Film News

ಸ್ಟಾರ್ ನಟಿ ಸಮಂತಾ ಡ್ರಗ್ಸ್ ತಗೋತಾರಂತೆ, ವೈರಲ್ ಆದ ಟ್ವೀಟ್, ಶಾಕ್ ಆದ ಅಭಿಮಾನಿಗಳು….!

ಸಿನೆಮಾ ರಂಗದ ಸೆಲೆಬ್ರೆಟಿಗಳ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಲೇ ಇರುತ್ತದೆ. ಆ ಸುದ್ದಿ ನಿಜವಿರಲಿ ಅಥವಾ ಸುಳ್ಳಾಗಿರಲಿ ಕಡಿಮೆ ಸಮಯದಲ್ಲೆ ಎಲ್ಲಾ ಕಡೆ ಬಿರುಗಾಳಿಯಂತೆ ಹರಿದಾಡುತ್ತಿದೆ. ಇದೀಗ ಸ್ಟಾರ್‍ ನಟಿ ಸಮಂತಾ ರವರ ಬಗ್ಗೆ ಸಹ ಒಂದು ರೂಮರ್‍ ಸಖತ್ ವೈರಲ್ ಆಗಿದೆ. ನಟಿ ಸಮಂತಾ ಆ ಸಮಯದಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂಬ ಟ್ವೀಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ಟ್ವೀಟ್ ಮಾಡಿದ್ದು ಯಾರು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿ ಸಮಂತಾ ಸಿನಿರಂಗದ ಸ್ಟಾರ್‍ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಆಕೆ ತಮ್ಮ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಗೆ ಬ್ರೇಕ್ ನೀಡಿ ವಿದೇಶದಲ್ಲಿ ಚಿಕಿತ್ಸೆಗಾಗಿ ತೆರಳಲಿದ್ದಾರಂತೆ. ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿದ್ದ ವಿಚಾರ ತಿಳಿದೇ ಇದೆ. ಈ ವ್ಯಾದಿಯಿಂದ ಆಕೆ ಹೊರಬಂದು ಸಿನೆಮಾಗಳಲ್ಲಿ ಮತ್ತೆ ಸಕ್ರಿಯರಾಗಿದ್ದರು. ಇದೀಗ ಮತ್ತೆ ಆಕೆ ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ. ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡು ವಿದೇಶಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಇನ್ನೂ ಸಮಂತಾ ರವರ ಬಗ್ಗೆ ಆಗಾಗ ಕೆಲವೊಂದು ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆಯ ಬಗ್ಗೆ ಮತ್ತೊಂದು ಸುದ್ದಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ರವರ ಬಗ್ಗೆ ಬಾಲಿವುಡ್ ಕ್ರಿಟಿಕ್ ಉಮೈರ್‍ ಸಂಧು ಎಂಬಾಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಮಂತಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆಂಬ ಟ್ವೀಟ್ ಮಾಡಿದ್ದಾರೆ. ಉಮೈರ್‍ ಸಂಧು ಸದಾ ವಿವಾದಾತ್ಮಕ ಟ್ವೀಟ್ ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅನೇಕ ಸ್ಟಾರ್‍ ನಟ-ನಟಿಯರ ಬಗ್ಗೆ ಅನೇಕ ರೂಮರ್‍ ಗಳನ್ನು ಹರಿಬಿಡುತ್ತಾರೆ. ಈ ಹಾದಿಯಲ್ಲೇ ಇದೀಗ ಸಮಂತಾ ರವರ ಬಗ್ಗೆ ಸಹ ಟ್ವೀಟ್ ಮೂಲಕ ಆರೋಪವೊಂದನ್ನು ಮಾಡಿದ್ದಾರೆ. ಸಮಂತಾ ಡಿಪ್ರೆಷನ್ ನಿಂದ ಹೊರಬರಲು ಡ್ರಗ್ಸ್ ತಗೋತಾರಂತೆ. ಡ್ರಗ್ಸ್ ತೆಗೆದುಕೊಂಡು ಕ್ಯಾರಿ ವ್ಯಾನ್ ನಿಂದ ಹೊರಬಂದಾಗ ಆಕೆಯ ಮುಖ ನೋಡಿದರೇ ಡ್ರಗ್ಸ್ ಸೇವನೆ ಮಾಡಿದವರಂತೆ ಕಾಣಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಸಮಂತಾ ರವರ ಬಗ್ಗೆ ಮಾಡಿದ ಈ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಮಂತಾ ವಿರೋಧಿಗಳು ಈ ವಿಚಾರವನ್ನು ನಿಜ ಇರಬಹುದು ಎಂದು ಊಹೆ ಮಾಡಿಕೊಳ್ಳುತ್ತಿದ್ದರೇ, ಮತ್ತೆ ಕೆಲವರು ಉಮೈರ್‍ ಸಂಧು ಹುಚ್ಚ, ಆತ ಎಲ್ಲವೂ ಸುಳ್ಳುಗಳನ್ನೇ ಹೇಳುತ್ತಿರುತ್ತಾರೆ. ಪ್ರಚಾರಕ್ಕಾಗಿ ಈ ರೀತಿಯ ಪೋಸ್ಟ್ ಗಳನ್ನು ಮಾಡುತ್ತಿರುತ್ತಾರೆ ಎಂದು ಆತನನ್ನು ಟ್ರೋಲ್ ಮಾಡುತ್ತಿದ್ದಾರೆ.

Most Popular

To Top