ಮೆಗಾ ಕುಟುಂಬದಲ್ಲಿ ಮದುವೆ ಸದ್ದು ಶುರು, ವೈರಲ್ ಆದ ವರುಣ್ ತೇಜ್ ಲಾವಣ್ಯ ಪ್ರಿ ವೆಡ್ಡಿಂಗ್ ಸೆಲೆಬ್ರೇಷನ್ ಪೊಟೋಸ್…..!

Follow Us :

ಸುಮಾರು ವರ್ಷಗಳಿಂದ ಸಿಕ್ರೇಟ್ ಆಗಿ ಪ್ರೇಮ ಪಯಣ ಸಾಗಿಸುತ್ತಿದ್ದ ಮೆಗಾ ಕುಟುಂಬದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದ್ದು, ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ. ಮೆಗಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿಯ ಮದುವೆ ನಡೆಯಲಿದ್ದು, ಇದೀಗ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್ ನಡೆದಿದ್ದು, ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸುಮಾರು ನಾಲ್ಕೈದು ದಿನಗಳಿಂದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಎಂಗೇಜ್ ಮೆಂಟ್ ಬಗ್ಗೆ ಸುದ್ದಿಗಳು ಹರಿದಾಡಿದವು. ಮೊದಲಿಗೆ ಯಾರೂ ಸಹ ಈ ಸುದ್ದಿಯನ್ನು ನಂಬಿರಲಿಲ್ಲ. ಈ ಹಿಂದೆ ಅನೇಕ ಬಾರಿ ಇದೇ ರೀತಿಯ ಗಾಸಿಫ್ ಗಳು ಹರಿದಾಡಿದ ಹಿನ್ನೆಲೆಯಲ್ಲಿ ಯಾರೂ ಸಹ ಇದನ್ನು ನಿಜ ಎಂದು ನಂಬಿರಲಿಲ್ಲ. ಕಳೆದ ಜೂ.9 ರಂದು ಈ ಜೋಡಿಯ ಎಂಗೇಜ್ ಮೆಂಟ್ ನಡೆದಿದ್ದು, ಮೆಗಾ ಕುಟುಂಬದ ಜೊತೆಗೆ ಕೆಲ ಸಿನೆಮಾ ಗಣ್ಯರು ಸಹ ಭಾಗಿಯಾಗಿ ಜೋಡಿಗೆ ಶುಭ ಕೋರಿದ್ದರು. ಬಳಿಕ ಇಬ್ಬರೂ ಮದುವೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾದರು. ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿ ಶಾಪಿಂಗ್ ಗೆ ಸಹ ಹೋಗಿತ್ತು. ವರುಣ್ ತೇಜ್ ಬ್ಯಾಚುಲರ್‍ ಪಾರ್ಟಿ ಸಹ ನೀಡಿದ್ದರು. ಇದೀಗ ಮೆಗಾ ಕುಟುಂಬ ವರುಣ್ ತೇಜ್ ಪ್ರೀ ವೆಡಡಿಂಗ್ ಸೆಲೆಬ್ರೇಷನ್ ಗ್ರಾಂಡ್ ಆಗಿ ಮಾಡಿಕೊಂಡಿದ್ದಾರೆ.

ವಿದೇಶದ ಹೋಟೆಲ್ ಒಂದರಲ್ಲಿ ಈ ಸಂಭ್ರಮ ನಡೆದಿದೆ ಎನ್ನಲಾಗುತ್ತಿದೆ. ಈ ಪಾರ್ಟಿಯಲ್ಲಿ ಮೆಗಾ ಫ್ಯಾಮಿಲಿ ಭಾಗಿಯಾಗಿದ್ದು, ನಾಲ್ಕು ತಲೆಮಾರಿನ ನಟರನ್ನು ಒಂದೇ ಫ್ರೇಂ ನಲ್ಲಿ ನೋಡಿದ ಅಭಿಮಾನಿಗಳು ಪುಲ್ ಖುಷಿಯಾಗುತ್ತಿದ್ದಾರೆ. ಈ ಪಾರ್ಟಿಯಲ್ಲಿ ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಹಾಜರಾಗಿರಲಿಲ್ಲ. ಉಳಿದಂತೆ ಎಲ್ಲರೂ ಈ ಪಾರ್ಟಿಯಲ್ಲಿ ಹಾಜರಾಗಿದ್ದು ಸಖತ್ ಎಂಜಾಯ್ ಮಾಡಿದ್ದಾರೆ ಎನ್ನಲಾಗದೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮೂಲಗಳ ಪ್ರಕಾರ ನವೆಂಬರ್‍ ಮೊದಲ ವಾರದಲ್ಲಿ ಲಾವಣ್ಯ ಹಾಗೂ ವರುಣ್ ತೇಜ್ ಮದುವೆ ನಡೆಯಲಿದೆಯಂತೆ. ಇಟಲಿಯಲ್ಲಿ ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆಯಲಿದ್ದು ಈ ಬಗ್ಗೆ ಇನಷ್ಟೆ ಅಧಿಕೃತ ಮಾಹಿತಿ ಬರಬೇಕಿದೆ.