ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ ಮುಸ್ಲೀಂ ಕುಟುಂಬ, ಗೋಕರ್ಣದಲ್ಲಿ ಅಪರೂಪದ ಘಟನೆ…..!

ಸಾಮಾನ್ಯವಾಗಿ ಪುಣ್ಯಕ್ಷೇತ್ರಗಳಲ್ಲಿ ಹಿಂದೂಗಳು ಪಿತೃ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಆದರೆ ಧಾರವಾಡದ ಮುಸ್ಲೀಂ ಕುಟುಂಬವೊಂದು ಹಿಂದೂಗಳ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಪಿತೃ ಕಾರ್ಯವನ್ನು ಮಾಡಿದ ಅಪರೂಪದ ಘಟನೆಯೊಂದು ನಡೆದಿದ್ದು, ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು,…

ಸಾಮಾನ್ಯವಾಗಿ ಪುಣ್ಯಕ್ಷೇತ್ರಗಳಲ್ಲಿ ಹಿಂದೂಗಳು ಪಿತೃ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಆದರೆ ಧಾರವಾಡದ ಮುಸ್ಲೀಂ ಕುಟುಂಬವೊಂದು ಹಿಂದೂಗಳ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಪಿತೃ ಕಾರ್ಯವನ್ನು ಮಾಡಿದ ಅಪರೂಪದ ಘಟನೆಯೊಂದು ನಡೆದಿದ್ದು, ಈ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಹಿಂದೂಗಳು ತಮ್ಮ ಸಂಪ್ರದಾಯದಂತೆ ದೇಶದ ಹಲವು ಸಮುದ್ರ ತೀರದ ಪ್ರದೇಶಗಳಲ್ಲಿ ಪಿತೃ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಕರ್ನಾಟಕ ರಾಜ್ಯದಲ್ಲೂ ಸಹ ಸಮುದ್ರ ತೀರದಲ್ಲಿ ಪಿತೃ ಕಾರ್ಯಗಳು ನಡೆಯುತ್ತಿರುತ್ತವೆ. ಆದರೆ ಧಾರವಾಡದ ಮುಸ್ಲೀಂ ಕುಟುಂಬ ವೊಂದು ಮಾತ್ರ ಹಿಂದೂ ಸಂಪ್ರದಾಯದಂತೆ ಕರ್ನಾಟಕದ ಗೋಕರ್ಣ ಸಮುದ್ರ ತೀರದಲ್ಲಿ ಪಿತೃ ಕಾರ್ಯವನ್ನು ಮಾಡಿದ್ದಾರೆ. ಧಾರವಾಡದ ಜ್ಯೋತಿಷಿ ನೀಡಿದ ಸಲಹೆಯ ಮೇರೆಗೆ ಮುಸ್ಲೀಂ ಕುಟುಂಬ ಈ ಕಾರ್ಯವನ್ನು ಮಾಡಿದೆ ಎನ್ನಲಾಗಿದೆ. ಧಾರವಾಡದ ಧಾನೇಶ್ವರಿ ನಗರದ ಶಂಷಾದ್ ಎಂಬ ಮಹಿಳೆಯ ಕುಟುಂಬದಿಂದ ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನಡೆದಿದೆ.

ಈ ಮುಸ್ಲೀಂ ಕುಟುಂಬಕ್ಕೆ ಮೊದಲಿನಿಂದಲೂ ಜಾತಕ, ಹಿಂದೂ ಸಂಪ್ರದಾಯದ ಮೇಲೆ ತುಂಬಾನೆ ನಂಬಿಕೆಯಿತ್ತು ಎನ್ನಲಾಗಿದೆ. ಈ ಕಾರಣದಿಂದಲೇ ಅವರು ತಮ್ಮ ಪಿತೃ ಕಾರ್ಯವನ್ನು ಗೋಕರ್ಣದಲ್ಲಿ ನೆರವೇರಿಸಿದ್ದಾರಂತೆ. ಇನ್ನೂ ಶಂಷಾದ್ ರವರ ತಮ್ಮನಿಗೆ ಮದುವೆ ಮಾಡಲು ಹೆಣ್ಣು ಸಿಗದ ಕಾರಣದಿಂದ ಜ್ಯೋತಿಷಿಯೊಬ್ಬರ ಜೊತೆಗೆ ಹೋಗಿದ್ದರು. ತಮ್ಮನ ಮದುವೆ, ಉದ್ಯೋಗದಲ್ಲಿ ಅಭಿವೃದ್ದಿ ಹಾಗೂ ಮಾನಸಿಕ ಶಾಂತಿಗಾಗಿ  ಪಿತೃ ಕಾರ್ಯ ನೆರವೇರಿಸಲಾಗಿದೆಯಂತೆ. ಇನ್ನೂ ಈ ಹಿಂದೆ ಗೋಕರ್ಣದಲ್ಲಿ ಅನೇಕ ಬಾರಿ ಕ್ರೈಸ್ತ ಸಮುದಾಯದವರು ಸಹ ಪಿತೃ ಕಾರ್ಯ ನೆರವೇರಿಸಿದ್ದರು. ಆದರೆ ಮೊದಲ ಬಾರಿಕೆ ಮುಸ್ಲೀಂ ಕುಟುಂಬವೊಂದು ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ್ದಾರೆ ಎಂದು ಸ್ಥಳೀಯ ಪುರೋಹಿತರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.