ದೇವರ ಸಿನೆಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್, ಎನ್.ಟಿ.ಆರ್ ರಗಡ್ ಲುಕ್ ಗೆ ಫಿದಾ ಆದ ಫ್ಯಾನ್ಸ್, ಮತಷ್ಟು ನಿರೀಕ್ಷೆ ಹೆಚ್ಚಿಸಿದ ಗ್ಲಿಂಪ್ಸ್….!

Follow Us :

ಗ್ಲೋಬಲ್ ಸ್ಟಾರ್‍  ಯಂಗ್ ಟೈಗರ್‍ ಎನ್.ಟಿ.ಆರ್‍ ಭಾರಿ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ವಿಶ್ವವಿಖ್ಯಾತ, ನಟ ಸಾರ್ವಭೌಮ ನಂದಮೂರಿ ತಾರಕರಾಮಾರಾವ್ ರವರ ಮೊಮ್ಮಗನಾಗಿ ಅವರ ವಾರಸತ್ವವನ್ನು ಮುಂದುವರೆಸುತ್ತಿದ್ದಾರೆ. RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆದ ಎನ್.ಟಿ.ಆರ್‍ ಅಭಿಮಾನಿಗಳ ಮೇಲೆ ತುಂಬಾ ಪ್ರೀತಿಯನ್ನು ಸಾರುತ್ತಾರೆ. ಸದ್ಯ ದೇವರ ಸಿನೆಮಾದಲ್ಲಿ ಎನ್.ಟಿ.ಆರ್‍ ಬ್ಯುಸಿಯಾಗಿದ್ದು, ಈ ಸಿನೆಮಾ ಫಸ್ಟ್ ಗ್ಲಿಂಪ್ಸ್ ಇದೀಗ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ಎನ್.ಟಿ.ಆರ್‍ ರವರ ರಗಡ್ ಲುಕ್ಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಯಂಗ್ ಟೈಗರ್‍ ಎನ್.ಟಿ.ಆರ್‍ ಸುಮಾರು ಎರಡು ದಶಕಗಳಿಂದ ಸೌತ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸುಮಾರು ಕೋಟ್ಯಂತರ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಅವರ ಮೇಲೆ ಅಭಿಮಾನಿಗಳು ಭಾರಿ ಪ್ರೀತಿಯನ್ನು ಸಹ ಇಟ್ಟುಕೊಂಡಿದ್ದಾರೆ. ಅದೇ ರೀತಿ ಎನ್.ಟಿ.ಆರ್‍ ಸಹ ತಮ್ಮ ಅಭಿಮಾನಿಗಳು ಎಂದರೇ ತುಂಬಾ ಪ್ರೀತಿ ತೋರುತ್ತಾರೆ. RRR ಸಿನೆಮಾದ ಬಳಿಕ ಎನ್.ಟಿ.ಆರ್‍ ದೇವರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಘೋಷಣೆಯಾದಾಗಿನಿಂದ ತುಂಬಾನೆ ನಿರೀಕ್ಷೆ ಹುಟ್ಟಿಸಿದೆ. ಇದೀಗ ಎನ್.ಟಿ.ಆರ್‍ ಅಭಿಮಾನಿಗಳ ಮೈ ನವಿರೇಳಿಸುವಂತಹ ಫಸ್ಟ್ ಗ್ಲಿಂಪ್ಸ್ ಚಿತ್ರತಂಡ ರಿಲೀಸ್ ಮಾಡಿದೆ. ಟ್ರೈಲರ್‍ ನಲ್ಲಿ ಎನ್.ಟಿ.ಆರ್‍ ಲುಕ್ಸ್, ಡೈಲಾಗ್ ಡಿಲಿವರಿ ಮಾತ್ರ ನೆಕ್ಟ್ ಲೆವೆಲ್ ಎಂದೇ ಹೇಳಲಾಗುತ್ತಿದೆ.

ದೇವರ ಸಿನೆಮಾದ ಫಸ್ಟ್ ಗ್ಲಿಂಪ್ಸ್ ನಲ್ಲಿ ಎನ್.ಟಿ.ಆರ್‍ ವಿಶ್ವರೂಪ ತೋರಿಸಿದ್ದಾರೆ ಎನ್ನಬಹುದಾಗಿದೆ. ಜೊತೆಗೆ ಮ್ಯೂಸಿಕ್ ಡೈರೆಕ್ಟರ್‍ ಅನಿರುದ್ ಸಹ ಇಂಗ್ಲೀಷ್ ಹಾಡಿನ ಮೂಲಕ ಆರಂಭವಾಗುತ್ತದೆ. ಸಮುದ್ರದಲ್ಲಿ ಹಡಗಿನಲ್ಲಿ ಸಮುದ್ರ ಕಳ್ಳರು ಕಳ್ಳತನ ಮಾಡಲು ಪ್ರಯತ್ನ ಮಾಡುತ್ತಿರುತ್ತಾರೆ. ಈ ವೇಳೆ ಎನ್.ಟಿ.ಆರ್‍ ಎಲ್ಲರನ್ನೂ ಕತ್ತರಿಸಿ ಸಮುದ್ರದ ದಡದಲ್ಲಿ ಹಾಕುತ್ತಾರೆ. ಇದರಿಂದಾಗಿ ಸಮುದ್ರ ಪೂರ್ಣವಾಗಿ ರಕ್ತದಿಂದ ಕೆಂಪಾಗುತ್ತದೆ. ಈ ವೇಳೆ ಸಮುದ್ರ ಮೀನುಗಳಿಗಿಂತ ಕತ್ತಿಗಳು ಹಾಗೂ ರಕ್ತವನ್ನೇ ಹೆಚ್ಚಾಗಿ ನೋಡಿದೆ. ಅದಕ್ಕೆ ಇದನ್ನು ಕೆಂಪು ಸಮುದ್ರ ಅಂತಾರೆ ಎಂದು ಎನ್.ಟಿ.ಆರ್‍ ಡೈಲಾಗ್ ಹೊಡೆಯುತ್ತಿದ್ದಾರೆ. ಈ ಡೈಲಾಗ್ ಡಿಲೆವರಿ ಮಾತ್ರ ಫ್ಯಾನ್ಸ್ ಕೈ ಮೇಲೆ ಕೂದಲು ಎದ್ದು ನಿಲ್ಲುವಂತಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ದೇವರ ಸಿನೆಮಾ ಘೋಷಣೆಯಾದಾಗಿನಿಂದ ತುಂಬಾನೆ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಬಿಡುಗಡೆಯಾದ ಫಸ್ಟ್ ಗ್ಲಿಂಪ್ಸ್ ಮೂಲಕ ಮತಷ್ಟು ನಿರೀಕ್ಷೆ ಏರಿದೆ. ಇನ್ನೂ ಈ ಸಿನೆಮಾದಲ್ಲಿ ಎನ್.ಟಿ.ಆರ್‍ ರವರಿಗೆ ಜೋಡಿಯಾಗಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ನಟಿಸುತ್ತಿದ್ದಾರೆ. ಬಾಲಿವುಡ್ ಸ್ಟಾರ್‍ ನಟ ಸೈಫ್ ಅಲಿ ಖಾನ್ ವಿಲನ್ ರೋಲ್ ಪ್ಲೇ ಮಾಡುತ್ತಿದ್ದಾರೆ.