Film News

ಸಮಂತಾ ವಂಡರ್ ಪುಲ್ ಲೇಡಿ ಎಂದು ಮನಸಾರೆ ಹೊಗಳಿದ ನಟಿ ರಶ್ಮಿಕಾ ಮಂದಣ್ಣ, ವೈರಲ್ ಆದ ಕಾಮೆಂಟ್ಸ್…..!

ದೇಶದ ಸಿನಿರಂಗದ ಖ್ಯಾತ ನಟಿಯರಲ್ಲಿ ಸಮಂತಾ ಸಹ ಒಬ್ಬರಾಗಿದ್ದಾರೆ. ಆಕೆ ತಮ್ಮ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡು ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಅನೇಕ ನಟಿಯರು ಸಮಂತಾ ನಮಗೆ ಸ್ಪೂರ್ತಿ ಎಂದೂ ಸಹ ಹೇಳಿದ್ದಾರೆ. ಇದೀಗ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಹ ಸಮಂತಾ ರವರ ವ್ಯಕ್ತಿತ್ವವನ್ನು ಮನಸಾರೆ ಹೊಗಳಿದ್ದಾರೆ. ಸೌತ್ ಅಂಡ್ ನಾರ್ತ್ ನಲ್ಲಿ ಪುಲ್ ಬ್ಯುಸಿಯಾಗಿರುವ ರಶ್ಮಿಕಾ ಸಂದರ್ಶನವೊಂದರಲ್ಲಿ ಸಮಂತಾ ರವರ ಬಗ್ಗೆ ಮಾತನಾಡಿದ್ದು, ಅವರ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಸಿನೆಮಾಗಳ ಮೂಲಕ ಫೇಮಸ್ ಆಗಿ ಕನ್ನಡ ಸಿನೆಮಾಗಳನ್ನೇ ಆಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಕಾರಣದಿಂದ ಆಕೆಯನ್ನು ಆಗಾಗ ಬ್ಯಾನ್ ಮಾಡಬೇಕು ಎಂಬ ಮಾತುಗಳು ಸಹ ಕೇಳಿಬರುತ್ತಿರುತ್ತವೆ. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಭಾರಿ ಸಿನೆಮಾಗಳಲ್ಲಿ ನಟಿಸುತ್ತಾ ದಿನೇ ದಿನೇ ಪಾಪ್ಯುಲರ್‍ ಆಗುತ್ತಿದ್ದಾರೆ. ಇನ್ನೂ ಆಕೆ ಹೆಚ್ಚಾಗಿ ತೆಲುಗು ಹಾಗೂ ಹಿಂದಿ ಸಿನೆಮಾಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿರುತ್ತಾಳೆ.  ಕನ್ನಡದಲ್ಲಿ ಸಿನೆಮಾಗಳನ್ನು ಮಾಡುವುದನ್ನೇ ಅವರು ಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ರಶ್ಮಿಕಾ ಆಗಾಗ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಕೆಲವು ದಿನಗಳ ಹಿಂದೆ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲೂ ಸಮಂತಾ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆ ರಶ್ಮಿಕಾಗೆ ಎದುರಾಗಿದೆ. ಈ ಪ್ರಶ್ನೆಗೆ ರಶ್ಮಿಕಾ ಉತ್ತರಿಸುತ್ತಾ ಸಮಂತಾ ಅವರು ತುಂಬಾ ವಂಡರ್‍ ಪುಲ್ ಲೇಡಿ, ಅವರು ಗ್ರೇಸ್ ಪುಲ್. ಅವರು ಒಳ್ಳೆಯ ಹೃದಯವಂತರು. ಒಳ್ಳೆಯ ಭಾವನೆಗಳನ್ನು ಹೊಂದಿದ್ದಾರೆ. ನಾನು ಅವರನ್ನು ಪ್ರೊಟೆಕ್ಟ್ ಮಾಡಲು ಇಷ್ಟಪಡುತ್ತೇನೆ. ಸಮಂತಾ ರವರ ಬಗ್ಗೆ ಗೇಳಬೇಕೆಂದರೇ ನಾನು ಅವರನ್ನು ರಕ್ಷಿಸುವ ತಾಯಿಯಂತೆ ಇರಲು ಬಯಸುತ್ತೇನೆ. ಅವರ ಗುಣಗಳ ಬಗ್ಗೆ ಹೇಳುತ್ತಾ ಹೋದರೇ ಒಂದು ದೊಡ್ಡ ಚೀಲದ ಮೂಟೆಯಾಗುತ್ತದೆ ಎಂದು ಸಮಂತಾ ರವರನ್ನು ಗುಣಗಾಣ ಮಾಡಿದ್ದಾರೆ. ಇನ್ನೂ ರಶ್ಮಿಕಾ ಹಂಚಿಕೊಂಡ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ಹಾಗೂ ರಶ್ಮಿಕಾ ಒಂದೇ ಸಿನೆಮಾದಲ್ಲಿ ನಟಿಸಿದ್ದರು. ಪುಷ್ಪಾ ಸಿನೆಮಾದಲ್ಲಿ ಸಮಂತಾ ಸ್ಪೇಷಲ್ ಹಾಡಾದ ಹೂ ಅಂಟಾವಾ ಮಾವಾ ಎಂಬ ಹಾಡಿನಲ್ಲಿ ಹೆಜ್ಜೆ ಹಾಕಿ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದರು. ಈ ಹಾಡು ವಿಶ್ವ ಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ. ಇನ್ನೂ ರಶ್ಮಿಕಾ ಕೊನೆಯದಾಗಿ ಅನಿಮಲ್ ಎಂಬ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದೆ. ರಶ್ಮಿಕಾ ಕೈಯಲ್ಲಿ ಅನೇಕ ಸಿನೆಮಾಗಳು ಇದ್ದು, ಪುಲ್ ಬ್ಯುಸಿಯಾಗಿದ್ದಾರೆ.

Most Popular

To Top