ನನ್ನ ತಮನ್ನಾ ಹಿಂದೆ ನೀನು ಹೋಗುತ್ತಿದ್ದಿಯಾ ಎಂದು ವಿಜಯ್ ವರ್ಮಾ ಮೇಲೆ ಆಕ್ರೋಷಗೊಂಡ ಬಾಲಿವುಡ್ ನಟ……!

ಪ್ರಸಕ್ತ ವರ್ಷದ ಆರಂಭದಲ್ಲಿ ಸೌತ್ ಸಿನಿರಂಗದ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ರವರ ಲವ್ ಶುರುವಾಗಿದೆ ಎಂಬ ಸುದ್ದಿಯೊಂದು ಶುರುವಾಯ್ತು. ಅವರಿಬ್ಬರು ಹೊಸವರ್ಷದ ಸಂಭ್ರಮದ ವೇಳೆ ಲಿಪ್ ಲಾಕ್ ಮಾಡಿಕೊಂಡ ಕೆಲವೊಂದು ಪೊಟೊಗಳು ವಿಡಿಯೋಗಳು ಹೊರಬಂದವು. ಬಳಿಕ ಅವರಿಬ್ಬರ ಲವ್ ಬಗ್ಗೆ ಅನೇಕ ರೂಮರ್‍ ಗಳು ಹುಟ್ಟಿಕೊಂಡವು. ಆದರೆ ಈ ಸುದ್ದಿಗಳನ್ನು ತಮನ್ನಾ ಖಂಡಿಸಿ ಎಲ್ಲವೂ ಕೇವಲ ರೂಮರ್‍ ಗಳು ಮಾತ್ರ ಎಂದು ಹೇಳಿದ್ದರು. ಆದರೆ ಅವರಿಬ್ಬರ ನಡವಳಿಕೆ ಮಾತ್ರ ಅವರಿಬ್ಬರೂ ಲವ್ ನಲ್ಲಿದ್ದಾರೆ ಎಂಬ ಅನುಮಾನಗಳನ್ನು ಹುಟ್ಟಿಹಾಕುತ್ತಿವೆ.

ಸುಮಾರು ದಿನಗಳಿಂದ ಸೋಷಿಯಲ್ ಮಿಡಿಯಾ ಸೇರಿದಂತೆ ಸೌತ್ ಅಂಡ್ ನಾರ್ತ್‌ನಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಲವ್ ಬಗ್ಗೆ ಜೋರಾದ ಚರ್ಚೆಗಳು ನಡೆಯುತ್ತಲೇ ಇದೆ. ಈಗಾಗಲೇ ಕೆಲವೊಮ್ಮೆ ತಮನ್ನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಮ್ಮಿಬ್ಬರ ನಡುವೆ ಏನು ಇಲ್ಲ ಎಲ್ಲವೂ ಸುಳ್ಳು ಸುದ್ದಿಗಳು ಮಾತ್ರ ಎಂದು ಅವರ ಬಗ್ಗೆ ಸೃಷ್ಟಿಯಾದ ರೂಮರ್‍ ಗಳನ್ನು ಸಹ ತಳ್ಳಿಹಾಕಿದ್ದಾರೆ. ಆದರೆ ಅವರ ವರ್ತನೆ ಮಾತ್ರ ಅವರಿಬ್ಬರ ನಡುವೆ ಏನೋ ಇದೆ ಎಂಬ ಅನುಮಾನಗಳನ್ನು ಮೂಡಿಸುವಂತಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದೆರಡು ದಿನಗಳ ಹಿಂದೆಯಷ್ಟೆ ತಮನ್ನಾ ಹಾಗೂ ವಿಜಯ್ ವರ್ಮಾ ಇಬ್ಬರೂ ಒಂದೇ ಕಾರಿನಲ್ಲಿ ಡಿನ್ನರ್‍ ನೈಟ್ ಗೆ ಹೋಗಿದ್ದರು. ಈ ವೇಳೆ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿಬಿದ್ದಿದ್ದರು.

ಇದೀಗ ಬಾಲಿವುಡ್ ನಟ ಗುಲ್ಷಾನ್ ದೇವಯ್ಯ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವರು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ವಿಜಯ್ ವರ್ಮಾ ಅಭಿನಯದ ವೆಬ್ ಸಿರೀಸ್ ದಹಾದ್ ಟ್ರೈಲರ್‍ ಇದೇ ಮೇ.3 ರಂದು ಬಿಡುಗಡೆಯಾಗಲಿದ್ದು, ಇದರ ಸಂಬಂಧ ಪ್ರಮೋಷನಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋಗೆ ಬಾಲಿವುಡ್ ನಟ ಗುಲ್ಷಾನ್ ದೇವಯ್ಯ ಕಾಮೆಂಟ್ ಮಾಡಿದ್ದಾರೆ. ನಾ ತಮನ್ನಾ ಜೊತೆಗೆ ನೀನು ತಿರುಗಾಡುತ್ತಿದ್ದಿಯಾ, ಎಂತಹ ಏಟು ಕೊಟ್ಟೆ, ಇನ್ನೂ ವಾಸಿ ನನ್ನ ಮರ್ಯಾದೆ ತೆಗೆಯಲಿಲ್ಲ, ಇಲ್ಲವಾದಲ್ಲಿ ಏನಾಗುತ್ತಿತ್ತೋ, ದೇವರೇ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಕಾಮೆಂಟ್ ಸಿನಿವಲಯದಲ್ಲಿ ಸಂಚಲನವನ್ನು ಸೃಷ್ಟಿಮಾಡಿದೆ.

ಇನ್ನೂ ಗುಲ್ಷಾನ್ ದೇವಯ್ಯ ಮಾಡಿದ ಈ ಕಾಮೆಂಟ್ ಕಾರಣದಿಂದ ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬುದನ್ನು ದೃಢೀಕರಿಸಿದಂತಿದೆ. ಇನ್ನೂ ಈ ಕದ್ದು ಮುಚ್ಚಿ ಲವ್ ಮಾಡುವುದು ಏಕೆ. ಬಹಿರಂಗವಾಗಿ ಹೇಳಬಹುದಲ್ಲವೇ ಎಂದು ಅನೇಕರು ಸಲಹೆ ಗಳನ್ನು ನೀಡುತ್ತಿದ್ದಾರೆ. ಇನ್ನೂ ತಮನ್ನಾ ಹಾಗೂ ವಿಜಯ್ ವರ್ಮಾ ಅಫೈರ್‍ ಬಗ್ಗೆ ಎಂದು ಕ್ಲಾರಿಟಿ ಸಿಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.