್ಲ. ಇನ್ನೂ ಸ್ಟ್ರಾಂಗ್ ಆಗಿರುವುದು ಬೇಕಾಗಿದೆ. ನಿಮಗೆ ಎಲ್ಲವೂ ಒಳ್ಳೆಯದೇ ಆಗಲಿ ಎಂದು ಸಮಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಸಮಂತಾ ತಮ್ಮ ವಿಚ್ಚೇದನದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮಾಜಿ ಪತಿಯ ಕುರಿತು ಕೋಪವನ್ನು ಸಹ ಹೊರಹಾಕಿಲ್ಲ. ಆದರೆ ನೆಟ್ಟಿಗ ಮಾಡಿದ ಈ ಕಾಮೆಂಟ್ ಗೆ ಸಮಂತಾ ಖಾರವಾಗಿಯೇ ಉತ್ತರಿಸಿದ್ದಾರೆ. ಇನ್ನೂ ಸಮಂತಾ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ನಟಿಯ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದಂತಹ ವ್ಯಕ್ತಿಯ ವಿರುದ್ದ ನೆಟ್ಟಿಗರು ಹಾಗೂ ಅಭಿಮಾನಿಗಳು ಆಕ್ರೋಷ ಹೊರಹಾಕುತ್ತಿದ್ದಾರೆ ಜೊತೆಗೆ ಸಮಂತಾ ರವರನ್ನು ಬೆಂಬಲಿಸುತ್ತಿದ್ದಾರೆ.

ಇನ್ನೂ ನಟಿ ಸಮಂತಾ ಕೊನೆಯದಾಗಿ ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಬಳಿಕ ಆಕೆ ಸಿನೆಮಾಗಳಿಂದ ಒಂದು ವರ್ಷ ಬ್ರೇಕ್ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಬಗ್ಗೆ ಅಪ್ಡೇಟ್ಸ್ ನೀಡುತ್ತಾ ಇದ್ದರು, ಇತ್ತೀಚಿಗಷ್ಟೆ ಆಕೆ ಮತ್ತೆ ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಾಗಿ ತಿಳಿಸಿದ್ದಾರೆ. ಇನ್ನೂ ಆಕೆ ಅಭಿನಯದ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್ ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ.