Film News

ಸುಸ್ತಾಗುತ್ತಿದ್ದರು ಪಟ್ಟು ಬಿಡದೇ ವರ್ಕೌಟ್ ಮಾಡುತ್ತಿರುವ ಸಮಂತಾ, ವೈರಲ್ ಆದ ವಿಡಿಯೋ…..!

ಸೌತ್ ಸ್ಟಾರ್‍ ನಟಿ ಸಮಂತಾ ಮಯೋಸೈಟೀಸ್ ವ್ಯಾಧಿಗೆ ಗುರಿಯಾದ ಬಳಿಕ ಮೊದಲಿಗಿಂತ ಹೆಚ್ಚಾಗಿ ಆರೋಗ್ಯದ ಮೇಲೆ ಕಾಳಜಿ ವಹಿಸುತ್ತಿದ್ದಾರೆ. ಜಿಮ್ ನಲ್ಲಿ ಹೆವಿ ವರ್ಕೌಟ್ಸ್ ಮಾಡುತ್ತಿದ್ದಾರೆ. ಜಿಮ್ ನಲ್ಲಿ ತುಂಬಾ ಕಷ್ಟಕರವಾದಂತಹ ಆಸನಗಳನ್ನು ಮಾಡುತ್ತಿದ್ದಾರೆ. ಇದೀಗ ಆಕೆ ಸುಸ್ತಾದರೂ ಸಹ ಪಟ್ಟು ಬಿಡದೇ ವರ್ಕೌಟ್ ಮಾಡುತ್ತಿದ್ದು, ಈ ಸಂಬಂಧ ವಿಡಿಯೋ ಒಂದನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಮಯೋಸೈಟಿಸ್ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಗುಣಮುಖರಾಗಲು ಸಿನೆಮಾಗಳಿಂದ ಸಹ ಬ್ರೇಕ್ ಪಡೆದುಕೊಂಡಿದ್ದಾರೆ. ಜೊತೆಗೆ ಯೋಗಾ, ಆಧ್ಯಾತ್ಮಿಕ ಕೇಂದ್ರಗಳಿಗೆ ಸಹ ಭೇಟಿ ನೀಡುತ್ತಿರುತ್ತಾರೆ. ಜಿಮ್ ನಲ್ಲೂ ಸಹ ಹೆವಿ ವರ್ಕೌಟ್ಸ್ ಮಾಡುತ್ತಿರುತ್ತಾರೆ. ಇದಿಗ ಜಿಮ್ ನಲ್ಲಿ ಕಷ್ಟಕರವಾದ ವರ್ಕೌಟ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಆಕೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಸಮಂತಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಆಕೆ ಬ್ಲಾಕ್ ಕಲರ್‍ ಟೈಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಮಂತಾ ಮೊದಲಿಗಿಂತ ಫಿಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಮಯೋಸೈಟಿಸ್ ಕಾರಣದಿಂದ ಆಕೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಮೆಟ್ಟಿ ನಿಂತಲು ಕಠಿಣ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಸಮಂತಾ ಈಗಾಗಲೇ ಸಿನೆಮಾಗಳಿಂದಲೂ ಸಹ ದೂರ ಇದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಗ್ಲಾಮರಸ್ ಪೊಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೊನೆಯದಾಗಿ ಆಕೆ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಶಾಕುಂತಲಂ ಸಿನೆಮಾ ಮಾತ್ರ ಆಲ್ ಟೈಂ ಡಿಜಾಸ್ಟರ್‍ ಆಗಿತ್ತು. ಆದರೆ ಖುಷಿ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡಿದೆ. ಇನ್ನೂ ಸಮಂತಾ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ಶಾಶ್ವತವಾಗಿ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂದು ಸಹ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

Most Popular

To Top