ಸಮಂತಾ ಅಭಿನಯದ ಖುಷಿ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್, ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡ ಸ್ಯಾಮ್…….!

ಸಿನಿರಂಗದಲ್ಲಿ ಅನೇಕ ನಟಿಯರಿಗೆ ಮಾಡಲ್ ಎಂದು ಸಮಂತಾ ರವರನ್ನು ಹೇಳಬಹುದು. ನಾಗಚೈತನ್ಯ ಹಾಗೂ ಸಮಂತಾ ರವರ ವಿಚ್ಚೇದನದ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಬಳಿಕೆ ಚೇತರಿಸಿಕೊಂಡರು. ಇದಾದ ಬಳಿಕ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದರು. ಬಳಿಕ ಅದರಿಂದಲೂ ಚೇತರಿಸಿಕೊಂಡು ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದಾರೆ. ಸದ್ಯ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಹಾಗೂ ಖುಷಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆಯ ಹುಟ್ಟುಹಬ್ಬದ ಅಂಗವಾಗಿ ಸಮಂತಾ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಈ ಪೊಟೋದಲ್ಲಿ ಆಕೆ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಸಮಂತಾ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಲೇ ಇದೆ. ಕುಟುಂಬ, ಆರೋಗ್ಯ, ಸಿನೆಮಾಗಳ ಕಾರಣದಿಂದ ಆಕೆಗೆ ಏಟಿನ ಮೇಲೆ ಏಟು ಬೀಳುತ್ತಿದೆ. ಎಲ್ಲವನ್ನೂ ಆಕೆ ಸಹನೆ ಹಾಗೂ ಧೈರ್ಯದಿಂದ ಎದುರಿಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ. ಸದ್ಯ ಆಕೆ ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸಮಂತಾ ಹುಟ್ಟುಹಬ್ಬದ ಅಂಗವಾಗಿ ಏ.28 ರಂದು ಖುಷಿ ಚಿತ್ರತಂಡದಿಂದ ಆಕೆಯ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‍ ನಲ್ಲಿ ಸಮಂತಾ ಹೊಸ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲೂ ಟಾಪ್, ಟೈಟ್ ಜೀನ್ಸ್ ನಲ್ಲಿ ಯಂಗ್ ಆಗಿ ಆಕರ್ಷಣೆ ಮಾಡಿದ್ದಾರೆ. ಇನ್ನೂ ಆಕೆ ನ್ಯೂ ಸಮಂತಾ ರವರನ್ನು ನೋಡಿದಂತಿದೆ. ಜೊತೆಗೆ ಆಕೆಯ ಕೆರಿಯರ್‍ ಆರಂಭದಲ್ಲಿ ಕಾಣಿಸಿಕೊಂಡಂತೆ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸಮಂತಾ ನ್ಯೂ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸುಮಾರು ದಿನಗಳ ಬಳಿಕ ಸಮಂತಾ ಈ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದು, ಸ್ಯಾಮ ಈಸ್ ಬ್ಯಾಕ್ ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಇನ್ನೂ ಪೋಸ್ಟರ್‍ ಸಖತ್ ವೈರಲ್ ಸಹ ಆಗುತ್ತಿದೆ. ಇನ್ನೂ ಖುಷಿ ಸಿನೆಮಾದ ಶೂಟಿಂಗ್ ಈಗಾಗಲೇ ಮುಗಿಯಬೇಕಿತ್ತು. ಆದರೆ ಸಮಂತಾ ರವರ ಆರೋಗ್ಯ ಸಮಸ್ಯೆಯ ಕಾರಣದಿಂದ ಸಿನೆಮಾದ ಶೂಟಿಂಗ್ ತಡವಾಗಿತ್ತು. ಇದೀಗ ಸಮಂತಾ ಚೇತರಿಕೆಗೊಂಡಿದ್ದು, ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇನ್ನೂ ಈ ಸಿನೆಮಾ ರೊಮ್ಯಾಂಟಿಕ್ ಲವ್ ಸ್ಟೋರಿ ಕಥನವುಳ್ಳ ಸಿನೆಮಾ ಆಗಿದೆ. ಇನ್ನೂ ಸುಮಾರು ವರ್ಷಗಳ ಹಿಂದೆ ತೆರೆಕಂಡ ಪವನ್ ಕಲ್ಯಾಣ್ ಹಾಗೂ ಭೂಮಿಕಾ ಅಭಿನಯದ ಖುಷಿ ಸಿನೆಮಾಗೂ ಈ ಖುಷಿ ಸಿನೆಮಾಗೂ ಕೆಲವೊಂದು ಹೋಲಿಕೆಗಳಿರುತ್ತವೆ ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಇನ್ನೂ ಖುಷಿ ಸಿನೆಮಾ ಇದೇ ವರ್ಷದ ಸೆ.1 ರಂದು ವಿಶ್ವದಾದ್ಯಂತ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ತೆರೆಕಾಣಲಿದೆ. ಇನ್ನೂ ಇತ್ತೀಚಿಗಷ್ಟೆ ಸಮಂತಾ ಶಾಕುಂತಲಂ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಡಿಜಾಸ್ಟರ್‍ ಆಗಿದೆ. ಖುಷಿ ಸಿನೆಮಾದ ಜೊತೆಗೆ ಸಮಂತಾ ಬಾಲಿವುಡ್ ನಲ್ಲಿ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.