Film News

I am not single parent ಎಂದ ಇಲಿಯಾನಾ, ಪತಿಯನ್ನು ಪರಿಚಯಿಸುವ ಮೂಲಕ ಟ್ರೋಲರ್ ಗಳಿಗೆ ಕೌಂಟರ್ ಕೊಟ್ಟ ನಟಿ……!

ನಟಿ ಇಲಿಯಾನಾ ಇತ್ತೀಚಿಗೆ ತಾನು ಗರ್ಭಿಣಿಯೆಂಬ ಸುದ್ದಿಯ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆ ಗರ್ಭಕ್ಕೆ ತಂದೆ ಯಾರು ಎಂಬುದನ್ನು ತಿಳಿಸಿದೇ ಆಕೆ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಬಳಿಕ ಆಕೆ ಗರ್ಭಿಣಿಯೆಂಬುದಾಗಿ ಅನೇಕ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಕೆಲವು ದಿನಗಳಿಂದ ಆಕೆ ತನ್ನ ಬೇಬಿ ಬಂಪ್ ಶೋ ಮಾಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಇಲಿಯಾನಾ ಸಿಂಗಲ್ ಪೇರೆಂಟ್ ತಂದೆಯಿಲ್ಲ ಎಂಬ ಟ್ರೋಲ್ ಗಳು ಹೆಚ್ಚಾಗಿದ್ದು, ಟ್ರೋಲರ್‍ ಗಳಿಗೆ ಇಲಿಯಾನಾ ಸರಿಯಾಗಿ ಕೌಂಟರ್‍ ಕೊಟ್ಟಿದ್ದಾರೆ.

ದೇವದಾಸು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇಲಿಯಾನಾ ಕಡಿಮೆ ಸಮಯದಲ್ಲೇ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಟಾಲಿವುಡ್ ನಲ್ಲಿ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಂಡು ಸ್ಟಾರ್‍ ನಟಿಯಾದರು. ಆಕೆಯ ಕೆರಿಯರ್‍ ಸಕ್ಸಸ್ ಆಗಿರುವ ಸಮಯದಲ್ಲೇ ಆಕೆ ತೆಗೆದುಕೊಂಡಂತಹ ಕೆಲವೊಂದು ತಪ್ಪು ನಿರ್ಣಯಗಳಿಂದ ಆಕೆಯ ಸಿನಿ ಕೆರಿಯರ್‍ ಹಾಳಾಯ್ತು. ಇನ್ನೂ ಸುಮಾರು ದಿನಗಳಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆಕ್ಟೀವ್ ಆಗಿಯೇ ಇದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮದುವೆಯಾಗದೇ ತಾನು ಗರ್ಭಿಣಿ ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಎಲ್ಲರೂ ಶಾಕ್ ಆಗಿದ್ದರು. ಬಳಿಕ ಆಕೆ ತನ್ನ ಬೇಬಿ ಬಂಪ್ಸ್ ಜೊತೆಗೆ ಕ್ರೇಜಿ ಕಾಮೆಂಟ್ ಗಳ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ.

ನಟಿ ಇಲಿಯಾನಾ ಮದುವೆಗೂ ಮುಂಚೆಯೇ ಗಂಡು ಮಗುವಿಗೆ ಜನ್ಮ ಕೊಟ್ಟರು. ಈ ಕಾರಣದಿಂದ ಆಕೆಯನ್ನು ಅನೇಕರು ಟ್ರೋಲ್ ಮಾಡಿದರು. ತಂದೆ ಯಾರು ಎಂಬುದನ್ನು ನಿಗೂಡವಾಗಿಯೇ ಇಟ್ಟಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಮಗುವಿನ ಹೆಸರು ಹಾಗೂ ಮುಖವನ್ನು ಸಹ ರಿವೀಲ್ ಮಾಡಿದ್ದರು. ಆದರೆ ತಂದೆ ಯಾರು ಎಂಬ ವಿಚಾರ ಮಾತ್ರ ನಿಗೂಡವಾಗಿಯೇ ಇಟ್ಟಿದ್ದರು. ಇದೀಗ ಆಕೆ ಆ ಸಸ್ಪೆನ್ಸ್ ಗೆ ತೆರೆ ಎಳೆದಿದ್ದಾರೆ. ಟ್ರೋಲರ್‍ ಗಳ ಬಾಯಿ ಮುಚ್ಚಿಸುವ ನಿಟ್ಟಿನಲ್ಲಿ ಆಕೆ ತನ್ನ ಮಗುವಿನ ತಂದೆ ಯಾರು ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇತ್ತೀಚಗಷ್ಟೆ ಆಕೆ ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತನ್ನ ಪತಿ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ. ಈ ಹಿಂದೆ ಆಕೆ ಡೇಟ್ ನೈಟ್ ಎಂದು ಓರ್ವ ವ್ಯಕ್ತಿಯೊಂದಿಗೆ ಇದ್ದಂತಹ ಪೊಟೋಗಳನ್ನು ಹಂಚಿಕೊಂಡಿದ್ದರು. ಆದರೆ ಆತ ಯಾರು ಎಂಬ ವಿಚಾರವನ್ನು ಮಾತ್ರ ಹೇಳಿರಲಿಲ್ಲ. ಇದೀಗ ತನ್ನ ಪತಿಯನ್ನು ಪರಿಚಯಿಸಿದ್ದಾರೆ. ನೆಟ್ಟಿಗರಿಂದ ಬರುತ್ತಿದ್ದ ವಿಮರ್ಶೆಗಳಿಗೆ ಉತ್ತರ ನೀಡಿದ್ದಾರೆ. ನಾನು ಸಿಂಗ್ ಪೇರೆಂಟ್ ಅಲ್ಲ ಎಂದು ತನ್ನ ಮಗನ ತಂದೆ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ. ಆ ಮೂಲಕ ತಮ್ಮ ವಿರುದ್ದ ಬಂದಂತಹ ವಿಮರ್ಶೆಗಳಿಗೆ ಸರಿಯಾಗಿ ಕೌಂಟರ್‍ ಕೊಟ್ಟಿದ್ದಾರೆ.

ಇದರ ಜೊತೆಗೆ ಶೀಘ್ರದಲ್ಲೇ ಮತ್ತೆ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಡುತ್ತೇನೆ. ಸದ್ಯ ನಾನು ತಾಯ್ತನದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಆಕೆಯ ಈ ಉತ್ತರದಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೂ ಸಹ ಇಲಿಯಾನಾ ಪತಿ ಯಾರು, ಆತ ಏನು ಮಾಡುತ್ತಾನೆ ಎಂಬ ಪ್ರಶ್ನೆಗಳು ಮೂಡಿದೆ.

Most Popular

To Top