Film News

ಆ ಆರು ತಿಂಗಳು ತುಂಬಾ ಕಷ್ಟಕರವಾಗಿತ್ತು, ವೈರಲ್ ಆದ ಸಮಂತಾ ಲೇಟೆಸ್ಟ್ ಲುಕ್ಸ್ ಅಂಡ್ ಪೋಸ್ಟ್…..!

ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ತಮ್ಮ ವೈಯುಕ್ತಿಕ ವಿಚಾರಗಳಿಂದ ಸದಾ ಸುದ್ದಿಯಲ್ಲೇ ಇದ್ದಾರೆ. ಪ್ರೀತಿಸಿ ಮದುವೆಯಾದ ನಾಗಚೈತನ್ಯ ಜೊತೆಗೆ ವಿಚ್ಚೇದನ ಬಳಿಕ ಮಯೋಸೈಟೀಸ್ ವ್ಯಾಧಿಗೆ ತುತ್ತಾಗಿ ತುಂಬಾ ಸಮಸ್ಯೆಯನ್ನು ಎದುರಿಸಿದ್ದರು.  ವರ್ಷದ ಆರಂಭದಿಂದ ಸಮಂತಾ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದರು. ಈ ಹಿಂದೆ ಒಪ್ಪಿಕೊಂಡ ಸಿನೆಮಾಗಳನ್ನು ಆಕೆ ಕಂಪ್ಲೀಟ್ ಮಾಡಿ ಇದೀಗ ಮತ್ತೆ ಆರೋಗ್ಯದ ಕಡೆ ಗಮನ ಹರಿಸಿ ಸಿನೆಮಾಗಳೀಂದ ಬ್ರೇಕ್ ಪಡೆದುಕೊಳ್ಳಲಿದ್ದಾರಂತೆ.  ಇದೀಗ ಆಕೆ ಹಂಚಿಕೊಂಡ ಪೊಟೋ ಅಂಡ್ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಕೆಲವು ತಿಂಗಳುಗಳ ಹಿಂದೆ ಮಯೋಸೈಟೀಸ್ ಎಂಬ ಮಾರಣಾಂತಿಕ ಕಾಯಿಲೆಗೆ ಗುರಿಯಾಗಿದ್ದರು. ಯಶೋಧ ಸಿನೆಮಾದ ಬಿಡುಗಡೆ ಸಮಯದಲ್ಲಿ ಈ ವಿಚಾರವನ್ನು ಸಮಂತಾ ಹೊರಹಾಕಿದ್ದರು. ಅನಾರೋಗ್ಯದ ನಡುವೆಯೇ ಯಶೋಧ ಸಿನೆಮಾದ ಪ್ರಮೋಷನ್ ನಲ್ಲೂ ಸಹ ಭಾಗಿಯಾಗಿದ್ದರು. ಈ ವೇಳೆ ಆಕೆ ತುಂಬಾ ವೀಕ್ ಆಗಿ ಕಾಣಿಸಿಕೊಂಡಿದ್ದರು. ಆಕೆ ತನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದು, ಆಕೆಗೆ ಸಿನೆಮಾ ಸೆಲೆಬ್ರೆಟಿಗಳ ಜೊತೆಗೆ ಅನೇಕ ಅಭಿಮಾನಿಗಳು ಧೈರ್ಯ ತುಂಬಿದ್ದರು. ಬಳಿಕ ಆಕೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದರು. ಇದೀಗ ಸಮಂತ ಮತ್ತೊಮ್ಮೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ತನ್ನಆರೋಗ್ಯದ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ದೂರ ಉಳಿದು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಜೊತೆಗೆ ಚಿಕಿತ್ಸೆ ಸಹ ಪಡೆದುಕೊಳ್ಳಲಿದ್ದಾರಂತೆ.

ಇನ್ಣೂ ಸಮಂತಾ ಇದೀಗ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಮಂತಾ ಹಂಚಿಕೊಂಡ ಈ ಪೋಸ್ಟ್ ಇದೀಗ ತುಂಬಾ ವಿಭಿನ್ನವಾಗಿದೆ. ಜೊತೆಗೆ ಆಕೆಯ ಲುಕ್ ಸಹ ವಿಭಿನ್ನವಾಗಿಯೇ ಇದೆ. ಇನ್ನೂ ಸಮಂತಾ ಈ ಪೊಟೋದಲ್ಲಿ ತುಂಭಾ ಡಲ್ ಆಗಿ ಕಾಣಿಸಿಕೊಂಡಿದ್ದಾರೆ. ಆರು ತಿಂಗಳ ಕಾಲ ಶೂಟಿಂಗ್ ನಲ್ಲಿ ಆಕೆ ಕಷ್ಟಪಟ್ಟಿರುವ ಬಗ್ಗೆ ಈ ಪೋಸ್ಟ್ ಮೂಲಕ ಹೊರಹಾಕಿದ್ದಾರೆ ಎನ್ನಲಾಗಿದೆ.  ಸಿಟಾಡೆಲ್ ಹಾಗೂ ಖುಷಿ ಸಿನೆಮಾಗಳಿಗಾಗಿ ಆಕೆ ತುಂಬಾನೆ ಕಷ್ಟ ಪಟ್ಟಿದ್ದಾರೆ. ಅದರಲ್ಲೂ ಸಿಟಾಡೆಲ್ ವೆಬ್ ಸಿರೀಸ್ ಗಾಗಿ ಆಕೆ ಕಠಿಣವಾದ ಆಕ್ಷನ್ ದೃಶ್ಯಗಳಲ್ಲೂ ಸಹ ನಟಿಸಿದ್ದಾರೆ. ಇದೀಗ ಈ ಸಿರೀಸ್ ಸಹ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಆಕೆ ರಿಲೀಫ್ ಆಗಿದ್ದಾರೆ. ಈ ಸಂಬಂಧ ಆಕೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು. ಅದು ವೈರಲ್ ಆಗುತ್ತಿದೆ.

ಸದ್ಯ ಕೆಲವೊಂದು ಮೂಲಗಳ ಪ್ರಕಾರ ಸಮಂತಾ ತನ್ನ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಗೆ ದೂರ ಉಳಿಯಲಿದ್ದಾರಂತೆ. ವರ್ಷದ ಕಾಲ ಅಮೇರಿಕಾದಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಿದ್ದಾರಂತೆ. ಸದ್ಯ ಸಮಂತಾ ಖುಷಿ ಹಾಗೂ ಸಿಟಾಡೆಲ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

Most Popular

To Top