ಸುಶಾಂತ್ ಸಿಂಗ್ ಮರಣ ನನ್ನನ್ನು ತುಂಬಾ ಖಿನ್ನತೆಗೆ ಗುರಿ ಮಾಡಿತ್ತು ಎಂದ ಸೀನಿಯರ್ ನಟಿ ಭೂಮಿಕಾ….!

ಮಾಡೆಲಿಂಗ್ ಮೂಲಕ ಎಂಟ್ರಿ ಕೊಟ್ಟ ಭೂಮಿಕಾ ಅತೀ ಕಡಿಮೆ ಸಮಯದಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಟ ಸುಮಂತ್ ಅಭಿನಯದ ಯುವಕುಡು ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ನಟ ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಖುಷಿ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಈಕೆ ಅನೇಕ ಅವಾರ್ಡ್‌ಗಳನ್ನು ದಕ್ಕಿಸಿಕೊಂಡರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಆಕೆ ಬಾಲಿವುಡ್ ಯಂಗ್ ನಟ ದಿವಂಗತ ಸುಶಾಂತ್ ಸಿಂಗ್ ಮರಣದ ಬಗ್ಗೆ ಮಾತನಾಡಿದ್ದಾರೆ.

ನಟಿ ಭೂಮಿಕಾ ಚಾವ್ಲಾ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬಾಲಿವುಡ್ ಸ್ಟಾರ್‍ ಸಲ್ಮಾನ್ ಖಾನ್ ರವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಇನ್ನೂಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದ್ದು, ಭೂಮಿಕಾ ಸಹ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಸುಶಾಂತ್ ಸಿಂಗ್ ರಾಜ್ ಪೂತ್ ಮರಣದ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನೂ ಸುಶಾಂತ್ ಸಿಂಗ್ ಮರಣ ಆಕೆಯನ್ನು ಮಾನಸಿಕ ಖಿನ್ನತೆಗೆ ಗುರಿಯಾಗುವಂತೆ ಮಾಡಿತ್ತಂತೆ. ಇಂದಿಗೂ ಸಹ ಸುಶಾಂತ್ ಸಿಂಗ್ ಮರಣ ಹೊಂದಿದ್ದಾರೆ ಎಂದು ನಂಬಲ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಟ ಸುಶಾಂತ್ ಸಿಂಗ್ ಕೋವಿಡ್ ಸಮಯದಲ್ಲಿ ಮೃತಪಟ್ಟರು. ಈ ಸಮಯದಲ್ಲಿ ಆಕೆ ಮುಂಬೈನಿಂದ ದೂರ ಇದ್ದರಂತೆ. ಸುಶಾಂತ್ ಸಿಂಗ್ ರನ್ನು ಕೊನೆಯ ಬಾರಿ ನೋಡಲು ಸಹ ಆಗಲಿಲ್ಲ ಎಂದು ಆಕೆ ಎಮೋಷನಲ್ ಆಗಿದ್ದಾರೆ. ಈ ಹಿಂದೆ ಸುಶಾಂತ್ ಸಿಂಗ್ ಹಾಗೂ ಭೂಮಿಕಾ ಎಂ.ಎಸ್.ಧೋನಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಸುಶಾಂತ್ ಸಿಂಗ್ ಅಕ್ಕನ ಪಾತ್ರದಲ್ಲಿ ಭೂಮಿಕ ನಟಿಸಿದ್ದರು. ಇನ್ನೂ ಈ ಸಿನೆಮಾದ ಬಳಿಕ ಅವರಿಬ್ಬರ ನಡುವೆ ಒಳ್ಳೆಯ ಸಹೋದರತ್ವದ ಸಂಬಂಧ ಸಹ ಏರ್ಪಟ್ಟಿತ್ತು. ಈ ಹಾದಿಯಲ್ಲೇ ಆಕೆ ಸುಶಾಂತ್ ಸಿಂಗ್ ಮರಣದ ವಿಚಾರ ತಿಳಿದ ಕೂಡಲೇ ತುಂಬಾ ಖಿನ್ನತೆಗೆ ಗುರಿಯಾಗಿದ್ದರಂತೆ.

ಇನ್ನೂ ಆಕೆ ಸುಶಾಂತ್ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುಶಾಂತ್ ಜೊತೆಗೆ ಸಿನೆಮಾಗಳನ್ನು ಮಾಡುವಾಗಿ ತನ್ನ ಜೀವನ ಸೇರಿದಂತೆ ವೈಯುಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದ. ನಾನು ಅವರ ಮಾತುಗಳನ್ನು ಕೇಳುತ್ತಾ ಇರುತ್ತಿದ್ದೆ. ಆದರೆ ಆತನ ಮರಣ ಸುಮಾರು ದಿನಗಳ ಕಾಲ ನನ್ನನ್ನು ಕಾಡಿತ್ತು. ಇಂದಿಗೂ ಸಹ ಆತನ ಮೃತಪಟ್ಟಿದ್ದಾನೆ ಎಂದರೇ ನಂಬಲು ಆಗುತ್ತಿಲ್ಲ ಎಂದು ಎಮೋಷನಲ್ ಆಗಿದ್ದಾರೆ. ಇನ್ನೂ ಆಕೆಯ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.