Film News

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಡಬಲ್ ಟ್ರೀಟ್, ರಶ್ಮಿಕಾ ಹುಟ್ಟುಹಬ್ಬಕ್ಕೆ 20 ಸೆಕೆಂಡ್ ಗ್ಲಿಂಪ್ಸ್….!

ತೆಲುಗು ಸಿನಿರಂಗದಲ್ಲಿ ಭಾರಿ ನಿರೀಕ್ಷೆಯಿಂದ ತೆರೆಗೆ ಬಂದು ಭಾರಿ ಸಕ್ಸಸ್ ಕಂಡುಕೊಂಡ ಸಿನೆಮಾಗಳಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನೆಮಾ ಒಂದಾಗಿದೆ. ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಗೆ ಬಂದ ಪುಷ್ಪಾ ಕೇವಲ ತೆಲುಗಿನಲ್ಲಿ ಮಾತ್ರವಲ್ಲದೇ ಎಲ್ಲಾ ಭಾಷೆಗಳಲ್ಲೂ ಭಾರಿ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಬಾಲಿವುಡ್ ನಲ್ಲೂ ಸಹ ಭಾರಿ ಅಭಿಮಾನಿಗಳನ್ನು ಪಡೆದುಕೊಂಡರು. ಇದೀಗ ಎಲ್ಲರ ಚಿತ್ತ ಪುಷ್ಪಾ-2 ಸಿನೆಮಾದ ಮೇಲಿದೆ. ಶೂಟಿಂಗ್ ಸಹ ನಿಧಾನವಾಗಿ ಪ್ರಾರಂಭವಾಗಿದ್ದು, ನಿಧಾನವಾಗಿಯೇ ಶೂಟಿಂಗ್ ನಡೆಯುತ್ತಿದೆ. ಸಿನೆಮಾದ ಅಪ್ಡೇಟ್ ಗಾಗಿ ಪುಷ್ಪಾ ಫ್ಯಾನ್ಸ್ ತುಂಬಾನೆ ಕಾಯುತ್ತಿದ್ದಾರೆ.

ಕೆಲವೊಂದು ಕಾರಣಗಳಿಂದ ಪುಷ್ಪಾ ಸಿನೆಮಾದ ಕಥೆಯಲ್ಲಿನ ಬದಲಾವಣೆ ಸೇರಿದಂತೆ ವಿವಿಧ ವಿಚಾರಗಳಿಗಾಗಿ ಸಿನೆಮಾ ತಡವಾಗಿ ಪ್ರಾರಂಭವಾಗಿತ್ತು. ಪುಷ್ಪಾ-2 ಅಪ್ಡೇಟ್ ಗಾಗಿ ಈ ಹಿಂದೆ ಅಭಿಮಾನಿಗಳು ಪ್ರೊಟೆಸ್ಟ್ ಸಹ ಮಾಡಿದ್ದರು. ಇದೀಗ ಪುಷ್ಪಾ-2 ಚಿತ್ರತಂಡ ಅಪ್ಡೇಟ್ ನೀಡಲು ಮುಂದಾಗಿದೆ. ಏ.8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದೆ. ಈ ಸಂದರ್ಭದಲ್ಲಿ ಬಿಗ್ ಸರ್ಪೈಸ್ ನೀಡಲು ಚಿತ್ರತಂಡ ಪ್ಲಾನ್ ಮಾಡಲಾಗಿದೆಯಂತೆ. ಇನ್ನೂ ಈ ಬಾರಿ ಎರಡು ಸರ್ಪೈಸ್ ನೀಡಲು ಪ್ಲಾನ್ ಮಾಡಲಾಗಿದೆಯಂತೆ. ಏ.7 ರಂದು ಪುಷ್ಪಾ-2 ಕಾನ್ಸೆಪ್ಟ್ ಟೀಸರ್‍ ಬಿಡುಗಡೆ ಮಾಡಲಾಗುತ್ತದೆಯಂತೆ, ಏ.8 ರಂದು ಅಲ್ಲು ಅರ್ಜುನ್ ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತದೆಯಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು. ಅದರ ಬಗ್ಗೆ ಚಿತ್ರತಂಡ ರಿಯಾಕ್ಟ್ ಆಗಿದೆ.

