Film News

ನನಗೂ ಕುಟುಂಬ ಇದೆ ಟ್ರೋಲ್ ಮಾಡಬೇಡಿ, ಟ್ರೋಲ್ ಗಳಿಂದ ನನ್ನ ತಾಯಿ ಆರೋಗ್ಯ ಕೆಟ್ಟಿದೆ ಎಂದು ಕಣ್ಣೀರಾಕಿದ ಸೋನು ಗೌಡ….!

ಸೋಷಿಯಲ್ ಮಿಡಿಯಾ ಮೂಲಕ ಫೇಂ ಪಡೆದುಕೊಂಡ ಸೋನು ಗೌಡ ಬಿಗ್ ಬಾಸ್ ನಲ್ಲಿ ಹೋದ ಬಂದ ಬಳಿಕ ಮತಷ್ಟು ಫೇಂ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಆಕೆ ಎಷ್ಟು ಫೇಮಸ್ ಆದರೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದ್ದಾರೆ. ಇದೀಗ ಈ ಬಗ್ಗೆ ಟ್ರೋಲರ್‍ ಗಳ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ನನಗೂ ಕುಟುಂಬ ಇದೆ ಕೆಟ್ಟದಾಗಿ ಟ್ರೋಲ್ ಮಾಡಬೇಡಿ, ಕೆಟ್ಟ ಟ್ರೋಲ್ ಗಳಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ ಎಂದು ಸೋನು ಗೌಡ ಕಣ್ಣೀರಾಕಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ವಿಡಿಯೋ ಹಂಚಿಕೊಂಡಿರುವ ಸೋನು ಗೌಡ, ಇತ್ತಿಚಿಗೆ ನನ್ನ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ತುಂಬಾ ಕೆಟ್ಟ ರೀತಿಯಲ್ಲಿ ಕಾಮೆಂಟ್ ಗಳು ಬರುತ್ತಿದೆ. ಅದನ್ನು ನೋಡಿ ತುಂಬಾ ನೋವಾಗುತ್ತದೆ ಆದರೆ ನಾನು ಅದರ ಬಗ್ಗೆ ಯಾರೊಂದಿಗೂ ಶೇರ್‍ ಮಾಡಿಕೊಳ್ಳುವುದಿಲ್ಲ. ಆದರೆ ಎಲ್ಲದಕ್ಕೂ ಒಂದು ಲಿಮಿಟ್ ಅನ್ನೋದು ಇರುತ್ತದೆ. ಲಿಮಿಟ್ ಮೀರಿದರೇ ಎಲ್ಲರಿಗೂ ನೋವಾಗುತ್ತದೆ. ಕೆಲವು ದಿನಗಳಿಂದ ನನ್ನ ತಾಯಿ ಯೂಟ್ಯೂಬ್ ಚಾನಲ್ ನೋಡಿದ್ದಾರೆ. ನನ್ನ ವಿರುದ್ದ ಮಾಡಿದ ಕೆಲವೊಂದು ಟ್ರೋಲ್ ವಿಡಿಯೋಗಳನ್ನು ಸಹ ನೋಡಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಗಳನ್ನು ಮಾಡಿದ್ದು ಅದನ್ನು ಸಹ ಕೇಳಿಸಿಕೊಂಡಿದ್ದಾರೆ. ಮಾತಿಗೆ ಮುಂಚೆ ಬೀಪ್ ಪದಗಳನ್ನು ಸಹ ಬಳಸಿದ್ದಾರೆ. ಈ ವಿಡಿಯೋ ನಾನು ಕೇಳಿಸಿಕೊಂಡರೇ ನನಗೆ ಬೇಸರ ಆಗುತ್ತೆ ಅಂತಾ ಸೌಂಡ್ ಕಡಿಮೆ ಮಾಡಿಕೊಂಡು ನೋಡಿ ಅಳುತ್ತಿದ್ದರು. ನನಗೂ ಕೇಳಿಸಿದರೂ ಸುಮ್ಮನೆ ಇರುತ್ತಿದೆ.

