Film News

ಸ್ವಲ್ಪ ಕಾಯಿರಿ, ನನ್ನ ಮೇಲೆ ನಂಬಿಕೆಯಿಡಿ ಎಂದ ಯಶ್, ಶೀಘ್ರದಲ್ಲೇ ಹೊಸ ಸಿನೆಮಾದ ಬಗ್ಗೆ ಯಶ್ ಗುಡ್ ನ್ಯೂಸ್ ನೀಡ್ತಾರಾ?

ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸಿನೆಮಾಗಳ ಅಗ್ರ ಸ್ಥಾನದಲ್ಲಿ ರಾಕಿಂಗ್ ಸ್ಟಾರ್‍ ಯಶ್ ಹಾಗೂ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಕೆಜಿಎಫ್ ಸಿನೆಮಾ ಇರುತ್ತದೆ ಎಂದು ಹೇಳಬಹುದಾಗಿದೆ. ಕನ್ನಡ ಸಿನಿರಂಗದ ತಾಕತ್ತು ಏನು ಎಂಬುದನ್ನು ಬಣ್ಣದ ಲೋಕಕ್ಕೆ ಕೆಜಿಎಫ್ ಸಿನೆಮಾ ತೋರಿಸಿಕೊಟ್ಟಿತ್ತು ಎಂದು ಸಹ ಹೇಳಬಹುದಾಗಿದೆ. ಈ ಸಿನೆಮಾದ ಬಳಿಕ ಯಶ್ ರವರ ಸಿನೆಮಾಗಾಗಿ ಅವರ ಅಭಿಮಾನಿಗಳು ತುಂಬಾನೆ ಕಾಯುತ್ತಿದ್ದಾರೆ. ಇದೀಗ ಯಶ್ ತಮ್ಮ ಮುಂದಿನ ಸಿನೆಮಾದ ಬಗ್ಗೆ ಶೀಘ್ರ ಅಪ್ಡೇಟ್ ನೀಡಲಿದ್ದಾರೆಯೇ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಕೆಜಿಎಫ್ ಸಿರೀಸ್ ಮೂಲಕ ಯಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಪಡೆದುಕೊಂಡರು. ಕನ್ನಡ ಸಿನಿರಂಗದ ಖ್ಯಾತಿಯನ್ನು ಗ್ಲೋಬಲ್ ಮಟ್ಟದ ವರೆಗೆ ತೆಗೆದುಕೊಂಡು ಹೋದರು. ಕೆಜಿಎಫ್-1 ಹಾಗೂ ಕೆಜಿಎಫ್-2 ಎರಡೂ ಸಿನೆಮಾಗಳು ಭಾರಿ ಸಕ್ಸಸ್ ಕಂಡವು. ಈ ಸಿನೆಮಾದ ಬಳಿಕ ಯಶ್ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿಕೊಂಡಿತ್ತು. ಇದೀಗ ಯಶ್ ಮುಂದಿನ ಸಿನೆಮಾದ ಮೇಲೆ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಸಿನಿರಂಗ ಸಹ ತುಂಬಾ ಕುತೂಹಲದಿಂದ ಕಾದಿದೆ.  ಕೆಜಿಎಫ್ ಸಿನೆಮಾ ತೆರೆಕಂಡು ಅನೇಕ ತಿಂಗಳುಗಳು ಕಳೆದಿದ್ದು, ಅವರ ಮುಂದಿನ ಸಿನೆಮಾದ ಬಗ್ಗೆ ಯಾವುದೇ ಅಪ್ಡೇಟ್ ಸಹ ನೀಡಿಲ್ಲ. ಇನ್ನೂ ಈಗಾಗಲೇ ಅನೇಕ ಕಥನಗಳೂ ಸಹ ಹುಟ್ಟಿಕೊಂಡಿವೆ. ಇದೀಗ ಮತ್ತೊಮ್ಮೆ ಅವರ ಸಿನೆಮಾದ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ.

ಇದೀಗ ರಾಕಿಂಗ್ ಸ್ಟಾರ್‍ ಯಶ್ ತಮ್ಮ ಮುಂದಿನ ಸಿನೆಮಾದ ಬಗ್ಗೆ ಅಪ್ಡೇಟ್ ಮಾಡಿದ್ದಾರೆ. YAHS19 ಸಿನೆಮಾದ ಬಗ್ಗೆ ಯಶ್ ಅಪ್ಡೇಟ್ ನೀಡಿದ್ದಾರೆ. ಮಲೇಷಿಯಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಹೇಳಿ ಎಲ್ಲರನ್ನೂ ಖುಷಿ ಮಾಡಿದ್ದಾರೆ. ಮಲೇಷಿಯಾದಲ್ಲಿ ಎಂ.ಎಸ್. ಗೋಲ್ಡ್ ಜ್ಯುವೆಲರಿ ಸ್ಟೋರ್‍ ಹೊಸ ಬ್ರಾಂಚ್ ಒಪೆನಿಂಗ್ ಕಾರ್ಯಕ್ರಮದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ನಾನು ಒಂದು ಹೊಸ ಪ್ರಾಜೆಕ್ಟ್ ಗಾಗಿ ತುಂಬಾ ಹಾರ್ಡ್ ವರ್ಕ್ ಮಾಡುತ್ತಿದ್ದೇಬೆ. ಈ ಸಿನೆಮಾದ ಬಗ್ಗೆ ಶೀಘ್ರದಲ್ಲೇ ಹೊಸ ಪ್ರಕಟನೆ ನೀಡುತ್ತೇನೆ. ಅಲ್ಲಿಯವರೆಗೂ ತಾವು ತಾಳಿರಿ. ನನ್ನನ್ನು ನಂಬಿ, ನಿಮ್ಮ ನಿರೀಕ್ಷೆ ಹುಸಿ ಮಾಡೊಲ್ಲ ಎಂದು ಫ್ಯಾನ್ಸ್ ಗೆ ಮಾತು ಕೊಟ್ಟಿದ್ದಾರೆ. ಇನ್ನೂ ಯಶ್ ಮಾತುಗಳನ್ನು ಕೇಳಿ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.

ಇನ್ನೂ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಇದೀಗ ಯಶ್ ರವರೇ ಸಿನೆಮಾದ ಬಗ್ಗೆ ಅಪ್ಡೇಟ್ ನೀಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನೂ ಯಶ್ ಯಾವ ಸಿನೆಮಾ ಮಾಡಲಿದ್ದಾರೆ, ನಿರ್ದೇಶಕ ಯಾರು ಎಂಬ ಚರ್ಚೆಗಳು ಶುರುವಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಪ್ಡೇಟ್ ಬರಲಿದೆ.

Most Popular

To Top