Film News

ಸಮಂತಾ ಜೊತೆಗೆ ಕಾಣಿಸಿಕೊಂಡ ವ್ಯಕ್ತಿ ಯಾರು, ಚರ್ಚೆ ಶುರು, ವೈರಲ್ ಆದ ಪೊಟೋಸ್…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಸದ್ಯ ಬಾಲಿವುಡ್ ಹಾಲಿವುಡ್ ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸಿನೆಮಾಗಳ ಅಪ್ಡೇಟ್ಸ್, ಪೊಟೋಶೂಟ್ಸ್ ಜೊತೆಗೆ ಆಗಾಗ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ. ಆ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಇದೀಗ ಸಮಂತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಈ ಪೊಟೋದಲ್ಲಿ ಆಕೆ ಒಬ್ಬ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಆ ವ್ಯಕ್ತಿ ಯಾರು ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಸಮಂತಾ ಸದ್ಯ ಬಾಲಿವುಡ್ ನ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿರೀಸ್ ನ ಶೂಟಿಂಗ್ ಸೈಬಿರಿಯಾದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್ ಸೆಟ್ ನಲ್ಲಿ ಸಮಂತಾ ನಿರ್ದೇಶಕರಾದ ರಾಜ್ ಅಂಡ್ ಡಿಕೆ ರವರಲ್ಲೊಬ್ಬರ ಜೊತೆ ಮಾತನಾಡುತ್ತಿದ್ದಾರೆ. ಈ ಪೊಟೋಗಳನ್ನು ಆಕೆ ಶೇರ್‍ ಮಾಡಿದ್ದಾರೆ. ಇನ್ನೂ ಸಮಂತಾ ಸಿಂಗಲ್ ಆಗಿರುವುದರಿಂದ ಆಕೆ ಜೊತೆ ಬಯಸುತ್ತಿದ್ದಾರೆಯೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆಕೆ ಒಂದು ಪೊಟೋದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಆ ಪೊಟೋ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ದಿ ಫ್ಯಾಮಿಲಿ ಮೆನ್ ಸಿರೀಸ್ ಬಳಿಕ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿರೀಸ್ ನ ಇಂಟರ್‍ ನ್ಯಾಷನಲ್ ವರ್ಷನ್ ನಲ್ಲಿ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರ ನಟಿಸಿದ್ದಾರೆ. ಅದೇ ಇಂಡಿಯನ್ ವರ್ಷನ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ವರುಣ್ ಧವನ್ ಹಾಗೂ ಸಮಂತಾ ಈ ಸಿರೀಸ್ ನಲ್ಲಿ ಪ್ರಧಾನ ಪಾತ್ರ ಪೋಷಣೆ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಈ ಸಿರೀಸ್ ನಲ್ಲಿ ಸಮಂತಾ ಹಾಗೂ ವರುಣ್ ನಡುವೆ ಬೋಲ್ಡ್ ದೃಶ್ಯಗಳು ಇರುತ್ತವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ರಿವೀಲ್ ಮಾಡಿಲ್ಲ.

ಇನ್ನೂ ಸಮಂತಾ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲು ಸಹ ನಟಿಸುತ್ತಿದ್ದಾರೆ. ಸುಮಾರು ವರ್ಷಗಳ ಬಳಿಕ ಸಮಂತಾ ಲವ್ ಅಂಡ್ ರೊಮ್ಯಾಂಟಿಕ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಶಿವ ನಿರ್ವಾಣ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದು, ಸೆಪ್ಟೆಂಬರ್‍ 1 ರಂದು ಸಿನೆಮಾವನ್ನು ತೆರೆಗೆ ತರಲಿದ್ದಾರೆ. ಇದರ ಜೊತೆಗೆ ಆಕೆ ಹಾಲಿವುಡ್ ಸಿನೆಮಾಗೂ ಸಹ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ ಫಿಲಿಪ್ ಜಾನ್ ರವರ ಚೆನೈ ಸ್ಟೋರಿ ಎಂಬ ಲವ್ ಸ್ಟೋರಿ ಸಿನೆಮಾದಲ್ಲೂ ಸಮಂತಾ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ.

Most Popular

To Top