Film News

ಅಂತೂ ಇಂತೂ ತನ್ನ ಮಗುವಿನ ತಂದೆಯನ್ನು ಪರಿಚಯಿಸಿದ ಇಲಿಯಾನಾ, ಆದರೂ ಆತ ಯಾರೂ ಎಂಬುದು ತಿಳಿಯೊಲ್ಲ…!

ಗೋವಾ ಬ್ಯೂಟಿ ಇಲಿಯಾನಾ ಸಿನೆಮಾಗಳಿಂದ ದೂರವಾಗಿ ಅನೇಕ  ವರ್ಷಗಳು ಕಳೆದರೂ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೆ ಇದ್ದರು. ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಆಕೆ ತಾನು ಗರ್ಭಿಣಿಯೆಂದು ಘೋಷಣೆ ಮಾಡಿದರು. ಮದುವೆಗೂ ಮುಂಚೆಯೇ ಆಕೆ ಗರ್ಭಿಣಿಯಾಗಿದ್ದಾಗಿ ಸಾರ್ವಜನಿಕವಾಗಿಯೇ ಘೋಷಣೆ ಮಾಡಿದ್ದು ಎಲ್ಲರೂ ಶಾಕ್ ಆಗಿದ್ದರು. ಆದರೆ ಆ ಗರ್ಭಕ್ಕೆ ಕಾರಣ ಯಾರು ಎಂಬ ವಿಚಾರವನ್ನು ಮಾತ್ರ ಆಕೆ ರಿವೀಲ್ ಮಾಡಲಿಲ್ಲ. ಇದೀಗ ಮೊದಲ ಬಾರಿಗೆ ಆತ ಯಾರು  ಎಂಬ ಬಗ್ಗೆ ರೊಮ್ಯಾಂಟಿಕ್ ಪೊಟೋ ಮೂಲಕ ರಿವೀಲ್ ಮಾಡಿದ್ದಾರೆ. ಆದರೆ ಮುಖ ಮಾತ್ರ ಸ್ಪಷ್ಟವಿಲ್ಲ.

ತೆಲುಗಿನ ದೇವದಾಸು ಸಿನೆಮಾದ ಮೂಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇಲಿಯಾನ ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ಮಹೇಶ್ ಬಾಬು ರವರ ಪೋಕಿರಿ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಬಳಿಕ ಸ್ಟಾರ್‍ ನಟಿಯಾಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಸ್ಟಾರ್‍ ನಟರಿಂದ ಯಂಗ್ ಹಿರೋಗಳ ಜೊತೆಗೆ ನಟಿಸಿದ್ದ ಈಕೆ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಣಯಗಳ ಕಾರಣದಿಂದ ಆಕೆ ಸಿನಿರಂಗದಿಂದ ದೂರ ಉಳಿಯಬೇಕಾಯಿತು. ಬಾಲಿವುಡ್ ಸಿನೆಮಾಗಳ ಮೇಲಿನ ಮೋಜಿನಿಂದ ಆಕೆ ಟಾಲಿವುಡ್ ಬಿಟ್ಟು ಬಾಲಿವುಡ್ ಗೆ ಹಾರಿದರು. ಆದರೆ ಬಾಲಿವುಡ್ ನಲ್ಲಿ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಅದೇ ಸಮಯದಲ್ಲಿ ಲವ್ ಬ್ರೇಕಪ್ ಕಾರಣದಿಂದ ಕೆಲವು ತಿಂಗಳುಗಳ ಕಾಲ ಆಕೆ ಡಿಪ್ರೆಷನ್ ಗೂ ಸಹ ಹೋಗಿದ್ದರು ಎನ್ನಲಾಗಿದೆ.

ಇತ್ತಿಚಿಗೆ ಇಲಿಯಾನಾ ಗರ್ಭಿಣಿಯಾಗಿದ್ದ ವಿಚಾರವನ್ನು ಹಂಚಿಕೊಂಡಿದ್ದರು. ಈ ವಿಚಾರವನ್ನು ಆಕೆಯೇ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಕೇಳಿದ ಎಲ್ಲರೂ ಶಾಕ್ ಆಗಿದ್ದರು. ಅದಕ್ಕೆ ಕಾರಣ ಇಲಿಯಾನಾ ಇನ್ನೂ ಮದುವೆಯಾಗಿಲ್ಲ. ಮದುವೆಗೂ ಮುಂಚೆಯೇ ಆಕೆ ಗರ್ಭಿಣಿಯಾಗಿದ್ದಾಗಿ ಘೋಷಣೆ ಮಾಡಿದ್ದು ಎಲ್ಲರೂ ಶಾಕ್ ಆಗುವಂತೆ ಮಾಡಿತ್ತು. ಇನ್ನೂ ಇಲಿಯಾನಾ ಗರ್ಭಕ್ಕೆ ಕಾರಣ ಯಾರು. ಒಂದು ವೇಳೆ ನಿಗೂಡವಾಗಿ ಮದುವೆಯಾದರೇ ಎಂಬ ಪ್ರಶ್ನೆಗಳೂ ಸಹ ಎದುರಾಗಿವೆ. ಇದೀಗ ತನ್ನ ಬಾಯ್ ಫ್ರೆಂಡ್ ಜೊತೆಗೆ ಇರುವಂತಹ ರೊಮ್ಯಾಂಟಿಕ್ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ ಆ ಪೊಟೋದಲ್ಲಿ ಆತ ಯಾರು ಎಂಬುದು ಸ್ಪಷ್ಟವಾಗಿ ಗೋಚರಿಸಿಲ್ಲ.

ಇನ್ನೂ ಈ ಪೊಟೋ ಜೊತೆಗೆ ಆಕೆ ಕ್ಯಾಪ್ಷನ್ ಒಂದನ್ನು ಸಹ ಹಂಚಿಕೊಂಡಿದ್ದಾರೆ. ಗರ್ಭ ಎಂಬುದು ಒಂದು ದೊಡ್ಡ ವರ. ನಾನು ಇದೀಗ ಮತಷ್ಟು ಸುಂದರವಾಗಿದ್ದೀನಿ. ನನ್ನ ಬೇಬಿ ಬಂಪ್ ನೋಡುತ್ತಿದ್ದರೇ ತುಂಬಾ ಮುದ್ದಾಗಿದೆ. ನನ್ನ ಬೇಬಿಯನ್ನು ಶೀಘ್ರದಲ್ಲೇ ನೋಡುತ್ತೇನೆ. ನನ್ನ ಈ ಪ್ರಯಾಣದಲ್ಲಿ ಪ್ರೀತಿಯ ವ್ಯಕ್ತಿ ತುಂಬಾ ಸಹಕಾರ ನೀಡಿದ್ದಾನೆ. ನನಗೆ ಸಮಸ್ಯೆಗಳು ಎದುರಾದಾಗ ಪ್ರತಿಬಾರಿ ನನ್ನ ಕಣ್ಣೀರು ಒರೆಸಿದ್ದಾನೆ, ಬಂಡೆಯಂತೆ ನನಗೆ ಅಡ್ಡವಾಗಿ ನಿಂತಿದ್ದಾನೆ. ಇದೀಗ ಏನೂ ಕಷ್ಟ ಅನ್ನಿಸುತ್ತಿಲ್ಲ ಎಂದು ನೋಟ್ ಬರೆದುಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Most Popular

To Top