Film News

ಯಾನಿಮಲ್ ಸಿನೆಮಾ ಸೊಷಿಯಲ್ ಡ್ಯಾಮೇಜ್ ಫಿಲಂ ಎಂದ ಆರ್.ಜಿ.ವಿ. ವಿಜಯ್ ದೇವರಕೊಂಡ ಗೆ ಮಾತ್ರ ಆ ಶಕ್ತಿ ಇದೆ ಎಂದ ನಿರ್ದೇಶಕ…….!

ತೆಲುಗು ಸಿನಿರಂಗದ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಭಾರಿ ಸದ್ದು ಮಾಡುವ ನಿರ್ದೇಶಕರಲ್ಲಿ ರಾಮ್ ಗೋಪಾಲ್ ವರ್ಮಾ ಮೊದಲಿಗರು ಎಂದರೇ ತಪ್ಪಾಗಲಾರದು. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವ ಆರ್‍.ಜಿ.ವಿ ಇದೀಗ ಯಾನಿಮಲ್ ಸಿನೆಮಾದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಬಗ್ಗೆ ಸಹ ಕಾಮೆಂಟ್ ಮಾಡಿದ್ದಾರೆ. ಇದೀಗ ವರ್ಮಾ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ.

ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಯಾನಿಮಲ್ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾ ಭಾರಿ ಕಲೆಕ್ಷನ್ ಮಾಡುತ್ತಾ ಪ್ರದರ್ಶನ ಆಗುತ್ತಿದೆ. ಸದ್ಯ ಈ ಸಿನೆಮಾ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ರಣಬೀರ್‍ ಹಾಗೂ ರಶ್ಮಿಕಾ ಈ ಸಿನೆಮಾದಲ್ಲಿ ಜೋಡಿಯಾಗಿ ನಟಿಸಿದ್ದು, ರಣಬೀರ್‍ ಸಿನೆಮಾದಲ್ಲಿನ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಮಗನಾಗಿ, ಪ್ರಿಯಕರನಾಗಿ ಮಾತ್ರವಲ್ಲದೇ, ಹಿರೋಯಿಜಂ, ಆಟಿಟ್ಯೂಡ್, ಅರೋಗೆನ್ಸಿ ಈ ರೀತಿ ಎಲ್ಲಾ ವಿಭಾಗಗಳಲ್ಲಿ ಅದ್ಬುತವಾಗಿ ನಟಿಸಿದ್ದಾರೆ. ಈ ಸಿನೆಮಾ ನೋಡಿದ ಬಳಿಕ ಪ್ರತಿಯೊಬ್ಬರು ಯಾನಿಮಲ್ ಸಿನೆಮಾ ರಣಬೀರ್‍ ಬಿಟ್ಟು ಮತ್ತೊಬ್ಬ ನಟ ಮಾಡಲಾರ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಈ ಬಗ್ಗೆ ಫೈರಿಂಗ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದಂತಹ ರಾಮ್ ಗೋಪಾಲ್ ವರ್ಮಾ ಯಾನಿಮಲ್ ಸಿನೆಮಾದ ಬಗ್ಗೆ ವಿಭಿನ್ನ ರೀತಿಯಲ್ಲಿ ಪ್ರಶಂಸೆ ಮಾಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನಕ್ಕೆ ನಾನು ಫಿದಾ ಆಗಿದ್ದೇನೆ ಎಂದು ಸಿನೆಮಾದ ಬಗ್ಗೆ ಸುಧೀರ್ಘವಾದ ರಿವ್ಯೂ ಮಾಡಿದ್ದಾರೆ. ಸಾಮಾನ್ಯವಾಗಿ ವರ್ಮಾ ಈ ರೀತಿ ರಿವ್ಯೂ ಮಾಡೋದೇ ರೇರ್‍ ಎಂದೇ ಹೇಳಬಹುದು. ಯಾನಿಮಲ್ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ಪಾತ್ರಕ್ಕೂ ಸಹ ಮೈಂಡ್ ಬ್ಲಾಕ್ ಆಗಿದೆ. ಆದರೆ ಆತನ ಪಾತ್ರದಲ್ಲಿ ಬೇರೊಬ್ಬನ್ನು ಊಹಿಸಿಕೊಳ್ಳ ಸಾಧ್ಯವಿಲ್ಲ ಎಂಬ ಮಾತಿಗೆ ರಿಯಾಕ್ಟ್ ಆಗಿದ್ದಾರೆ. ಯಾನಿಮಲ್ ಸಿನೆಮಾದಲ್ಲಿ ರಣಬೀರ್‍ ಪಾತ್ರ ಮಾಡುವಂತಹ ತಾಕತ್ತು ವಿಜಯ್ ದೇವರಕೊಂಡರವರಿಗೆ ಮಾತ್ರ ಇದೆ. ಅವರು ಮಾತ್ರ ಯಾನಿಮಲ್ ಸಿನೆಮಾಗೆ ಸೆಟ್ ಆಗುತ್ತಾರೆ ಎಂದು ಹೇಳಿದ್ದಾರೆ.

ಇನ್ನೂ ಯಾನಿಮಲ್ ಸಿನೆಮಾ ಬಗ್ಗೆ ಪ್ರಶಂಸೆ ಮಾಡಿದ ಆರ್‍.ಜಿ.ವಿ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಯಾನಿಮಲ್ ಸಿನೆಮಾ ಸೋಷಿಯಲ್ ಆಂಗಲ್ ನಲ್ಲಿ ನೋಡಿದರೇ ಅದು ದೊಡ್ಡ ಡ್ಯಾಮೇಜಿಂಗ್ ಫಿಲಂ ಎಂದೇ ಹೇಳಬಹುದು, ನ್ಯಾಷನಲ್ ಅವಾರ್ಡ್‌ಗಳಿಗೆ ಈ ಸಿನೆಮಾ ಸ್ಯೂಟ್ ಆಗುವುದಿಲ್ಲ. ಅರ್ಹತೆ ಪಡೆದುಕೊಳ್ಳುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ವರ್ಮಾ ತಮ್ಮ ನಿಜಂ ಯೂಟ್ಯೂಬ್ ಚಾನಲ್ ನಲ್ಲಿ ಹೇಳಿದ್ದಾರೆ.

Most Popular

To Top