Film News

ಮತ್ತೊಂದು ಶಾಕಿಂಗ್ ಪೋಸ್ಟ್ ಹಂಚಿಕೊಂಡ ಸಮಂತಾ, ಆ ಇಬ್ಬರೊಂದಿಗೆ ರಿಲೇಷನ್ ಶಿಪ್ ನಲ್ಲೇ ಇರುತ್ತೇನೆ ಎಂದ ನಟಿ…….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ಸದಾ ಸುದ್ದಿಯಲ್ಲೇ ಇರುತ್ತಾರೆ. ಅದರಲ್ಲೂ ಆಕೆ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಬಳಿಕ ಆಕೆ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದು, ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದು, ಇದೀಗ ಮತ್ತೆ ವಿರಾಮ ಪಡೆದುಕೊಂಡಿದ್ದಾರೆ. ಖುಷಿ ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿದ ಸಮಂತಾ ಇದೀಗ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಕಳೆದೊಂದು ವರ್ಷದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದಾಗಿ ತಿಳಿಸಿದರು. ಈ ವೇಳೆ ಆಕೆಗೆ ಅಭಿಮಾನಿಗಳ ಜೊತೆಗೆ ಸಿನೆಮಾ ಸೆಲೆಬ್ರೆಟಿಗಳೂ ಸಹ ಧೈರ್ಯ ತುಂಬುವ ಕೆಲಸ  ಮಾಡಿದ್ದರು. ಬಳಿಕ ಈ ವ್ಯಾಧಿಗೆ ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು, ಯಶೋಧ ಹಾಗೂ ಶಾಕುಂತಲಂ ಸಿನೆಮಾಗಳನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ವಿಜಯ್ ದೇವರಕೊಂಡ ಜೊತೆಗೆ ಖುಷಿ ಹಾಗೂ ಹಿಂದಿಯಲ್ಲಿ ಸಿಟಾಡೆಲ್ ಎಂಬ ವೆಬ್ ಸಿರೀಸ್ ಗಳ ಶೂಟಿಂಗ್ ಮುಗಿಸಿ ಒಂದು ವರ್ಷದ ಮಟ್ಟಿಗೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ಬಳಿಕ ಅಮೇರಿಕಾ, ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಸುತ್ತಾಡುತ್ತಾ ಅಲ್ಲಿನ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದರು.

ಸದ್ಯ ಸಮಂತಾ ಆಸ್ಟ್ರೀಯಾದ ವಿಯನ್ನಾ ಎಂಬ ಪ್ರದೇಶದಲ್ಲಿದ್ದಾರೆ ಎನ್ನಲಾಗಿದೆ. ಅಲ್ಲಿನ ಒಂದು ಪ್ರದೇಶದಲ್ಲಿ ಗೋಡೆಯ ಮುಂದೆ ನಿಂತು ಪೊಟೋ ಒಂದನ್ನು ಆಕೆ ಹಂಚಿಕೊಂಡಿದ್ದಾರೆ. ಆಕೆಯ ಹಿಂದಿರುವ ಗೋಡೆಯ ಮೇಲೆ Everybody’s Darling ಎಂದು ಬರೆಯಲಾಗಿದೆ. ಈ ಪೊಟೋಗೆ ಯಾರಿಗೆ ಇಷ್ಟವಿದ್ದರೂ ಇಲ್ಲದೇ ಇದ್ದರೂ ಅವರಿಬ್ಬರೊಂದಿಗೆ ಇರುತ್ತೇನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. “Or not.I can live with both” ಎಂದು ಆಕೆ ಪೊಟೋ ಹಂಚಿಕೊಂಡಿದ್ದು ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನೂ ಸಮಂತಾ ಹಂಚಿಕೊಂಡ ಈ ಪೋಸ್ಟ್ ಹಿಂದಿನ ಗೂಡಾರ್ಥ ಆದರೂ ಏನು ಎಂದು ನೆಟ್ಟಿಗರು ತಲೆಗೆಡಿಸಿಕೊಂಡಿದ್ದಾರೆ.

ಇದೀಗ ಸಮಂತಾ ಹಂಚಿಕೊಂಡ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಸಮಂತಾ ಜೊತೆಗಿರುತ್ತೆನೆ ಎಂದು ಹೇಳಿದ ಆ ಇಬ್ಬರೂ ಯಾರು ಎಂದು ಕಾಮೆಂಟ್ ಗಳನ್ನು ನೆಟ್ಟಿಗರು ಹರಿಬಿಡುತ್ತಿದ್ದಾರೆ. ಈ ಪೋಸ್ಟ್ ನ ಅರ್ಥ ಏನು ಎಂಬುದರ ಬಗ್ಗೆ ಸಮಂತಾ ರವರೇ ರಿವೀಲ್ ಮಾಡಬೇಕಿದೆ. ಈ ಪೋಸ್ಟ್ ಗೆ ಸ್ಟಾರ್‍ ನಟಿ ತ್ರಿಷಾ ಸಹ ಕಾಮೆಂಟ್ ಮಾಡಿದ್ದಾರೆ. ಕೊನೆಯದಾಗಿ ಸಮಂತಾ ಖುಷಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಶೀಘ್ರದಲ್ಲೇ ಆಕೆಯ ಸಿಟಾಡೆಲ್ ಎಂಬ ವೆಬ್ ಸಿರೀಸ್ ಸಹ ತೆರೆಗೆ ಬರಲಿದೆ.

Most Popular

To Top