Film News

ಬೋಲ್ಡ್ ಕಾಮೆಂಟ್ ಮಾಡಿದ ಶ್ರುತಿ ಹಾಸನ್, ಮದುವೆಗೂ ಮುಂಚೆ ತಾಯಿಯಾದರೇ ತಪ್ಪೇನು ಎಂದ ನಟಿ…..!

ಬಹುಬೇಡಿಕೆ ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಖತ್ ಸುದ್ದಿಯಾಗುತ್ತಿರುತ್ತಾರೆ. ಸುಮಾರು ಎರಡು ವರ್ಷಗಳಿಂದ ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಸುಮಾರು ದಿನಗಳಿಂದ ಇಬ್ಬರೂ ಸಹಜೀವನ ಸಹ ನಡೆಸುತ್ತಿದ್ದಾರೆ. ಜೊತೆಗೆ ಮುಂಬೈನಲ್ಲಿ ಪ್ಲಾಟ್ ಒಂದನ್ನು ಖರಿದೀಸಿ ಅದರಲ್ಲೇ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಶೂಟಿಂಗ್ ಶೆಡ್ಯೂಲ್ಡ್ ಇಲ್ಲದೇ ಇದ್ದಾಗ ಪ್ರಿಯಕರನೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಇದೀಗ ಮಕ್ಕಳನ್ನು ಪಡೆಯುವ ಬಗ್ಗೆ ಶ್ರುತಿ ಹಾಸನ್ ಬೋ‌ಲ್ಡ್ ಕಾಮೆಂಟ್ಸ್ ಮಾಡಿದ್ದಾರೆ.

ಸಿನಿರಂಗದಲ್ಲಿ ಅನೇಕ ನಟಿಯರು ತಮ್ಮ ರಿಲೇಷನ್ ಶಿಪ್ ಬಗ್ಗೆ ಸೀಕ್ರೇಟ್ ಆಗಿಯೇ ಇಡುತ್ತಾರೆ. ಆದರೆ ಶ್ರುತಿ ಹಾಸನ್ ಮಾತ್ರ ಎಲ್ಲರಿಗಿಂತಲೂ ವಿಭಿನ್ನ ಎಂದೇ ಹೇಳಬಹುದು. ಆಕೆ ಪಾಶ್ವಾತ್ಯ ಸಂಸ್ಕೃತಿಯನ್ನು ಫಾಲೋ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ರಿಲೇಷನ್ಸ್, ಅಫೈರ್‍ ಬಗ್ಗೆ ಒಪೆನ್ ಆಗಿಯೇ ಮಾಡುತ್ತಿದ್ದಾರೆ. ಆಕೆ ತನ್ನ ಅಫೈರ್‍ ಬಗ್ಗೆ ಯಾವುದೇ ರೀತಿಯಲ್ಲೂ ನಿಗೂಡವಾಗಿ ಇಡಲಿಲ್ಲ. ಸುಮಾರು ದಿನಗಳ ಕಾಲ ಲಂಡನ್ ಮೂಲದ ಮೈಖಲ್ ಕೊರ್ಸ್ಲೆ ಎಂಬಾತನೊಂದಿಗೆ ಡೇಟಿಂಗ್ ನಡೆಸಿದರು. ಆತನೊಂದಿಗೆ ಸಹಜೀವನ ಸಹ ನಡೆಸಿದ್ದರು. ಬಳಿಕ ಆಕೆ ಆತನೊಂದಿಗೆ ಬ್ರೇಕಪ್ ಮಾಡಿಕೊಂಡರು. ಬಳಿಕ ಆಕೆ ಖ್ಯಾತ ಡೂಡಲ್ ಆರ್ಟಿಸ್ಟ್ ಶಾಂತಾನು ಹಜಾರಿಕಾ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಸದಾ ಅವರಿಬ್ಬರೂ ಕ್ಲೋಜ್ ಆಗಿ ಪೊಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಇತ್ತಿಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾದ ಶ್ರುತಿ ಹಾಸನ್ ಕೆಲವೊಂದು ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಸಿನಿರಂಗದಲ್ಲಿ ಶ್ರುತಿ ಹಾಸನ್ ಮಾಡ್ರನ್ ಕಲ್ಚರ್‍ ಫಾಲೋ ಮಾಡಿದ್ದಾರೆ. ಅಂದರೇ ವಿದೇಶಿ ಸಂಸ್ಕೃತಿಯನ್ನು ಹೆಚ್ಚು ನಂಬುತ್ತಾರೆ. ಸಂದರ್ಶನದಲ್ಲಿ ಮಕ್ಕಳನ್ನು ಪಡೆದುಕೊಳ್ಳುವ ಬಗ್ಗೆ ಶ್ರುತಿ ಹಾಸನ್ ಮಾತನಾಡಿದ್ದಾರೆ. ಮದುವೆಯಾಗುವುದಕ್ಕೂ ಮುಂಚೆ ತಾಯಿ ಆದರೇ ತಪ್ಪೇನು, ಮಕ್ಕಳನ್ನು ಹೆರುವುದು ಹೆಂಗಸರು ಆದ ಕಾರಣ ಮಕ್ಕಳನ್ನು ಯಾವಾಗ ಹೆರಬೇಕು ಎಂಬ ಸ್ವತಂತ್ರ ಸಹ ಇರುತ್ತೆ. ಆದ್ದರಿಂದ ಹೆಂಗಸರು ಮದುವೆಯಾಗುವುದಕ್ಕೂ ಮುಂಚೆ ಸಹ ತಾಯಿಯಾಗಬಹುದು ಎಂದು ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ.  ಇನ್ನೂ ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಅನೇಕರು ನೀನೂ ಸಹ ಇಲಿಯಾನಾ ತರಹ ಮದುವೆಗೂ ಮುಂಚೆ ತಾಯಿಯಾಗುತ್ತೀಯಾ ಎಂದು ಕ್ರೇಜಿ ಕಾಮೆಂಟ್ಸ್ ಸಹ ಮಾಡುತ್ತಿದ್ದಾರೆ.

ಇನ್ನೂ ಶ್ರುತಿ ಹಾಸನ್ ಪ್ರಸಕ್ತ ವರ್ಷದ ಆರಂಭದಲ್ಲೇ ಭಾರಿ ಸಕ್ಸಸ್ ಕಂಡುಕೊಂಡಿದ್ದಾರೆ. ಸುಮಾರು ದಿನಗಳ ಕಾಲ ಗ್ಯಾಪ್ ಬಳಿಕ ಶ್ರುತಿ ಹಾಸನ್ ವಕೀಲ್ ಸಾಭ್, ಕ್ರಾಕ್ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ವರ್ಷದ ಆರಂಭದಲ್ಲಿ ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟವು. ಸದ್ಯ ಆಕೆ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದು ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Most Popular

To Top