Film News

ತಾಯಿಗಾಗಿ ದೇಗುಲ ನಿರ್ಮಿಸಿದ ದಳಪತಿ ವಿಜಯ್, ಎಲ್ಲರ ಮೆಚ್ಚುಗೆಗೆ ಪಾತ್ರರಾದ ನಟ ವಿಜಯ್…..!

ಕಾಲಿವುಡ್ ಸೂಪರ್‍ ಸ್ಟಾರ್‍ ದಳಪತಿ ವಿಜಯ್ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ರಾಜಕೀಯದಲ್ಲೂ ಸಹ ಸಕ್ರೀಯರಾಗುತ್ತಿದ್ದಾರೆ. ವಿಜಯ್ ಸ್ಥಾಪಿಸಿದ ತಮಿಳಗ ವೆಟ್ರಿ ಕಜಗಂ ಪಾರ್ಟಿ ಸಹ ಸ್ಥಾಪನೆ ಮಾಡಿದ್ದಾರೆ. ಆದರೆ ತಮಿಳುನಾಡಿನ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಫರ್ಧೆ ಮಾಡುತ್ತಿಲ್ಲ ಎಂದು ವಿಜಯ್ ಪ್ರಕಟಿಸಿದ್ದರು. ಇದೀಗ ತನ್ನ ಪ್ರೀತಿಯ ತಾಯಿಗಾಗಿ ದೇಗುಲ ನಿರ್ಮಾಣ ಮಾಡಿಸಿ ಎಲ್ಲರ ಮೆಚ್ಚುಗೆ ಪಾಥ್ರರಾಗಿದ್ದಾರೆ.

ನಟ ವಿಜಯ್ ಸದ್ಯ ಕುಟುಂಬಸ್ಥರಿಂದ ದೂರವಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಜಯ್ ಗೆ ತಾಯಿ ಎಂದರೇ ತುಂಬಾನೆ ಇಷ್ಟವಂತೆ. ತಾಯಿಯ ಮೇಲಿರುವ ಅಮಿತವಾದ ಪ್ರೀತಿಯ ಕಾರಣದಿಂದ ಚೆನೈನಲ್ಲಿ ಕೊರಟ್ಟೂರ್‍ ವ್ಯಾಪ್ತಿಯಲ್ಲಿ ಸಾಯಿಬಾಬ ಮಂದಿರ ಕಟ್ಟಿಸಿದ್ದಾರೆ. ಈ ದೇವಾಲಯವನ್ನು ತಾಯಿಗಾಗಿ ನಿರ್ಮಾಣ ಮಾಡಿಸಿದ್ದಾರೆ ಎನ್ನಲಾಗಿದೆ. ತನ್ನ ತಾಯಿ ಶೋಭ ಹೆಸರಿನಲ್ಲಿ ಈ ದೇವಾಲಯ ನಿರ್ಮಾಣ ಮಾಡಿ ಕಳೆದ ಫೆಬ್ರವರಿ ಮಾಹೆಯಲ್ಲಿ ಈ ದೇವಾಲಯದಲ್ಲಿ ಕುಂಬಾಭಿಷೇಕ ಮಾಡಿಸಿದ್ದಾರೆ. ಈ ಸಂಬಂಧ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ತಾಯಿಗಾಗಿ ಕೋಟ್ಯಂತರ ಖರ್ಚು ಮಾಡಿ ದೇಗುಲ ಕಟ್ಟಿಸಿಕೊಟ್ಟ ವಿಜಯ್ ರವರನ್ನು ಅನೇಕರು ಪ್ರಶಂಸೆ ಮಾಡುತ್ತಿದ್ದಾರೆ.

ಈ ಹಿಂದೆ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದಾಗ ಅವರು ಚುನಾವಣೆಯಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಾರೆ, ಸಿನೆಮಾಗಳಿಂದ ದೂರವೇ ಉಳಿಯುತ್ತಾರೆ ಎಂದು ಹೇಳಲಾಗತ್ತಿತ್ತು. ಆದರೆ ಇದೀಗ ವಿಜಯ್ ಗ್ರೇಟೆಸ್ಟ್ ಆಫ್ ಆಫ್ ಟೈಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದಲ್ಲಿ ಈ ಸಿನೆಮಾ ಸೆಟ್ಟೇರಿದೆ. ಈ ಸಿನೆಮಾಗಾಗಿ ಆತ ಬರೊಬ್ಬರಿ 250 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕೊನೆಯದಾಗಿ ವಿಜಯ್ ಲಿಯೋ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೂಲಗಳ ಪ್ರಕಾರ ಈ ಸಿನೆಮಾ 600 ಕೋಟಿಗೂ ಅಧಿಕ ವಸೂಲಿ ಮಾಡಿದೆ ಎಂದು ಹೇಳಲಾಗಿದೆ.

Most Popular

To Top