ಇನ್ನೂ ಪುಷ್ಪಾ ಚಿತ್ರತಂಡ ಅಪ್ಡೇಟ್ ಒಂದನ್ನು ನೀಡಿದ್ದು ಅಭಿಮಾನಿಗಳಲ್ಲಿ ಮತಷ್ಟು ನಿರೀಕ್ಷೆ ಹೆಚ್ಚಾಗಿದೆ. ತಿರುಪತಿ ಜೈಲಿನಿಂದ ಬುಲೆಟ್ ಗಾಯಗಳೊಂದಿಗೆ ತಪ್ಪಿಸಕೊಂಡ ಪುಷ್ಪಾ ಎಂಬ ಡೈಲಾಗ್ ಇರುವ 20 ಸೆಕೆಂಡ್ ಗಳ ಗ್ಲಿಂಪ್ಸ್ ರಿಲೀಸ್ ಮಾಡಿದೆ. ಇನ್ನೂ ಈ ವಿಡಿಯೋ ಪುಷ್ಪಾ ಎಲ್ಲಿ ಎಂಬ ಆಸಕ್ತಿ ಅಭಿಮಾನಿಗಳಲ್ಲಿ ಮತಷ್ಟು ಹೆಚ್ಚಾಗಿದೆ. ಇನ್ನೂ ಇದರ ಸಂಪೂರ್ಣ ವಿಡಿಯೋ ಏ.7 ರಂದು ಸಂಜೆ 4.05 ನಿಮಿಷಕ್ಕೆ ರಿಲೀಸ್ ಮಾಡಲಾಗುತ್ತದೆ ಎಂದೂ ಸಹ ಚಿತ್ರತಂಡ ಘೋಷಣೆ ಮಾಡಿದೆ. ಇನ್ನೂ ಈ ಅಪ್ಡೇಟ್ ನೋಡಿದ ಅಭಿಮಾನಿಗಳಲ್ಲಿ ಪುಷ್ಪಾಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ. ಇನ್ನೂ ಏ.7 ರಂದು ಬಿಡುಗಡೆಯಾಗಲಿರುವ ಪೂರ್ತಿ ಗ್ಲಿಂಪ್ಸ್ ಗಾಗಿ ಅಭಿಮಾನಿಗಳು ಈಗರ್‍ ಆಗಿ ಕಾಯುತ್ತಿದೆ. ಸದ್ಯ ಈ ಗ್ಲಿಂಪ್ಸ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಇಂದು ನಟಿ ರಶ್ಮಿಕಾ ಹುಟ್ಟುಹಬ್ಬವಾಗಿದ್ದು, ಅದರ ಭಾಗವಾಗಿಯೇ ಪುಷ್ಪಾ -2 ಸಿನೆಮಾ ತಂಡದಿಂದ ಈ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಇನ್ನೂ ಪುಷ್ಪಾ-2 ಸಿನೆಮಾವನ್ನು ಪ್ಯಾನ್ ವರ್ಲ್ಡ್ ಕ್ರೇಜ್ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಚಿತ್ರತಂಡ ಸಹ ಭಾರಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ.  ಜೊತೆಗೆ ಮೈತ್ರಿ ಮೂವಿ ಮೇಕರ್ಸ್ ಸಹ ಬಜೆಟ್ ವಿಚಾರದಲ್ಲಿ ಯಾವುದೇ ರಾಜಿಯಿಲ್ಲದಂತೆ ನಿರ್ಮಾಣ ಮಾಡುತ್ತಿದ್ದಾರೆ.

Most Popular

To Top