Film News

ತಾಯಿಯಾಗಲಿದ್ದಾರಂತೆ ಸ್ವರಾ ಭಾಸ್ಕರ್, ಅಭಿಮಾನಿಗಳೊಂದಿಗೆ ಗುಡ್ ನ್ಯೂಸ್ ಹಂಚಿಕೊಂಡ ಬೋಲ್ಡ್ ಬ್ಯೂಟಿ….!

ಬಾಲಿವುಡ್ ಬೋಲ್ಡ್ ಬ್ಯೂಟಿಗಳಲ್ಲಿ ಸ್ವರಾ ಭಾಸ್ಕರ್‍ ಸಹ ಒಬ್ಬರಾಗಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಆಕೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾಡುವಂತಹ ಕಾಮೆಂಟ್ಸ್ ಗಳ ಕಾರಣದಿಂದ ಸದಾ ಆಕೆ ಟ್ರೋಲಗಳಿಗೆ ಗುರಿಯಾಗುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ಯುವರಾಜಕಾರಣಿ ಫಹಾದ್ ಅಹ್ಮದ್ ಎಂಬಾತನನ್ನು ಮದುವೆಯಾದರು. ಮದುವೆಯ ಕಾರಣದಿಂದಲೂ ಆಕೆ ತುಂಬಾ ವಿಮರ್ಶೆಗಳನ್ನು ಎದುರಿಸಿದ್ದರು. ಇದೀಗ ಆಕೆ ತಾಯಿಯಾಗುತ್ತಿರುವ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಬೋಲ್ಡ್ ಬ್ಯೂಟಿ ಸ್ವರಾ ಭಾಸ್ಕರ್‍ ಅನೇಕ ಸಿನೆಮಾಗಳಲ್ಲಿ ಬೋಲ್ಡ್ ಅವತಾರದಲ್ಲೇ ಕಾಣಿಸಿಕೊಂಡು ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಸದಾ ಮೋದಿ ಸರ್ಕಾರದ ವಿರುದ್ದ ವಿಮರ್ಶೆಗಳನ್ನು ಮಾಡುತ್ತಾ ಸುದ್ದಿಯಲ್ಲಿರುತ್ತಾರೆ. ನಟಿ ಸ್ವರಾ ಭಾಸ್ಕರ್‍ ಕಳೆದ ಫೆ.16 ರಂದು ಯಂಗ್ ಪೊಲಿಟೀಷಿಯನ್ ಫಹಾದ್ ಅಹ್ಮದ್ ಎಂಬಾತನನ್ನು ವಿವಾಹವಾದರು. ಜನವರಿ 6 ರಂದೇ ಸ್ವರಾ ಮದುವೆಯಾಗಿದ್ದರು. ಕೋರ್ಟಿನಲ್ಲಿ ಈಕೆ ಮದುವೆಯಾಗಿದ್ದರು. ಆದರೆ ಫೆ.16 ರಂದು ಆಕೆ ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇನ್ನೂ ಮದುವೆಯಾದಾಗಿನಿಂದ ಸ್ವರಾ ಭಾಸ್ಕರ್‍ ಟ್ರೋಲ್ ಆಗುತ್ತಲೇ ಇದ್ದಾರೆ. ಇನ್ನೂ ಆಕೆ ಇದೀಗ ಗರ್ಭಿಣಿಯಾಗಿದ್ದು ತಾನು ಗರ್ಭಿಣಿಯಾಗಿದ್ದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಈ ಸಂತೋಷವನ್ನು ಆಕೆ ಪತಿಯೊಂದಿಗೆ ಸಂತೋಷವನ್ನು ಹಂಚಿಕೊಂಡು ತನ್ನೊಂದಿಗೆ ತೆಗೆಸಿಕೊಂಡ ಪೊಟೋಗಳನ್ನು ಟ್ವಿಟರ್‍ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾ ಸಂತೋಷವನ್ನು ಹೊರಹಾಕಿದ್ದಾರೆ. ಇನ್ನೂ ಈ ಪೊಟೋಗಳ ಜೊತೆಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ.  ಸಮ್ ಟೈಮ್ಸ್ ಆಲ್ ಯುವರ ಪ್ರೇಯರ್ಸ್ ಆರ್‍ ಆನ್ಸರ್‍ ಟು ಆಲ್ ಟುಗೆದರ್‍, ಬ್ಲೆಸ್ಟಡ್, ಗ್ರೇಟ್ ಪುಲ್, ಎಕ್ಸೈಟೆಡ್ ಆಹ್ ವ್ಯೂ ಸ್ಪೆಪ್ ಇನ್ ಟು ಎ ಹೋಲ್ ನ್ಯೂ ವರ್ಲ್ಡ್ ಎಂಬ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಮತ್ತೊಂದು ಟ್ಯಾಗ್ ಸಹ ಹಂಚಿಕೊಂಡಿದ್ದಾರೆ. ಕಮಿಂಗ್ ಸೂನ್, ಫ್ಯಾಮಿಲಿ, ನ್ಯೂ ಅರೈವಲ್, ಗ್ರಾಟಿಟ್ಯೂಡ್, ಅಕ್ಟೋಬರ್‍ ಬೇಬಿ ಎಂಬ ಹ್ಯಾಷ್ ಟ್ಯಾಗ್ ಸಹ ಹಂಚಿಕೊಂಡಿದ್ದಾರೆ. ಇನ್ನೂ ಈ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸ್ವರಾ ಭಾಸ್ಕರ್‍ ಹಂಚಿಕೊಂಡ ಈ ಪೋಸ್ಟ್ ಗೆ ಅನೇಕರು ಶುಭಾಷಗಳನ್ನು ಕೋರುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಕೆಲ ಸೆಲಬ್ರೆಟಿಗಳೂ ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ. ಕಳೆದ ಫೆಬ್ರವರಿ ಮಾಹೆಯಲ್ಲಿ ಸ್ವರಾ ಭಾಸ್ಕರ್‍ ಹಾಗೂ ಫಹಾದ್ ಅಹ್ಮದ್ ರಿಜಿಸ್ಟರ್‍ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯಾದ ಕೆಲವೆ ತಿಂಗಳುಗಳಲ್ಲಿ ತಾನು ಗರ್ಭಿಣಿಯೆಂದು ಘೋಷಣೆ ಮಾಡಿದರು.

Most Popular

To Top