ನನ್ನಿಂದ ನಮ್ಮ ಕುಟುಂಬದವರಿಗೆ ನೋವು ಕೊಡುತ್ತಿದ್ದೀರಾ, ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ನಾನು 20 ವರ್ಷದ ಹುಡುಗಿ ಇದ್ದಾಗ ತಿಳಿಯದೇ ಮಾಡಿದ ತಪ್ಪಿಗೆ ಈಗಲೂ ಶೀಕ್ಷೆ ಕೊಡುತ್ತಿದ್ದೀರಾ, ನಾಲ್ಕು ವರ್ಷ ಕಳೆದರೂ ನಾನು ಇನ್ನೂ ಅದರಿಂದ ಬೇಸರದಲ್ಲಿದ್ದೇನೆ. ನನ್ನ ಬಗ್ಗೆ ಹೆಚ್ಚು ನೆಗೆಟೀವ್ ಕಾಮೆಂಟ್ ಮಾಡುತ್ತಿರುವುದು ಹೆಣ್ಣು ಮಕ್ಕಳು. ಬೇರೆಯವರಿಗೆ ತೊಂದರೆ ಕೊಟ್ಟರೇ, ಕಳ್ಳತನ ಮಾಡಿದರೇ, ಹೊಡೆದರೇ ತಪ್ಪು. ನಾನು ಆ ರೀತಿ ಮಾಡಿದರೇ ನನ್ನ ಬಗ್ಗೆ ಮಾತನಾಡಿ. ನನ್ನ ವೈಯುಕ್ತಿಕ ಜೀವನದಲ್ಲಿ ಆದ ತಪ್ಪನ್ನು ನೀವು ಯಾಕೆ ಪಬ್ಲಿಕ್ ಮಾಡುತ್ತಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ನಾನು ಟ್ರೋಲ್ ಮಾಡಬೇಡಿ ಎನ್ನುತ್ತಿಲ್ಲ. ಆದರೆ ನನಗೂ ಕುಟುಂಬ ಇದೆ. ನನ್ನ ಟ್ರೋಲ್ ವಿಡಿಯೋಗಳನ್ನು ನೋಡಿ ನನ್ನ ತಾಯಿಯ ಆರೋಗ್ಯ ಸಹ ಕೆಟ್ಟಿದೆ.ಈಗಲೂ ಸಹ ಕೆಟ್ಟ ಟ್ರೊಲ್ ಗಳನ್ನ ನೋಡಿ ನಮ್ಮ ಕುಟುಂಬಸ್ಥರು ಸಹ ನನ್ನನ್ನು ಮಾತಾನಾಡುತ್ತಿಲ್ಲ. ನಾನು ತಪ್ಪು ಮಾಡಿದರೇ ಟ್ರೋಲ್ ಮಾಡಿ, ಆದರೆ ಬೇರೆ ಬೇರೆ ರೀತಿಯಲ್ಲಿ ಎಡಿಟ್ ಮಾಡಬೇಡಿ. ಇನ್ನೂ ಶೋಕಿ ಮಾಡುತ್ತೀಯಾ ಎಂದು ಅನೇಕರು ಕೇಳುತ್ತಾರೆ. ನಾವು ದಿನಸಿ ಹಣ್ಣು ತರಕಾರಿಗಳನ್ನು ಅನಾಥಾಶ್ರಮಕ್ಕೆ ನೀಡುತ್ತೇವೆ. ಆದರೆ ಅದನ್ನು ವಿಡಿಯೋ ಮಾಡೊಲ್ಲ. ಟ್ರೋಲ್ ಮಾಡುವುದರಿಂದ ನಮ್ಮ ಕುಟುಂಬ ನೋವು ಪಡುತ್ತಿದೆ. ದಯವಿಟ್ಟು ಇನ್ನೂ ಮುಂದೆ ಕೆಟ್ಟದಾಗಿ ಟ್ರೋಲ್ ಮಾಡಬೇಡಿ ಎಂದು ಕಣ್ಣೀರಾಕುತ್ತಾ ಮನವಿ ಮಾಡಿದ್ದಾರೆ.

Most Popular

To Top