Film News

ಜೀನ್ಸ್ ನಲ್ಲಿ ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟ ಸಮಂತಾ, ಟಾಪ್ ಟು ಬಾಟಂ ಗ್ಲಾಮರ್ ಶೋ ಮಾಡಿದ ಬ್ಯೂಟಿ…..!

ಕಳೆದೆರಡು ವರ್ಷಗಳಿಂದ ಸ್ಟಾರ್‍ ನಟಿ ಸಮಂತಾ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಲೇ ಇದ್ದಾರೆ. ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕವಂತೂ ಸಮಂತಾ ಸುದ್ದಿಯಾಗುವುದು ಹೆಚ್ಚಾಗಿದೆ ಎನ್ನಬಹುದಾಗಿದೆ. ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವ ಮಾಮ ಎಂಬ ಹಾಡಿನ ಬಳಿಕವಂತೂ ಆಕೆ ತುಂಬಾನೆ ಬೋಲ್ಡ್ ಆಗಿದ್ದಾರೆ ಎನ್ನಬಹುದು. ಸೋಷಿಯಲ್ ಮಿಡಿಯಾದಲ್ಲಂತೂ ಸದಾ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ ಎನ್ನಬಹುದಾಗಿದೆ.

ಕಳೆದ ವರ್ಷ ಸಮಂತಾ ಮಯೋಸೈಟಿಸ್ ವ್ಯಾದಿಗೆ ಗುರಿಯಾಗಿ ಬಳಿಕ ಚೇತರಿಸಿಕೊಂಡ ಸಿನೆಮಾಗಳಲ್ಲಿ ನಟಿಸಿದ್ದರು. ಮತ್ತೆ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಸಂಪೂರ್ಣ ಆರೋಗ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ 1 ವರ್ಷದ ಕಾಲ ಸಿನೆಮಾಗಳಿಂದ ದೂರವಿರಲು ಸಹ ತೀರ್ಮಾನಿಸಿದ್ದರು. ಸಿನೆಮಾಗಳಿಂದ ದೂರ ಉಳಿದರೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿಯೇ ಇದ್ದರು. ಸದ್ಯ ಕೆಲವು ದಿನಗಳಿಂದ ಸಮಂತಾ ನೀಡುತ್ತಿರುವ ಪೋಸ್ ಗಳನ್ನು ನೋಡಿದರೇ ಆಕೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನೂ ತಮ್ಮನ್ನು ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ಜೀನ್ಸ್ ನಲ್ಲಿ ಟಾಪ್ ಟು ಬಾಟಂ ಗ್ಲಾಮರ್‍ ಶೋ ಮಾಡಿದ್ದು, ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಸ್ಟಾರ್‍ ನಟಿ ಸಮಂತಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಜೀನ್ಸ್ ನಲ್ಲಿ ಟಾಪ್ ಟು ಬಾಟಂ ತನ್ನ ದೇಹದ ಸೌಂದರ್ಯ ಶೋ ಮಾಡಿದ್ದಾರೆ. ಕ್ಲೀವೇಜ್ ಶೋ ಮಾಡುತ್ತಾ ಆಕೆ ಮಾದಕ ನೋಟ ಬೀರಿದ್ದಾರೆ. ಜೊತೆಗೆ ಸ್ಟೈಲಿಷ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಸಮಂತಾ ಲೇಟೆಸ್ಟ್ ಲುಕ್ಸ್ ಅಭಿಮಾನಿಗಳನ್ನು ಮಾತ್ರ ನೆಟ್ಟಿಗರನ್ನೂ ಸಹ ಫಿದಾ ಮಾಡುತ್ತಿವೆ. ಕೇವಲ ಅಭಿಮಾನಿಗಳು, ನೆಟ್ಟಿಗರು ಮಾತ್ರವಲ್ಲದೇ ಸ್ಟಾರ್‍ ನಟಿಯರೂ ಸಹ ಸಮಂತಾ ಲುಕ್ಸ್ ಗೆ ಫಿದಾ ಆಗಿದ್ದಾರೆ. ನಟಿ ಮೃಣಾಲ್ ಠಾಕೂರ್‍ ವುಮೆನ್ ಫೈರ್‍ ಎಂದೂ, ರಕುಲ್ ಉಫ್, ಬೆಂಕಿ ಎಂತಲೂ, ಸಂಯುಕ್ತಾ ಹೆಗ್ಡೆ ಓ ಮೈ ಗಾಡ್ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಸಮಂತಾ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ ಎನ್ನಬಹುದಾಗಿದೆ.

ಇನ್ನೂ ಸಮಂತಾ ಕೊನೆಯದಾಗಿ ಖುಷಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಬಳಿಕ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ಮೂಲಕ ಸಿನಿರಸಿಕರನ್ನು ರಂಜಿಸಲಿದ್ದಾರೆ. ಇದರ ಜೊತೆಗೆ ಆಕೆ ಸ್ವಂತ ಪ್ರೊಡಕ್ಷನ್ ಹೌಸ್ ಸಹ ಆರಂಭಿಸಿದ್ದಾರೆ. ಅದಕ್ಕೆ ತರಾಲಲಾ ಮೂವಿಂಗ್ ಪಿಕ್ಚರ್ಸ್ ಎಂದು ಹೆಸರಿಟ್ಟಿದ್ದಾರೆ. ತರಾಲಲಾ  ಬ್ಯಾನರ್‍ ಮೂಲಕ ಹೊಸ ಟ್ಯಾಲೆಂಟ್, ಯಂಗ್ ಫಿಲಂ ಮೇಕರ್ಸ್ ಗಳನ್ನು ಪ್ರೋತ್ಸಾಹಿಸುವುದಾಗಿ ಹಾಗೂ ಅರ್ಥಗರ್ಭಿತವಾದ, ಪ್ರಮಾಣಿಕವಾದ ಯೂನಿವರ್ಸಲ್ ಸಿನೆಮಾಗಳನ್ನು ಈ ಬ್ಯಾನರ್‍ ಮೂಲಕ ಹೊರತರುವುದಾಗಿ ಆಕೆ ತಿಳಿಸಿದ್ದಾರೆ.

Most Popular

To Top