ಮಾನವ ಸಂಬಂಧಗಳ ಬಗ್ಗೆ ಎಮೋಷನಲ್ ಪೋಸ್ಟ್ ಹಂಚಿಕೊಂಡ ಸಮಂತಾ, ಸ್ಟೈಲಿಷ್ ಪೊಟೋಸ್ ಜೊತೆಗೆ ವೇದಾಂತ ನುಡಿದ ನಟಿ…..!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಬಳಿಕ ಆಕೆ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದು, ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದು, ಇದೀಗ ಮತ್ತೆ ವಿರಾಮ ಪಡೆದುಕೊಂಡಿದ್ದರ ಬಗ್ಗೆ ಸುದ್ದಿಯಲ್ಲೇ ಇದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಗಾಗಾ ವೇದಾಂತ ನುಡಿಯುವ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಸಮಂತಾ ಮಾನವ ಸಂಬಂಧಗಳ ಬಗ್ಗೆ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಕಳೆದೊಂದು ವರ್ಷದಿಂದ ನಟಿ ಸಮಂತಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದಾಗಿ ತಿಳಿಸಿದರು. ಈ ವೇಳೆ ಆಕೆಗೆ ಅಭಿಮಾನಿಗಳ ಜೊತೆಗೆ ಸಿನೆಮಾ ಸೆಲೆಬ್ರೆಟಿಗಳೂ ಸಹ ಧೈರ್ಯ ತುಂಬುವ ಕೆಲಸ  ಮಾಡಿದ್ದರು. ಬಳಿಕ ಈ ವ್ಯಾಧಿಗೆ ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು, ಯಶೋಧ ಹಾಗೂ ಶಾಕುಂತಲಂ ಸಿನೆಮಾಗಳನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ವಿಜಯ್ ದೇವರಕೊಂಡ ಜೊತೆಗೆ ಖುಷಿ ಹಾಗೂ ಹಿಂದಿಯಲ್ಲಿ ಸಿಟಾಡೆಲ್ ಎಂಬ ವೆಬ್ ಸಿರೀಸ್ ಗಳ ಶೂಟಿಂಗ್ ಮುಗಿಸಿ ಇದೀಗ ಮತ್ತೆ ಚಿಕಿತ್ಸೆಗಾಗಿ ನ್ಯೂಯಾರ್ಕ್‌ಗೆ ಹೋಗಿದ್ದಾರೆ. ಒಂದು ವರ್ಷದ ಕಾಲ ಸಿನೆಮಾಗಳಿಗೆ ಬ್ರೇಕ್ ನೀಡಿ ಆಕೆ ತನ್ನ ಆರೋಗ್ಯದ ನಿಮಿತ್ತ ನ್ಯೂಯಾರ್ಕ್‌ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸಮಂತಾ ಆಗಿದ್ದಾಂಗೆ ತನ್ನ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಅಪ್ಡೇಟ್ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ನ್ಯೂಯಾರ್ಕ್‌ನಲ್ಲಿ ಸ್ಟೈಲಿಷ್ ಆಗಿರುವ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗೆ ಆಕೆ ಎಮೋಷನಲ್ ಕಾಮೆಂಟ್ ಮಾಡಿದ್ದಾರೆ. ಮಾನವ ಸಂಬಂಧಗಳ ಬಗ್ಗೆ ಆಕೆ ವೇದಾಂತ ನುಡಿದಿದ್ದಾರೆ. ಈ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೆ ಸಂಬಂಧ ಇದೆ. ನಮ್ಮ ಕೈಗಳು ಬಾವಲಿಗಳ ಕೈಗಳಂತಿವೆ. ನಮ್ಮ ಕಣಗಳು ಫೈನಾಪಲ್ ಕಣಳಂತಿದೆ, ನಮ್ಮ ಡಿ.ಎನ್.ಎ ಗೂ ಅಣಬೆಗಳೊಂದಿಗೆ ಸಂಬಂಧವಿದೆ. ಈ ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಮತ್ತೊಂದು ಜೀವಿಯೊಂದಿಗೆ ಸಂಬಂಧ ವಿರುತ್ತದೆ. ಆದರೆ ಕೊಂಚ ಹತ್ತಿರ ಇಲ್ಲವೇ ಕೊಂಚ ದೂರ ಅಷ್ಟೆ ನಾವೆಲ್ಲಾ ಒಂದೆ ಕಣದಿಂದ ಹುಟ್ಟಿದವರು ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಸಮಂತಾ ಹಂಚಿಕೊಂಡ ಪೋಸ್ಟ್ ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ಆರೋಗ್ಯ ಸಂಪೂರ್ಣವಾಗಿ ಗುಣಮುಖವಾಗುವವರೆಗೂ ಸಿನೆಮಾಗಳಿಂದ ದೂರವುಳಿಯಲಿದ್ದಾರಂತೆ. ಕೆಲವು ದಿನಗಳ ಹಿಂದೆಯಷ್ಟೆ ಸಮಂತಾ ತನ್ನ ತಾಯಿಯೊಂದಿಗೆ ನ್ಯೂಯಾರ್ಕ್‌ಗೆ ಹೋಗಿದ್ದಾರೆ. ನ್ಯೂಯಾರ್ಕ್‌ನಲ್ಲೇ ಆಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದೂ ಸಹ ಹೇಳಲಾಗಿದೆ. ಆದರೆ ಸಮಂತಾ ನ್ಯೂಯಾರ್ಕ್ ನಲ್ಲಿ ಪುಲ್ ಹ್ಯಾಪಿ ಮೋಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ತನ್ನ ಸ್ನೇಹಿತರೊಂದಿಗೆ ಸೇರಿ ನ್ಯೂಯಾರ್ಕ್‌ನಲ್ಲಿ ಸುತ್ತಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಚಿಕಿತ್ಸೆ ಸಮಯ ಬಿಟ್ಟು ಆಕೆ ಉಳಿದ ಸಮಯದಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಆಕೆಯ ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.