Film News

ಬ್ಲಾಕ್ ಡ್ರೆಸ್ ನಲ್ಲಿ ನೆಕ್ಸ್ಟ್ ಲೆವೆಲ್ ಬೋಲ್ಡ್ ಶೋ ಮಾಡಿದ ಸಮಂತಾ, ಇತರೆ ನಟಿಯರಿಗೆ ಅಸೂಯೆ ಹುಟ್ಟಿಸುವಂತಿದೆ ಈ ಪೋಸ್ ಎಂದ ಫ್ಯಾನ್ಸ್….!

ದೇಶದ ಸಿನಿರಂಗದ ಪಾಪ್ಯುಲರ್‍ ನಟಿಯರಲ್ಲೊಬ್ಬರಾದ ಸಮಂತಾ ಸದ್ಯ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದ ಸಮಂತಾ ಶೀಘ್ರದಲ್ಲೇ ಕಮ್ ಬ್ಯಾಕ್ ಮಾಡಲಿದ್ದಾರೆ. ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ವಿವಿಧ ರೀತಿಯ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಆಕೆ ಬ್ಲಾಕ್ ಡ್ರೆಸ್ ನಲ್ಲಿ ಟಾಪ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸುವುದು ಮಾತ್ರವಲ್ಲದೇ ಬೇರೆ ನಟಿಯರಿಗೂ ಸಹ ಅಸೂಯೆ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮಯೋಸೈಟೀಸ್ ಕಾರಣದಿಂದ ಸಮಂತಾ ತುಂಬಾನೆ ಸಮಸ್ಯೆ ಎದುರಿಸಿದ್ದರು. ಜೊತೆಗೆ ತುಂಬಾನೆ ವೀಕ್ ಸಹ ಆಗಿದ್ದರು. ಇದೀಗ ಆಕೆ ಆದಷ್ಟು ಶೀಘ್ರವಾಗಿ ಫಿಟ್ ನೆಸ್ ಸಾಧಿಸಿ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿರಲು ಪ್ರಯತ್ನಿಸುತ್ತಿದ್ದಾಋಎ. ಮಯೋಸೈಟೀಸ್ ವ್ಯಾಧಿಯಿಂದ ಎದುರಿಸಿದ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಆಕೆ ಸದಾ ಯೋಗಾ, ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಇನ್ನೂ ಸಮಂತಾ ನಾಗಚೈತನ್ಯರಿಂದ ಬೇರೆಯಾದ ಬಳಿಕ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಆಕೆ ಸಿನೆಮಾಗಳಿಗೆ ಬ್ರೇಕ್ ಕೊಟ್ಟರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಬಹುದಾಗಿದೆ. ದಿನೇ ದಿನೇ ಆಕೆಯ ಕ್ರೇಜ್ ಏರುತ್ತಿದೆ ಎನ್ನಬಹುದಾಗಿದೆ. ಅದರಲ್ಲೂ ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕ್ಷಣದಲ್ಲೇ ಸೋಷಿಯಲ್ ಮಿಡಿಯಾ ತುಂಬಾ ಹರಿದಾಡುತ್ತಿರುತ್ತದೆ. ಇದೀಗ ಆಕೆ ಬ್ಲಾಕ್ ಡ್ರೆಸ್ ನಲ್ಲಿ ಹಂಚಿಕೊಂಡ ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ ಎನ್ನಲಾಗಿದೆ.

ಸ್ಟಾರ್‍ ನಟಿ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್, ಕೆಲವೊಂದು ಟಿಪ್ಸ್, ವಿಡಿಯೋಗಳ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಅದರಲ್ಲೂ ಇತ್ತಿಚಿಗೆ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡುತ್ತಿರುತ್ತಾರೆ. ಇದೀಗ ಆಕೆ ಬ್ಲಾಕ್ ಕೋಟ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಕೋಟ್ ಬಿಚ್ಚಿ ಬ್ರಾ ಸೌಂದರ್ಯವನ್ನು ಕಾಣಿಸುವಂತೆ ಮಾದಕ ನೋಟ ಬೀರಿದ್ದಾರೆ. ಆಕೆಯ ಈ ಪೊಟೋಗಳು ನೋಡಿದ ಅನೇಕರು ಫಿದಾ ಆಗಿದ್ದಾರೆ. ಅದರಲ್ಲೂ ನಟಿಯರೂ ಸಹ ಆಕೆಯ ಗ್ಲಾಮರ್‍ ನೋಡಿ ಅಸೂಯೆ ಪಡುತ್ತಿದ್ದಾರೆ ಎಂದು ಅಭಿಮಾನಿಗಳು ಕ್ರೇಜಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಹರಿದಾಡುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಸಮಂತಾ ಕೊನೆಯದಾಗಿ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಬಳಿಕ ಆಕೆ ಆರೋಗ್ಯದ ಕಾರಣದಿಂದ ಸಿನೆಮಾಗಳಿಗೆ ಬ್ರೇಕ್ ನೀಡಿದ್ದರು. ಇದೀಗ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ಮೂಲಕ ಶೀಘ್ರವೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top