Film News

ನಿರ್ಮಾಪಕನ ವಿರುದ್ದ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ ನಟಿ ಪ್ರಕೃತಿ ಮಿಶ್ರಾ….!

ಸಿನಿರಂಗದಲ್ಲಿ ಮಿಟೂ ಅಭಿಯಾನ ಶುರುವಾದ ಬಳಿಕ ಅನೇಕ ಕಲಾವಿದರು ತಮ್ಮ ಕೆರಿಯರ್‍ ನಲ್ಲಿ ಎದುರಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇದೀಗ ಓರ್ವ ನಟಿಯೊಬ್ಬರು ನಿರ್ಮಾಪಕರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಪ್ರೇಮಂ ಸಿನೆಮಾದ ಹಿರೋಯಿನ್ ಪ್ರಕೃತಿ ಮಿಶ್ರ ರವರೇ ಇದೀಗ ಕಾಸ್ಟಿಂಗ್ ಕೌಚ್ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆಕೆಗೆ ದೊಡ್ಡ ಮಟ್ಟದ ಬೆಂಬಲ ಸಹ ದೊರೆಯುತ್ತಿದೆ.

ನಟಿ ಪ್ರಕೃತಿ ಮಿಶ್ರಾ ಒಡಿಯಾ ಫಿಲ್ಮಂ ಇಂಡಸ್ಟ್ರಿಗೆ ಸೇರಿದ ನಿರ್ಮಾಪಕರೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ನಿರ್ಮಾಪಕ ಸಂಜಯ್ ನಾಯಕ್ ಎಂಬಾತನ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. ಆಕೆ ಮಾಡಿದ ಆರೋಪಗಳು ಇದೀಗ ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಇನ್ನೂ ಪ್ರಕೃತಿ ಮಾಡಿದ ಆರೋಪಗಳಿಗೆ  ಮತ್ತಿಬ್ಬರು ನಟಿಯರೂ ಸಹ ಬೆಂಬಲ ನೀಡಿದ್ದು, ಮತಷ್ಟು ಸಂಚಲನಕ್ಕೆ ಕಾರಣವಾಗಿದೆ. ಸಿನೆಮಾಗಳಲ್ಲಿ ಅವಕಾಶಗಳನ್ನು ನೀಡುತ್ತೇನೆ ಎಂದು ಸಂಜಯ್ ನಾಯಕ್ ಅನೇಕ ಯುವತಿಯರ ಜೀವನ ನಾಶ ಮಾಡಿದ್ದಾನೆ. ಹುಡುಗಿಯರಿಗೆ ಆಸೆ ಆಮಿಷಗಳನ್ನು ಒಡ್ಡಿ, ಆತನ ಅವಸರ ತೀರಿದ ಬಳಿಕ ಎಸ್ಕೇಪ್ ಆಗುತ್ತಾನೆ ಎಂದು ಆರೋಪ ಮಾಡಿದ್ದಾರೆ. ಇನ್ನೂ ಪ್ರಕೃತಿ ಆರೋಪಗಳಿಗೆ ನಟಿ ಪುಪುಲ್ ಭುಯಾನ್ ಹಾಗೂ ಕಿರುತೆರೆ ನಟಿ ಜಾಸ್ಮಿನ್ ರಥ್ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ನಟಿಯರು ಮಾಡುತ್ತಿರುವ ಆರೋಪಗಳು ನಿಜವೇ ಇರಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಪ್ರಕೃತಿ ಮಿಶ್ರಾ  ಸಿನಿರಂಗದಲ್ಲಿ ಶೇ.99 ರಷ್ಟು ಮಂದಿ ಕೆಟ್ಟವರೇ ಇದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳು ಬರಬೇಕಾದರೇ ಕಾಂಪ್ರಮೈಸ್ ಆಗಲೇ ಬೇಕು. ಬಲವಂತ ಸಹ ಮಾಡುತ್ತಾರೆ. ಓಲಿವುಡ್ ಗೆ ಸೇರಿದ ಅನೇಕ ಪ್ರತಿಭಾನ್ವಿತಾ ಹುಡುಗಿಯರು ಇದ್ದಾರೆ. ಎರಡು ಮೂರು ಸಿನೆಮಾಗಳ ಬಳಿಕ ಅವರು ಕಣ್ಮರೆಯಾಗುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೇ ಸಿನಿರಂಗದಲ್ಲಿ ಪ್ರತಿಭೆಗಿಂತ ಕಾಂಪ್ರಮೈಜ್ ಮುಖ್ಯವಾಗಿದೆ. ಕಾಂಪ್ರಮೈಜ್ ಆದರೇ ಮಾತ್ರ ಸಿನಿರಂಗದಲ್ಲಿ ಉಳಿಯಬಹುದು ಎಂದಿದ್ದಾರೆ. ನನಗೂ ಸಹ ಅದೇ ರೀತಿಯ ಅನುಭವವಾಗಿದೆ. ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲಲ್ಲಿ ಕಾಂಪ್ರಮೈಜ್ ಆಗುವಂತೆ ಅನೇಕರು ಬಲವಂತ ಮಾಡಿದರು. ಆದರೆ ನಾನು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ. ಇದೀಗ ಆಕೆಯ ಹೇಳಿಕೆಗಳು ಹಾಟ್ ಟಾಫಿಕ್ ಆಗಿದ್ದು, ವೈರಲ್ ಸಹ ಆಗುತ್ತಿವೆ,

Most Popular

To Top