News

ಈ ಭಾರಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ, ಮುನ್ಸೂಚನೆ ಕೊಟ್ಟ ಖಾಸಗಿ ಹವಾಮಾನ ಇಲಾಖೆ…..!

ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಅಬ್ಬರಿಸಿದ ಎಲ್ ನಿನೋ ಸೈಕ್ಲೋನ್ ಕಾರಣದಿಂದ ಭೀಕರ ಬರಗಾಲ ಹಾಗೂ ತಾಪಮಾನ ಹೆಚ್ಚಳ ಆಗಿ ಜನರನ್ನು ಹೈರಾಣಾಗಿಸಿದೆ ಎನ್ನಲಾಗಿದೆ. ಈ ಭಾರಿ ಕರ್ನಾಟಕದಲ್ಲಿ ತೀವ್ರ ಬರಗಾಲ ಹಾಗೂ ಸುಡುವ ಬಿಸಿಲು ಜನರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಆದರೆ ಈ ಭಾರಿ ಮುಂಗಾರು ಮಳೆ ಉತ್ತಮವಾಗಿರಲಿದೆ, ಮುಂಗಾರು ಆರಂಭಕ್ಕೂ ಮುನ್ನವೇ ರಾಜ್ಯದ ಹಲವು ಕಡೆ ಮಳೆ ಬಿದಿದ್ದು, ಜನರು ತುಸು ನಿರಾಳರಾಗಿದ್ದಾರೆ ಎನ್ನಲಾಗಿದೆ.

ಈ ವರ್ಷದ ಜೂನ್ ಮೊದಲ ವಾರದಿಂದ ಎಲ್ ನಿನೋ, ಲಾ ನಿನಾ ಆಗಿ ಬದಲಾಗುತ್ತದೆ ಎಂದು ಸ್ಕೈಮೇಟ್ ವರದಿ ತಿಳಿಸಿದೆ ಎನ್ನಲಾಗಿದೆ. ಎಲ್ ನಿನೋ, ಲಾ ನಿನಾ ಆಗಿ ಬದಲಾಗುವ ಕಾರಣದಿಂದ ಈ ಭಾರಿ ಉತ್ತಮವಾಗಿ ಮುಂಗಾರು ಮಳೆಯಾಗಲಿದೆ ಎನ್ನಲಾಗಿದೆ. ದೇಶದಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೇಟ್ ಮಾಹಿತಿ ನೀಡಿದೆ. ಜೂನ್ ಹಾಗೂ ಸೆಪ್ಟೆಂಬರ್‍ ನಡುವಿನ ನಾಲ್ಕು ತಿಂಗಳಲ್ಲಿ ಉತ್ತಮವಾದ ಅಂದರೇ ಮುಂಗಾರು ಮಳೆ ಶೇ.102ರಷ್ಟು ನಿರೀಕ್ಷಿಸಲಾಗಿದೆ. ಜೊತೆಗೆ IMD ಸಹ 96 ರಿಂದ 104 ಪ್ರತಿಶತದಷ್ಟು ಮಳೆಯನ್ನು ಸಾಮಾನ್ಯ ಅಥವಾ ಸರಾಸರಿ ಎಂದು ಪರಿಗಣಿಸುತ್ತದೆ ಎನ್ನಲಾಗಿದೆ.

ಇನ್ನೂ ಸ್ಕೈಮೇಟ್ ವರದಿಯಂತೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಲಕ್ಷದ್ವೀಪಗಳಲ್ಲಿ ಮುಂಗಾರು ಮಳೆ ಉತ್ತಮವಾಗಿರಲಿದೆ. ಆದರೆ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ಮಳೆಯಾಗಲಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂನಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಸ್ಕೈಮೇಟ್ ವರದಿ ತಿಳಿಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಸಿಲಿನ ತಾಪದಿಂದ ಜನರು ಶೀಘ್ರದಲ್ಲೇ ಪಾರಾಗಲಿದ್ದಾರೆ ಎನ್ನಲಾಗುತ್ತಿದೆ.

Most Popular

To Top