Film News

ಆಕ್ಸಿಜನ್ ಮಾಸ್ಕ್ ಹಾಕಿಕೊಂಡ ಸಮಂತಾ, ಸಮಂತಾ ಗೆ ಏನಾಗಿದೆ ಎಂದು ಆಂತಕದಲ್ಲಿ ಅಭಿಮಾನಿಗಳು…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕೆಲವು ದಿನಗಳ ಹಿಂದೆಯಷ್ಟೆ ಮಯೋಸೈಟಿಸ್ ಎಂಬ ಮಾರಕ ವ್ಯಾದಿಯಿಂದ ಬಳಲುತ್ತಿರುವುದಾಗಿ ಸದ್ಯ ಆ ವ್ಯಾದಿಯಿಂದ ಆಕೆ ಚೇತರಿಸಿಕೊಳ್ಳುತ್ತಿರುವುದಾಗಿ ಅಭಿಮಾನಿಗಳೊಂದಿಗೆ ವಿಚಾರ ಹಂಚಿಕೊಂಡಿದ್ದರು. ಕಳೆದ ಅಕ್ಟೋಬರ್‍ ಮಾಹೆಯಲ್ಲಿ ಆಕೆ ತನ್ನ ಈ ಆರೋಗ್ಯ ಸಮಸ್ಯೆಯನ್ನು ಹೊರಹಾಕಿದರು. ಇದೀಗ ಮತ್ತೊಮ್ಮೆ ಸಮಂತಾ ಅಭಿಮಾನಿಗನ್ನು ಆಂತಕದಲ್ಲಿಟ್ಟಿದ್ದಾರೆ. ಆಕ್ಸಿಜೆನ್ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ನೋಡಿದ ಅಭಿಮಾನಿಗಳು ಸಮಂತಾಗೆ ಏನಾಗಿದೆ ಎಂದು ಗಾಬರಿಗೊಳ್ಳುತ್ತಿದ್ದಾರೆ.

2022ರ ಅಕ್ಟೋಬರ್‍ ಮಾಹೆಯಲ್ಲಿ ಸಮಂತಾ ತಾನು ಅನುಭವಿಸುತ್ತಿರುವ ಮಯೋಸೈಟೀಸ್ ಎಂಬ ವ್ಯಾಧಿಯ ಬಗ್ಗೆ ತಿಳಿಸಿದ್ದರು. ಆ ಸಮಯದಲ್ಲಿ ಆಕೆ ನಟಿಸಿದ ಯಶೋಧ ಸಿನೆಮಾದ ಡಬ್ಬಿಂಗ್ ಸಹ ಮನೆಯಿಂದಲೇ ಮಾಡಿದ್ದರು. ಸಿನೆಮಾ ಪ್ರಮೋಷನ್ ಗಳಲ್ಲೂ ಸಹ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಸಿನೆಮಾದ ಸಂದರ್ಶನವೊಂದರಲ್ಲಿ ಮಾತ್ರ ಆಕೆ ಕಾಣಿಸಿಕೊಂಡಿದ್ದರು. ಸುಮಾರು ತಿಂಗಳುಗಳ ಕಾಲ ಆಕೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಕೆ ಅಜ್ಞಾತದಲ್ಲಿದ್ದಾಗ ಆಕೆಯ ಆರೋಗ್ಯದ ಬಗ್ಗೆ ಅನೇಕ ರೂಮರ್‍ ಗಳು ಸಹ ಹುಟ್ಟಿಕೊಂಡವು. ಆಕೆ ತನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿದ ಬಳಿಕ ಆಕೆಗೆ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅಭಿಮಾನಿಗಳು ಸಮಂತಾ ರವರಿಗೆ ಬೆಂಬಲ ಹಾಗೂ ಧೈರ್ಯ ತುಂಬಿದರು. ಆಕೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಇನ್ನೂ ಆಕೆ ಮಯೋಸೈಟೀಸ್ ನಿಂದ ಹೊರಬಂದು ಕಳೆದ ಮೂರು ತಿಂಗಳುಗಳಿಂದ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜೊತೆಗೆ ಬಲಿಷ್ಟವಾಗಲು ಜಿಮ್ ನಲ್ಲಿ ಭಾರಿ ಕಸರತ್ತುಗಳನ್ನು ಸಹ ಮಾಡಿದ್ದಾರೆ. ಇತ್ತೀಚಿಗೆ ತೆರೆಕಂಡ ಶಾಕುಂತಲಂ ಸಿನೆಮಾ ಪ್ರಮೋಷನ್ ಗಳಲ್ಲೂ ಸಹ ಆಕೆ ಸಕ್ರಿಯವಾಗಿ ಭಾಗಿಯಾಗಿದ್ದರು. ಇನ್ನೂ ಆಕೆ ಸಂರ್ಪೂಣವಾಗಿ ಗುಣಮುಖರಾಗಿಲ್ಲ ಎಂದೇ ಹೇಳಲಾಗುತ್ತಿದೆ. ಇದೀಗ ಆಕೆ ಸಡನ್ ಆಗಿ ಆಕ್ಸಿಜೆನ್ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾಋಎ. ಆಕೆಗೆ ಏನಾಗಿದೆ ಎಂದು ಎಲ್ಲರೂ ಆತಂಕಗೊಳ್ಳುತ್ತಿದ್ದಾರೆ. ಬಳಿಕ ಮತ್ತೊಂದು ಪೊಟೋದಲ್ಲಿ ಆಕೆ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಕೆ ಆ ಮಾಸ್ಕ್ ಧರಿಸಿದ್ದು ಹೈಪರ್ಬೇರಿಕ್ ಥೆರಪಿಗಾಗಿ ಆ ಮಾಸ್ಕ್ ಧರಿಸಿದ್ದಾರಂತೆ. ಇನ್ನೂ ಅದರ ಪ್ರಯೋಜನಗಳ ಬಗ್ಗೆ ಸಹ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಥೆರಪಿಯ ಕಾರಣದಿಂದ ಮಾಂಸಖಂಡಗಳ ಬಾವು, ಇನ್ಫೆಕ್ಷನ್ ಸಮಸ್ಯೆಗಳಿಂದ ಪಾರಾಗಬಹುದು. ಹಾಳಾದ ಮಾಂಸಖಂಡಗಳನ್ನು ಸರಿಮಾಡುತ್ತದೆ. ಮಯೋಸೈಟಿಸ್ ಕಾರಣದಿಂದ ಆಕೆ ಈ ಥೆರಪಿ ಫಾಲೋ ಮಾಡುತ್ತಿದ್ದಾರಂತೆ. ಇನ್ನೂ ಸಮಂತಾ ಸಿಟಾಡೆಲ್ ಹಾಗೂ ಖುಷಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತಿಚಿಗೆ ಆಕೆ ಕಾಣಿಸಿಕೊಂಡ ಶಾಕುಂತಲಂ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ.

Most Popular

To Top