Film News

ನಾನು ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದ ಸಮಂತಾ, ಆ ಸ್ಪೇಷಲ್ ವ್ಯಕ್ತಿಯ ಬಗ್ಗೆ ಸಮಂತಾ ಕಾಮೆಂಟ್ಸ್……!

ದೇಶದ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನದ ಬಳಿಕ ಆಕೆ ಸದಾ ಸುದ್ದಿಯಲ್ಲೇ ಇರುತ್ತಾರೆ. ನಟಿ ಸಮಂತಾ ತಮ್ಮ ವೈಯುಕ್ತಿಕ ಜೀವನದಲ್ಲಿ ತುಂಬಾನೆ ಏಳು ಬೀಳುಗಳನ್ನು ಕಂಡಿದ್ದಾರೆ. ವಿಚ್ಚೇದನ, ಮಯೋಸೈಟೀಸ್ ಸೇರಿದಂತೆ ವಿವಿಧ ಕಾರಣಗಳಿಂದ ಆಕೆ ತುಂಬಾನೆ ಸಮಸ್ಯೆಯನ್ನು ಅನುಭವಿಸಿದ್ದರು. ಇದೀಗ ಆಕೆ ತನ್ನ ಸೊಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಹಾಗೂ ಮಯೋಸೈಟೀಸ್ ವ್ಯಾಧಿಯಿಂದ ಹೊರಬಂದ ಬಳಿಕ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೊಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಕೆಲವೊಂದು ಇಂಟ್ರಸ್ಟಿಂಗ್ ಪೋಸ್ಟ್ ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ತನ್ನ ಆಪ್ತ ಸ್ನೇಹಿತ ರಾಹುಲ್ ರವಿಂದ್ರನ್ ಜೊತೆಗಿರುವ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಆತನೊಂದಿಗೆ ಕೊಂಚ ಸಮಯ ಕಳೆದು ಇಬ್ಬರೂ ಊಟ ಸವಿದಿದ್ದಾರೆ. ಈ ಸಂಬಂಧ ಪೊಟೋ ಒಂದನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಆ ಪೊಟೋಗೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಹಾಗೂ ರಾಹುಲ್ ರವಿಚಂದ್ರನ್ ಜೊತೆಗೆ ಪೊಟೋ ಒಂದನ್ನು ಹಂಚಿಕೊಂಡು, ಅದಕ್ಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಹಾಕಿದ್ದಾರೆ. ನಿಮಗೆ ಗೊತ್ತಿರುವ ಒಳ್ಳೆಯ ವ್ಯಕ್ತಿಗಳನ್ನು ನೂರರಿಂದ ಗುಣಿಸಿದರೇ, ಅಷ್ಟಕ್ಕೆ ಸಮನಾದವ ನನ್ನ ಬೆಸ್ಟ್ ಫ್ರೆಂಡ್ ರಾಹುಲ್, ಸದಾ ನಿಮ್ಮನ್ನು ಪ್ರೀತಿಸುತ್ತೇನೆ ರಾಹುಲ್ ಎಂದು ಸಮಂತಾ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಸಮಂತಾ ಹಂಚಿಕೊಂಡ ಈ ಪೋಸ್ಟ್ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಇನ್ನೂ ರಾಹುಲ್ ರವಿಂದ್ರನ್ ತೆಲುಗು ಸಿನಿರಂಗದ ನಟ, ನಿರ್ದೇಶಕನಾಗಿದ್ದಾರೆ. ಇನ್ನೂ ರಾಹುಲ್ ರವಿಚಂದ್ರನ್ ಹಾಗೂ ಸಮಂತಾ ರವರ ನಡುವೆ ಉತ್ತಮ ಸ್ನೇಹಭಾಂದವ್ಯವಿದೆ. ಜೊತೆಗೆ ಸಮಂತಾ ಕಷ್ಟಗಳಿರುವ ಸಮಯದಲ್ಲಿ ರಾಹುಲ್ ಆಕೆಯ ಜೊತೆಯಲ್ಲಿದ್ದು, ಧೈರ್ಯ ತುಂಬಿದ್ದರು. ಈ ಹಿನ್ನೆಲೆಯಲ್ಲಿ ಸಮಂತಾ ಗೆ ರಾಹುಲ್ ರವೀಂದ್ರನ್ ಎಂದರೇ ತುಂಬಾ ಇಷ್ಟ ಎಂದು ಹೇಳಲಾಗುತ್ತಿದೆ.

ಸದ್ಯಸಮಂತಾ ಇದೀಗ ಸಾಲು ಸಾಲು ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲಿ ಹಾಗೂ ಬಾಲಿವುಡ್ ನ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ಸಮಂತಾ ನಟಿಸುತ್ತಿದ್ದಾರೆ. ಇನ್ನೂ ಆಕೆ ಕೊನೆಯದಾಗಿ ಶಾಕುಂತಲಂ ಎಂಬ ಪೌರಾಣಿಕ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಡಿಜಾಸ್ಟರ್‍ ಆಗಿತ್ತು.

Most Popular

To Top