Film News

ಮೈಂಡ್ ಬ್ಲಾಕ್ ಔಟ್ ಫಿಟ್ ನಲ್ಲಿ ಸ್ಟನ್ನಿಂಗ್ ಲುಕ್ಸ್ ಕೊಟ್ಟ ಸಮಂತಾ, ಟರ್ಕಿಯಲ್ಲಿ ಸಮಂತಾ ಹಾಟ್ ಶೋ…..!

ಸೌತ್ ಸಿನಿರಂಗದಲ್ಲಿ ಸುಮಾರು ದಶಕಗಳಿಂದ ಮುನ್ನುಗ್ಗುತ್ತಿರುವ ಸಮಂತಾ ಜೀವನದಲ್ಲಿ ಕಳೆದ ವರ್ಷ ತುಂಬಾನೆ ವಿವಾದಗಳು, ನೋವುಗಳು ಎದುರಾದವು. ನಾಗಚೈತನ್ಯ ಜೊತೆಗೆ ವಿಚ್ಚೇದನದ ಕಾರಣದಿಂದ ಆಕೆ ತುಂಬಾನೆ ಡಿಪ್ರೆಷನ್ ಗೆ ಹೋಗಿದ್ದರು. ಬಳಿಕ ಆಕೆ ಸಿನೆಮಾಗಳಲ್ಲಿ ತೊಡಗಡಿಸಿಕೊಂಡರು. ಕೆಲವು ತಿಂಗಳುಗಳ ಹಿಂದೆಯಷ್ಟೆ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದು, ಅದರಿಂದಲೂ ಹೊರಬಂದು ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಟರ್ಕಿ ವೆಕೇಷನ್ ನಲ್ಲಿದ್ದು ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸಖತ್ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಸಮಂತಾ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಸುಮಾರು ಹದಿಮೂರು ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸ್ಟಾರ್‍ ನಟರ ಜೊತೆಗೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಆಕೆ ವಿಜಯ್ ದೇವರಕೊಂಡ ಹಾಗೂ ನಿರ್ದೇಕ ಶಿವಾ ನಿರ್ವಾಣ ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ ಖುಷಿ ಸಿನೆಮಾದಲ್ಲಿ ಸಮಂತಾ ನಟಿಸಿದ್ದಾರೆ. ಸಮಂತಾ ಮಯೋಸೈಟೀಸ್ ಕಾರಣದಿಂದ ಈ ಸಿನೆಮಾದ ಶೂಟಿಂಗ್ ನಿಂತಿದ್ದು, ಇದೀಗ ಸಿನೆಮಾದ ಶೂಟಿಂಗ್ ಪುನಃ ಆರಂಭವಾಗಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದಿಂದ ನಾ ರೋಜಾ ನುವ್ವೆ ಎಂಬ ಹಾಡು ಸಹ ಬಿಡುಗಡೆಯಾಗಿದ್ದು ಅನೇಕರನ್ನು ರಂಜಿಸಿದೆ. ಇದೀಗ ಆಕೆ ಟರ್ಕಿಯಲ್ಲಿ ವೆಕೇಷನ್ ನಲ್ಲಿದ್ದಾರೆ.

ಟಾಲಿವುಡ್ ನಿರ್ದೇಶಕ ಶಿವ ನಿರ್ವಾಣ ಹಾಗೂ ವಿಜಯ್ ದೇವರಕೊಂಡ ನಿರ್ದೇಶನದಲ್ಲಿ ಸೆಟ್ಟೇರಿದ ಖುಷಿ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಶೂಟಿಂಗ್ ಇಸ್ತಾನಬುಲ್ ನಲ್ಲಿ ನಡೆದಿತ್ತು. ಇದೀಗ ಆಕೆ ಅಲ್ಲಿಂದ ಟರ್ಕಿಯಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಶೂಟಿಂಗ್ ನಿಂದ ರಿಲ್ಯಾಕ್ಸ್ ಮೋಡ್ ಗೆ ತೆರಳಿದ್ದು, ಟರ್ಕಿಯಲ್ಲಿ ರಿಲ್ಯಾಕ್ಸ್ ಆಗುತ್ತಿದ್ದಾರೆ. ಹೋಟೆಲ್ ಒಂದರಲ್ಲಿ ರಿಲ್ಯಾಕ್ಸ್ ಆಗುತ್ತಿದ್ದಾರೆ. ಈ ವೇಳೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ತನ್ನ ಬ್ಯೂಟಿಪುಲ್ ಲುಕ್ ಸ್ವಂತ ಮಾಡಿದ್ದಾರೆ. ಬ್ಲಾಕ್ ಕಲರ್‍ ಟ್ರೆಂಡಿ ಡ್ರೆಸ್ ನಲ್ಲಿ ಹಾಗೂ ಕ್ಯಾಜುವಲ್ ವೇರ್‍ ನಲ್ಲಿ ಮಿರರ್‍ ಸೆಲ್ಫಿ ಕೊಟ್ಟಿದ್ದಾರೆ. ಮತ್ತೊಂದು ಪೊಟೋ ದಲ್ಲಿ ಬಾತ್ ಟವಲ್ ಸುತ್ತಿಕೊಂಡು ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸಮಂತಾ ಕೊನೆಯದಾಗಿ ಶಾಕುಂತಲಂ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಡಿಜಾ‌ಸ್ಟರ್‍ ಆಗಿದೆ. ಸದ್ಯ ಸಮಂತಾ ಖುಷಿ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇನ್ನೂ ಖುಷಿ ಸಿನೆಮಾ ಇದೇ ಸೆ.1 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Most Popular

To Top