News

ಮಳೆಯ ಬಗ್ಗೆ ಕೋಡಿ ಶ್ರೀಗಳ ಭವಿಷ್ಯ ಸುಳ್ಳಾಗುತ್ತಾ, ರಾಜ್ಯದಲ್ಲಿ ಆವರಿಸಿದ ಬರಗಾಲದ ಛಾಯೆ……!

ಭವಿಷ್ಯದಲ್ಲಿ ನಡೆಯುವಂತಹ ಅನೇಕ ವಿಚಾರಗಳ ಬಗ್ಗೆ ಭವಿಷ್ಯ ನುಡಿಯುತ್ತಿದ್ದಂತಹ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮಳೆಯ ಬಗ್ಗೆ ಈ ಹಿಂದೆ ಹೇಳಿದ ಭವಿಷ್ಯ ಸುಳ್ಳಾಗಲಿದೆಯೇ ಎಂಬ ಭಾವನೆ ಮೂಡಿದೆ. ರಾಜ್ಯದಲ್ಲಿ ಒಳ್ಳೆಯ ಮಳೆಯಾಗುತ್ತದೆ. ಅದು ಶ್ರಾವಣದಲ್ಲೇ ತಿಳಿಯುತ್ತದೆ ಎಂದು ಕೋಡಿ ಶ್ರಿಗಳು ಹೇಳಿದ್ದರು. ಆದರೆ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಕೋಡಿ ಶ್ರೀಗಳ ಭವಿಷ್ಯ ಸುಳ್ಳಾಗುತ್ತಾ ಎಂಬ ಅನುಮಾನ ಮನೆ ಮಾಡಿದೆ.

ಈ ವರ್ಷದಲ್ಲಿ ಭಾರಿ ಮಳೆಯಾಗುವ ಲಕ್ಷಣಗಳಿವೆ. ಬೇಕಾದಷ್ಟು ಮಳೆಯಾಗುತ್ತದೆ. ಈ ಹಿಂದೆ ಒಂದು ಭಾರಿ ಬಿದ್ದಂತಹ ಮಳೆ ಮತ್ತೊಮ್ಮೆ ಬೀಳಲಿದೆ. ಈ ವರ್ಷ ಮಳೆಗೆ ಏನೂ ತೊಂದರೆಯಾಗಲ್ಲ. ಕಾಲ ಹೇಳ್ತೀನಿ, ಮಳೆ ಬರುತ್ತೆ, ಅನ್ನಕ್ಕೆ ತೊಂದರೆಯಾಗಲ್ಲ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದರು.  ಆದರೆ ರಾಜ್ಯದಲ್ಲಿ ಮಾತ್ರ ಬರದ ಛಾಯೆ ಆವರಿಸಿದೆ. ಮಳೆಯ ಅಭಾವ ಕಾಡುತ್ತಿದೆ. ಕರ್ನಾಟಕದಲ್ಲಿ ಮಳೆಯ ಪ್ರಮಾಣ ತುಂಬಾನೆ ಕಡಿಮೆಯಾಗಿದೆ. ಮಾಹಿತಿಗಳ ಪ್ರಕಾರ ಕರ್ನಾಟಕದಲ್ಲಿ ಶೇ.14 ರಷ್ಟು ಮಳೆಯ ಕೊರತೆಯಾಗಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕುವ ಹಂತಕ್ಕೆ ತಲುಪಿದ್ದು, ಬರಪೀಡಿತ ಪ್ರದೇಶ ಘೋಷಣೆ ಮಾಡುವಂತೆ ಎಲ್ಲಾ ಕಡೆಯಿಂದ ಆಕ್ರೋಷ ಸಹ ವ್ಯಕ್ತವಾಗುತ್ತಿದೆ.

ಇನ್ನೂ ಮಳೆಯ ಅಭಾವದಿಂದ ಬರದ ಛಾಯೆ ಮೂಡಿದೆ. ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಬರಗಾಲದ ಘೋಷಣೆ ಮಾಡಬೇಕೆಂದು ಕೃಷಿ ಸಚಿವರೂ ಸಹ ಕೇಂದ್ರಕ್ಕೆ ಪತ್ರ ಸಹ ಬರೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಕೇಂದ್ರ ಬರಗಾಲದ ಮಾರ್ಗಸೂಚಿಯನ್ನು ಹೊರಡಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಕೇಂದ್ರದಿಂದ ಉತ್ತರ ಬರದೇ ಇದ್ದರೇ ಹಳೇಯ ಮಾರ್ಗಸೂಚಿಯಂತೆ ಬರಗಾಲ ಘೋಷಣೆ ಮಾಡುತ್ತೇವೆ ಎಂದು ಇತ್ತೀಚಿಗಷ್ಟೆ ಕರ್ನಾಟಕ ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದರು.

ಆದರೆ ಕೋಡಿ ಶ್ರೀಗಳು ಈ ಹಿಂದೆ ರಾಜ್ಯದಲ್ಲಿ ಈ ಹಿಂದೆ ಬಿದ್ದ ಮಾದರಿಯಲ್ಲೇ ಭಾರಿ ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಪ್ರಕೃತಿಯಿಂದಲೂ ಸಹ ಹಾನಿಯಿದೆ. ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಶ್ರಾವಣದಿಂದ ಕಾರ್ತಿಕದವರೆಗೂ ಮಳೆಯಾಗುತ್ತದೆ. ಜೊತೆಗೆ ಮಳೆಯಿಂದ ಮತ್ತೊಮ್ಮೆ ಅಪಾಯ ಆಗುವ ಲಕ್ಷಣಗಳು ಸಹ ಇದೆ ಎಂದಿದ್ದರು. ಇದೀಗ ರಾಜ್ಯದಲ್ಲಿ ಬರದ ಛಾಯೆ ಆವರಿಸುತ್ತಿದ್ದು ಕೋಡಿ ಶ್ರೀಗಳ ಭವಿಷ್ಯ ಸುಳ್ಳಾಗುತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

Most Popular

To Top