ಪಾಕಿಸ್ತಾನ ಪರ ಘೋಷಣೆ, ಮೂವರ ಅರೆಸ್ಟ್, ಎಫ್.ಎಸ್.ಎಲ್ ಬಂದಿಲ್ಲ ಎನ್ನುತ್ತಲೇ ಮೂವರನ್ನು ಬಂಧಿಸಿದ ಸರ್ಕಾರದ ನಡೆಯ ಬಗ್ಗೆ ಅನುಮಾನ?

Follow Us :

ರಾಜ್ಯದಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡಿದಂತಹ ಘಟನೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಎನ್ನಬಹುದಾಗಿದೆ. ಈ ಘಟನೆಯ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ಟಾಕ್ ವಾರ್‍ ಸಹ ಜೋರಾಗಿಯೇ ನಡೆಯುತ್ತಿದೆ. ಇನ್ನೂ ಸರ್ಕಾರದಿಂದ ಈ ವಿಡಿಯೋದ ಎಫ್.ಎಸ್.ಎಲ್ ರಿಪೋರ್ಟ್ ಬಂದಿಲ್ಲ ಎಂದು ಹೇಳಲಾಗುತ್ತಿದ್ದು, ಈ ನಡುವೆಯೇ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸರ್ಕಾರದ ಈ ನಡೆಯ ಬಗ್ಗೆ ಅನೇಕ ಅನುಮಾನಗಳು ಮೂಡುವಂತೆ ಮಾಡಿದೆ ಎನ್ನಲಾಗುತ್ತಿದೆ.

ಸದ್ಯ ಪೊಲೀಸರು ಬಂಧನ ಮಾಡಿದವರ ಪೈಕಿ ದೆಹಲಿ ಮೂಲದ ಇಲ್ತಾಜ್, ಆರ್‍.ಟಿ. ನಗರದ ಮುನಾವರ್‍ ಹಾಗೂ ಬ್ಯಾಡಗಿ ಮೂಲದ ಮೊಹಮದ್ ಶಪಿ ನಾಶಿ ಪುಡಿ ಎಂಬ ಮೂರು ಮಂದಿಯನ್ನು ಬಂಧಿಸಿದ್ದಾರೆ. ಈ ಕುರಿತು ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಮಾದ್ಯಮ ಪ್ರಕಟನೆ ಮೂಲಕ ಖಚಿತಪಡಿಸಿದ್ದಾರೆ. ಇದೆಲ್ಲಾ ಒಂದು ಕಡೆಯಾದರೇ ಸರ್ಕಾರ ಇನ್ನೂ ಎಫ್.ಎಸ್.ಎಲ್ ವರದಿ ಬಂದಿಲ್ಲ ಎಂದು ಹೇಳುತ್ತಳೇ ಪೊಲೀಸರು ಏಕಾಏಕಿ ಮೂರು ಮಂದಿಯನ್ನು ಬಂಧನ ಮಾಡಿದ್ದಾರೆ. ಇದೀಗ ಎಫ್.ಎಸ್.ಎಲ್ ವರದಿ ಬಂದಿದ್ದರೂ ಅದನ್ನು ಸರ್ಕಾರ ಮುಚ್ಚಿಟ್ಟಿದೆಯೇ, ಎಫ್.ಎಸ್.ಎಲ್ ವರದಿಯನ್ನು ಯಾಕೆ ಬಹಿರಂಗಪಡಿಸಿಲ್ಲ ಎಂಬೆಲ್ಲಾ ಪ್ರಶ್ನೆಗಳ ಜೊತೆಗೆ ಸರ್ಕಾರದ ನಡೆಯ ವಿರುದ್ದ ಹಲವು ಅನುಮಾನಗಳು ಮೂಡುವಂತೆ ಮಾಡಿದೆ ಎನ್ನಲಾಗುತ್ತಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಂತಹ ಕಾಂಗ್ರೆಸ್ ಅಭ್ಯರ್ಥಿ ನಾಸೀರ್‍ ಹುಸೇನ್ ಬೆಂಬಲಿಗರು ವಿಜಯೋತ್ಸವದ ಸಮಯದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದರು ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ಈ ಕುರಿತು ಮಾದ್ಯಮಗಳಲ್ಲಿ ಸಹ ಸುದ್ದಿ ಬಿತ್ತರವಾಗಿತ್ತು. ಆದರೆ ಕೆಲ ಕಾಂಗ್ರೇಸ್ ನಾಯಕರು ಮಾದ್ಯಮಗಳ ವರದಿ ಸುಳ್ಳು ಎಂದು ವಾದಿಸಿದ್ದರು. ಬಳಿಕ ವಿಡಿಯೋವನ್ನು ಎಫ್.ಎಸ್.ಎಲ್ ವರದಿಗೆ ಕಳುಹಿಸಲಾಗಿತ್ತು. ಇದೀಗ ಎಫ್.ಎಸ್.ಎಲ್ ವರದಿಯನ್ನು ಆಧರಿಸಿ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.