Film News

ಬಾಲ್ಯದ ನೋವಿನ ದಿನಗಳನ್ನು ನೆನಪಿಸಿಕೊಂಡ ಸಮಂತಾ, ಒಂದು ಹೊತ್ತು ಊಟಕ್ಕೆ ತುಂಬಾನೆ ಕಷ್ಟಪಟ್ಟಿದ್ದರಂತೆ….!

ಸ್ಟಾರ್‍ ನಟಿ ಸಮಂತಾ ಅನೇಕ ಮಹಿಳೆಯರಿಗೆ ಸ್ಪೂರ್ತಿ ಎಂದೇ ಹೇಳಬಹುದು, ತನ್ನ ಜೀವನದಲ್ಲಿ ಎದುರಾದ ಅನೇಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಕ್ಸಸ್ ಕಂಡುಕೊಂಡಿದ್ದಾರೆ. ಸದ್ಯ ಸಮಂತಾ ಸಿನೆಮಾಗಳಿಗೆ ಬ್ರೇಕ್ ಕೊಟ್ಟು ಆರೋಗ್ಯದ ಕಡೆ ಗಮನ ಹರಿಸಿದ್ದಾರೆ. ಆದರೆ ಆಕೆ ಕೆಲವೊಂದು ಈವೆಂಟ್ ಗಳು, ಇಂಟರ್‍ ವ್ಯೂ ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದ ಮೂಲಕ ತಮ್ಮ ಅಪ್ಡೇಟ್ಸ್ ನೀಡುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಇದೀಗ ಆಕೆ ಕಾರ್ಯಕ್ರಮವೊಂದರಲ್ಲಿ ತನ್ನ ಬಾಲ್ಯದ ನೋವಿನ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ತನ್ನ ಜೀವನದಲ್ಲಿ ಎದುರಾದಂತಹ ಕಷ್ಟಗಳನ್ನು ಆಕೆ ಹಂಚಿಕೊಂಡಿದ್ದಾರೆ. ಆಕೆ ಮಧ್ಯತರಗತಿ ಕುಟುಂಬದಲ್ಲಿ ಹುಟ್ಟಿದ್ದಳು. ಚಿಕ್ಕಂದಿನಿಂದಲೇ ಆಕೆ ತುಂಬಾನೆ ಕಷ್ಟಗಳನ್ನು ಎದುರಿಸಿದ್ದರಂತೆ. ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ ಉನ್ನತ ಶಿಕ್ಷಣ ಓದಲು ಆಗಲಿಲ್ಲ. ಕುಟುಂಬದ ನಿರ್ವಹಣೆಗಾಗಿ ಏನೇ ಕೆಲಸ ಸಿಕ್ಕರೂ ಮಾಡುತ್ತಿದ್ದೆ. ಓದುವ ಸಮಯದಲ್ಲಿ ಉದ್ಯೋಗ ಸಹ ಮಾಡಿದ್ದೆ. ಒಂದು ಸ್ಟಾರ್‍ ಹೋಟೆಲ್ ನಲ್ಲಿ ತಿಂಗಳಿಗೆ 500 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದೆ. ಅದೇ ನನ್ನ ಮೊದಲ ಸಂಪಾದನೆ ಎಂದು ಆಕೆ ಹೇಳಿದ್ದಾರೆ.

ಇನ್ನೂ ಆಕೆ ಅನುಭವಿಸಿದಂತಹ ಬಾಲ್ಯದ ಕಷ್ಟಗಳನ್ನು ನೆನಪಿಸಿಕೊಂಡು ಎಮೋಷನಲ್ ಆಗಿದ್ದಾರೆ. ಆಕೆಯ ಮಾತುಗಳನ್ನು ಕೇಳಿದ ಫ್ಯಾನ್ಸ್ ಸಹ ಭಾವೋದ್ವೇಗಕ್ಕೆ ಗುರಿಯಾಗಿದ್ದಾರೆ. ನಟಿ ಸಮಂತಾ ಸ್ಟಾರ್‍ ಹೋಟೆಲ್ ಮೂಲಕ ಕೆರಿಯರ್‍ ಆರಂಭಿಸಿ ಇದೀಗ ಇಂಡಿಯಾದಲ್ಲೇ ಟಾಪ್ ಹಿರೋಯಿನ್ ಆಗಿದ್ದಾರೆ. ಅನೇಕರು ಆಕೆಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ನಟಿಯಾದ ಬಳಿಕವೂ ಸಮಂತಾ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅದರಲ್ಲೂ ನಾಗಚೈತನ್ಯ ಜೊತೆಗೆ ಮದುವೆ, ವಿಚ್ಚೇದನ ಬಳಿಕ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದು, ಅದರಿಂದ ಆಕೆ ತುಂಬಾನೆ ಸಮಸ್ಯೆಗೆ ಗುರಿಯಾಗಿದ್ದರು.

ಸದ್ಯ ಸಮಂತಾ ಆರೋಗ್ಯದ ಕಾರಣದಿಂದ ಒಂದು ವರ್ಷದ ಕಾಲ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಇದೀಗ ಸಮಂತಾ ತುಂಬಾನೆ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಆಕೆ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ. ಕೊನೆಯದಾಗಿ ಆಕೆ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಶೀಘ್ರದಲ್ಲೇ ಸಿಟಾಡೆಲ್ ವೆಬ್ ಸಿರೀಸ್ ಮೂಲಕ ರಂಜಿಸಲಿದ್ದಾರೆ.

Most Popular

To Top