ಪತ್ನಿಗೆ ರೀಲ್ಸ್ ಹುಚ್ಚಂತೆ, ಪತಿಗೆ ನಾದಿನಿ ಮೇಲೆ ಮೋಜು, ನಡುರಾತ್ರಿ ಪತ್ನಿ ಮಗುವಿನ ಧಾರುಣ ಕೊಲೆ…..!

Follow Us :

ಪತ್ನಿಗೆ ರೀಲ್ಸ್ ಮಾಡುವ ಹುಚ್ಚು, ಪತಿಗೆ ನಾದಿನಿ ಮೇಲೆ ಮೋಜಿನ ಕಾರಣದಿಂದ, ನಾದಿನಿಯನ್ನು ಮದುವೆಯಾಗಬೇಕೆಂಬ ಉದ್ದೇಶದಿಂದ ಪತ್ನಿ ಹಾಗೂ ಹೆತ್ತಮಗಳನ್ನೇ ಕ್ರಿಕೆಟ್ ಬ್ಯಾಟ್ ನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಲಿತ್ ಪುರ್‍ ಎಂಬಲ್ಲಿ ನಡೆದಿದೆ. ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿ ದರೋಡೆ ಡ್ರಾಮಾ ಆಡುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಆದರೆ ಆತ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ.

ನಾದಿನಿಯ ಮೇಲೆ ಕಣ್ಣು ಹಾಕಿದ ಪಾಪಿ ನೀರಜ್ ಕುಶ್ವಾಹ್ ಎಂಬಾತನೆ ಕೊಲೆ ಮಾಡಿದ ಆರೋಪಿ ಎಂದು ಗುರ್ತಿಸಲಾಗಿದೆ. ಲಲಿತ್ ಪುರ್‍ ಸಾದರ್‍ ಕೊಟ್ವಾಲಿ ಎಂಬ ಪ್ರದೇಶದ ಚಾಂದ್ ಮಾರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ನೀರಜ್ ಆರು ಮಂದಿ ಮುಸುಕುಧಾರಿಗಳು ತಡರಾತ್ರಿ 1.30ಕ್ಕೆ ಮನೆಗೆ ನುಗ್ಗಿ ನನ್ನ ಬಾಯಿಗೆ ಸಾಕ್ಸ್ ತುರುಕಿ ನನ್ನ ಪತ್ನಿ ಹಾಗೂ ಮಗಳನ್ನು ಹೊಡೆದು ಕೊಲೆ ಮಾಡಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದರು ಎಂದು ನೀರಜ್ ದರೋಡೆ ಡ್ರಾಮಾ ಕಥೆ ಕಟ್ಟಿದ್ದ. ಈ ಬಗ್ಗೆ ನೀರಜ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಪೊಲೀಸರಿಗೆ ಆತ ಹೇಳಿಕೆ ನೀಡುತ್ತಿರುವ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಆರೋಪಿ ಹೇಳಿದ ಕಥೆಯನ್ನು ಪೊಲೀಸರು ನಂಬದೇ ವಿಚಾರಣೆ ಮಾಡಿದಾಗ ಅಸಲೀ ಸತ್ಯ ಹೊರಬಂದಿದೆ.

ಇನ್ನೂ ತನಿಖೆಯಲ್ಲಿ ಆರೋಪಿ ನೀರಜ್ ನನ್ನ ಪತ್ನಿ ಸೌಂದರ್ಯವತಿ ಆಕೆ ದಿನಪೂರ್ತಿ ರೀಲ್ಸ್ ಮಾಡುವುದರಲ್ಲೇ ಬ್ಯುಸಿಯಾಗಿದ್ದಳು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕರೊಂದಿಗೆ ಮಾತನಾಡುತ್ತಿದ್ದರು. ನನ್ನ ಮೇಲೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ ಆದ್ದರಿಂ ಆಕೆಯನ್ನು ಬಿಡಲು ನಿರ್ಧಾರ ಮಾಡಿದೆ. ಆಕೆಯ ಸಹೋದರಿಯನ್ನು ಮದುವೆಯಾಗಲು ಆಸೆಪಟ್ಟಿದೆ. ಆದರೆ ಇದನ್ನು ನನ್ನ ಪತ್ನಿ ವಿರೋಧಿಸುತ್ತಿದ್ದಳು. ಈ ವಿಚಾರವಾಗಿಯೇ ನಮ್ಮಿಬ್ಬರ ನಡುವೆ ಜಗಳ ನಡೆದಿತ್ತು ನಾನು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಸಾಯಿಸಿದೆ, ಬಳಿಕ ಇದನ್ನು ದರೋಡೆ ಎಂದು ನಂಬಿಸಲು ಕಥೆ ಕಟ್ಟಿದೆ ಎಂದು ಹೇಳಿದ್ದಾನೆ. ಆದರೆ ದರೋಡೆ ಡ್ರಾಮಾ ಆಡಿದಂತಹ ನೀರಜ್ ನನ್ನು ಪೊಲೀಸರು ಹಿಡಿದು ಸತ್ಯಾಂಶ ಬಯಲಿಗೆ ಎಳೆದಿದ್ದಾರೆ.