ಮಿಣ ಮಿಣ ಮಿಣುಗುವ ಟೈಟ್ ಫಿಟ್ ಡ್ರೆಸ್ ನಲ್ಲಿ ಮತ್ತೇರಿಸುವಂತಹ ಲುಕ್ಸ್ ಕೊಟ್ಟ ಪೂಜಾ ಹೆಗ್ಡೆ, ರೀ ಎಂಟ್ರಿ ಭಾರಿ ಇದೆ ಎಂದ ಫ್ಯಾನ್ಸ್….!

Follow Us :

ಸ್ಟಾರ್‍ ನಟಿ ಪೂಜಾ ಹೆಗ್ಡೆ ಸೌತ್ ಅಂಡ್ ನಾರ್ತ್‌ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಗ್ಲಾಮರ್‍ ಜೊತೆಗೆ ಅದೃಷ್ಟ ಸಹ ಆಕೆಗಿರುವ ಕಾರಣದಿಂದ ಆಕೆಯ ಖಾತೆಯಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳು ಸೇರಿಕೊಂಡವು. ಸೌತ್ ನಲ್ಲಿ ಬುಟ್ಟಬೊಮ್ಮ ಎಂದೇ ಖ್ಯಾತಿ ಪಡೆದುಕೊಂಡ ಪೂಜಾ ಹೆಗ್ಡೆಗೆ ಭಾರಿ ಫಾಲೋಯಿಂಗ್ ಸಹ ಇದೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಂತೂ ಭಾರಿ ಫಾಲೋಯಿಂಗ್ ಹೊಂದಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ವಿವಿಧ ರೀತಿಯ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ರಂಜಿಸುತ್ತಿರುತ್ತಾರೆ.

ಪೂಜಾ ಹೆಗ್ಡೆ ಮುಂಬೈನಿಂದ ಬಂದು ಸೌತ್ ನಲ್ಲಿ ಅದರಲ್ಲೂ ಟಾಲಿವುಡ್ ಸಿನೆಮಾಗಳಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಆಕೆ  ವರುಣ್ ತೇಜ್ ಜೊತೆಗೆ ಮುಕುಂದ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ನಾಗಚೈತನ್ಯ ಜೊತೆಗೆ ಒಕ ಲೈಲಾ ಕೋಸಂ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದರು. ಆದರೆ ಈ ಎರಡೂ ಸಿನೆಮಾಗಳು ಆಕೆಗೆ ಭಾರಿ ನಿರಾಸೆಯನ್ನು ತಂದುಕೊಟ್ಟಿತ್ತು. ಬಳಿಕ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ಡಿಜೆ ಸಿನೆಮಾದಲ್ಲಿ ಅವಕಾಶ ಬಂತು. ಈ ಸಿನೆಮಾದ ಮೂಲಕ ಆಕೆ ಭಾರಿ ಕ್ರೇಜ್ ಪಡೆದುಕೊಂಡರು.  ಬಳಿಕೆ ಕ್ರೇಜಿ ನಟಿಯಾಗಿ ಅನೇಕ ಸ್ಟಾರ್‍ ಗಳೊಂದಿಗೆ ನಟಿಸಿದರು. ಸಿನೆಮಾಗಳಲ್ಲಿ ಜೋರು ಕಡಿಮೆಯಾದರೂ ಸಹ  ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಪರ್ಪಲ್ ಕಲರ್‍ ಟೈಟ್ ಫಿಟ್ ಡ್ರೆಸ್ ನಲ್ಲಿ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಮಿಣ ಮಿಣ ಎಂದು ಹೊಳೆಯುವ ಈ ಡ್ರೆಸ್ ನಲ್ಲಿ ಆಕೆ ಮಾದಕ ನೋಟ ಬೀರಿದ್ದಾರೆ. ಆಕೆಯ ಕಿಲ್ಲಿಂಗ್ ಲುಕ್ಸ್ ಗೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಆಕೆಯ ದೇಹದ ಮೈಮಾಟಕ್ಕೆ ಮನಸೋರೆಗೊಂಡ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳು, ಲೈಕ್ ಗಳು, ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಕಮ್ ಬ್ಯಾಕ್ ಗೆ ಭಾರಿ ಪ್ಲಾನ್ ಮಾಡಿಕೊಂಡಿದ್ದಂತಿದೆ ಎಂದು ಹೇಳುತ್ತಿದ್ದಾರೆ.

ಇದೀಗ ನಟಿ ಪೂಜಾ ಹೆಗ್ಡೆ ಮತ್ತೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ತೆಲುಗಿನಲ್ಲಿ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಐಕಾನ್ ಸ್ಟಾರ ಅಲ್ಲು ಅರ್ಜುನ್ ಜೊತೆಗೆ ಸಹ ಒಂದು ಸಿನೆಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕಾಲಿವುಡ್ ಸ್ಟಾರ್‍ ಡೈರೆಕ್ಟರ್‍ ಅಟ್ಲಿ ನಿರ್ದೇಶನದಲ್ಲಿ ತೆರೆಕಾಣಲಿರುವ ಸಿನೆಮಾಗೂ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಬಾಲಿವುಡ್ ನಲ್ಲಿ ಮೂರು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.