ನಾಗಚೈತನ್ಯ ಹಾಗೂ ಶೋಭಿತಾ ಅಫೈರ್ ಬಗ್ಗೆ ನಾನು ಮಾತನಾಡಿಲ್ಲ ಎಂದ ಸಮಂತಾ, ಶಾಕಿಂಗ್ ಪೋಸ್ಟ್ ವೈರಲ್…..!

Follow Us :

ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ಬಳಿಕ ಅವರಿಬ್ಬರೂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಚ್ಚೇದನದ ಬಳಿಕ ನಾಗಚೈತನ್ಯ ಹಾಗೂ ಶೋಭಿತಾ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಸುಮಾರು ದಿನಗಳಿಂದ ಕೇಳಿಬರುತ್ತಿದೆ. ನಾಗಚೈತನ್ಯರ ಹೊಸ ಮನೆಗೆ ಅನೇಕ ಬಾರಿ ಶೋಭಿತಾರನ್ನು ಕರೆದುಕೊಂಡು ಹೋಗಿದ್ದರಂತೆ. ಅಲ್ಲೇ ಇಬ್ಬರೂ ಅನೇಕ ಬಾರಿ ಭೇಟಿಯಾಗುತ್ತಿದ್ದರಂತೆ ಎಂಬ ರೂಮರ್‍ ಗಳು ಕೇಳಿಬಂದಿತ್ತು. ಆದರೆ ಎಲ್ಲವೂ ಕೇವಲ ರೂಮರ್‍ ಗಳು ಮಾತ್ರ ಎಂದು ಚೈತನ್ಯ ಟೀಂ ಹೇಳಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ಲಂಡನ್ ನಲ್ಲಿ ಲೇಟ್ ನೈಟ್ ಡಿನ್ನರ್‍ ನಲ್ಲಿ ಭೇಟಿಯಾಗಿದ್ದಾಗಿ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

ಸದ್ಯ ಈ ಪೊಟೋ ಕಾರಣದಿಂದ ಅವರಿಬ್ಬರ ನಡುವೆ ರಿಲೇಷನ್ ಶಿಪ್ ಇದೆ ಎಂಬ ಸುದ್ದಿ ಮತಷ್ಟು ಬಲವಾಗಿ ಕೇಳಿಬರುತ್ತಿದೆ. ಇನ್ನೂ ಸಮಂತಾ ಸದ್ಯ ಶಾಕುಂತಲಂ ಸಿನೆಮಾದ ಪ್ರಮೋಷನ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ವೇಳೆ ಆಕೆ ಅನೇಕ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಚೈತನ್ಯ ಹಾಗೂ ಶೋಭಿತಾ ಅಫೈರ್‍ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಕೇಳಿಬರುತ್ತಿರುವ ಮಾಹಿತಿಯಂತೆ ಯಾರು ಯಾರೊಂದಿಗೆ ಬೇಕಾದರೂ ರಿಲೇಷನ್ ಶಿಪ್ ನಲ್ಲಿರಲಿ ನನಗೆ ಏನು ದುಃಖವಿಲ್ಲ. ಹೃದಯ ಇಲ್ಲದವರು ಎಷ್ಟೇ ಮಂದಿಯೊಂದಿಗೆ ಡೇಟಿಂಗ್ ಮಾಡಿದರೂ ಕೊನೆಗೆ ಕಣ್ಣೀರು ಉಳಿಯುತ್ತದೆ. ಆ ಹುಡುಗಿಯಾದರು ಸಂತೋಷದಿಂದ ಇರಲಿ ಎಂದು ಕೋರುತ್ತೇನೆ ಎಂದು ಸಮಂತಾ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸಮಂತಾ ನಾಗಚೈತನ್ಯ ಹಾಗೂ ಶೋಭಿತಾ ಅಫೈರ್‍ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಮಂತಾ ಸಹ ರಿಯಾಕ್ಟ್ ಆಗಿದ್ದು, ಆ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ಈ ಹೇಳಿಕೆಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಸಮಂತಾ ಶಾಕುಂತಲಂ ಪ್ರಮೋಷನ್ ನಿಮಿತ್ತ ನೀಡುತ್ತಿರುವ ಸಂದರ್ಶನಗಳಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪುಷ್ಪಾ ಸಿನೆಮಾದ ಐಟಂ ಸಾಂಗ್ ಮಾಡಬೇಡ ಎಂದು ಸಂಬಂಧಿಗಳು ಹೇಳಿದ್ದರು. ನಾನು ಸರಿಯಾಗಿದ್ದಾಗ ಯಾರ ಬಗ್ಗೆ ನನಗೆ ಚಿಂತೆಯಿಲ್ಲ ಎಂದು ಹೇಳಿದ್ದರು. ಇನ್ನೂ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ನಾನು ನೂರಕ್ಕೆ ನೂರರಷ್ಟು ಫರ್ಪೆಕ್ಟ್ ಆಗಿದ್ದೀನಿ ಎಂದೂ ಸಹ ಸಮಂತಾ ಹೇಳಿದ್ದರು.

ಇನ್ನೂ ಸಮಂತಾ ವಿಚ್ಚೇದನ ಹಾಗೂ ಮಯೋಸೈಟಿಸ್ ವ್ಯಾದಿಯಿಂದ ಹೊರಬಂದು ಇದೀಗ ಸಿನೆಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಆಕೆ ಅಭಿನಯದ ಶಾಕುಂತಲಂ ಸಿನೆಮಾ ಇದೇ ಏ.14 ರಂದು ತೆರೆಗೆ ಬರಲಿದ್ದು, ಪ್ರಮೋಷನ್ ಸಹ ಜೋರಾಗಿಯೆ ನಡೆಯುತ್ತಿದೆ. ಜೊತೆಗೆ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಮಂತಾ ಬಣ್ಣ ಹಚ್ಚಿದ್ದಾರೆ.