News

ಆಸ್ಪತ್ರೆಯಲ್ಲಿದ್ದ ಮಹಿಳೆಯ ಮಗುವಿಗೆ ಹಾಲುಣಿಸಿದ ಪೊಲೀಸ್ ಅಧಿಕಾರಿ, ವೈರಲ್ ಆದ ವಿಡಿಯೋ, ಎಲ್ಲರಿಂದ ಮೆಚ್ಚುಗೆ…..!

ಆಸ್ಪತ್ರೆಯಲ್ಲಿದ್ದ ಮಹಿಳೆಯೊಬ್ಬರ ಮಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಹಾಲುಣಿಸುವ ಮೂಲಕ ಮಾನವೀಯತೆ ಮೆರೆದ ಘಟನೆಯೊಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ಒಂದನ್ನು ಕೇರಳ ಪೊಲೀಸ್ ಅಧಿಕಾರಿಯೊಬ್ಬರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ ಪೊಲೀಸ್ ಅಧಿಕಾರಿಯ ಈ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೇರಳದ ಕೊಚ್ಚಿಯ ಆಸ್ಪತ್ರೆಯೊಂದರಲ್ಲಿ ಬಿಹಾರ ಮೂಲದ ಮಹಿಳೆಯೊಬ್ಬರು ದಾಖಲಾಗಿದ್ದರು. ಎರ್ನಾಕುಲಂ ನಲ್ಲಿರುವ ಜನರಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಯ ಪತಿ ಸಹ ಪ್ರಕರಣವೊಂದರ ಕಾರಣದಿಂದ ಜೈಲಿನಲ್ಲಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಕಾರಣದಿಂದ ಆ ಮಹಿಳೆಯ ನಾಲ್ವರು ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಆ ಮಕ್ಕಳನ್ನು ಕೊಚ್ಚಿಯ ನಗರ ಮಹಿಳಾ ಠಾಣೆಗೆ ಕರೆತರಲಾಗಿತ್ತು. ಆಕೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಹಸಿವಿನಿಂದ ಶಿಶು ನಿರಂತರವಾಗಿ ಅಳುತ್ತಿತ್ತು. ಅದನ್ನು ಕಂಡ ಪೊಲೀಸ್ ಅಧಿಕಾರಿ ಆರ್ಯ ಅಳುತ್ತಿದ್ದ 4 ತಿಂಗಳ ಮಗುವಿಗೆ ಎದೆ ಹಾಲು ಕುಡಿಸಿ, ಮಗುವಿಗೆ ಸಮಾಧಾನ ಮಾಡಿ ನಿದ್ದೆ ಮಾಡಿಸಿದ್ದಾರೆ.

ಇನ್ನೂ ಕೊಚ್ಚಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂ.ಎ. ಆರ್ಯ ಸಹ 9 ತಿಂಗಳ ಮಗುವಿನ ತಾಯಿಯಾಗಿದ್ದಾರೆ. ಮಗು ಅಳುತ್ತಿರುವುದನ್ನು ಕಂಡ ತಾಯಿ ಹೃದಯ ಕರಗಿದೆ. ಬಳಿಕ ಅಧಿಕಾರಿ ಮಗುವಿಗೆ ಹಾಲುಣಿಸಿದ್ದಾರೆ. ಇನ್ನೂ ಈ ವಿಡಿಯೋ ಒಂದನ್ನು ಅಧಿಕಾರಿಯೊಬ್ಬರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಎಲ್ಲಾ ಕಡೆಯಿಂದ ಪೊಲೀಸ್ ಅಧಿಕಾರಿಯ ಕೆಲಸಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Most Popular

To Top