ಸ್ಲಿಮ್ ಲುಕ್ಸ್ ನಲ್ಲಿ ಕಾಣಿಸಿಕೊಂಡ ರಮ್ಯಾ, ಕನ್ನಡಿ ಮುಂದೆ ಸಖತ್ ಆಗಿ ಸ್ಟೆಪ್ಸ್ ಹಾಕಿದ ಮೋಹಕತಾರೆ….!

Follow Us :

ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡ ರಮ್ಯಾ ಸುಮಾರು ವರ್ಷಗಳ ಕಾಲ ಸಿನಿರಂಗದಿಂದ ದೂರವೇ ಉಳಿದಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ರಮ್ಯಾ ರವರ ಕಮ್ ಬ್ಯಾಕ್ ಗಾಗಿ ಕಾಯುತ್ತಿದ್ದರು. ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಆಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪೊಟೋಗಳು ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ರಮ್ಯಾ ಕನ್ನಡಿಯ ಮುಂದೆ ನಿಂತು ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋದಲ್ಲಿ ಆಕೆ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ.

ಮೋಹಕತಾರೆ ರಮ್ಯಾ ಸದ್ಯ ಸಿನೆಮಾಗಳು ಹಾಗೂ ಸೊಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಸಹ ಆರಂಭಿಸಿದ್ದಾರೆ. ಜೊತೆಗೆ ಡಾಲಿ ಧನಂಜಯ್ ಜೊತೆಗೆ ಉತ್ತರಾಕಾಂಡ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದಾರೆ. ವೆಕೇಷನ್ ಗಳಿಗೆ ಹಾರುತ್ತಾ ಅಲ್ಲಿನ ಕೆಲವೊಂದು ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ವೇಕೇಷನ್ ನಲ್ಲಿನ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ಸಖತ್ ವೈರಲ್ ಆಗಿವೆ. ಜೊತೆಗೆ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ನಟಿ ರಮ್ಯಾ ಹಂಚಿಕೊಂಡ ವಿಡಿಯೋದಲ್ಲಿ ಆಕೆ ಕನ್ನಡಿಯ ಮುಂದೆ ನಿಂತು ಸಕತ್ ಸ್ಟೆಪ್ಸ್ ಹಾಕಿದ್ದಾರೆ. ಬ್ಲಾಕ್ ಕಲರ್‍ ಶಾರ್ಟ್ ಧರಿಸಿ ಕನ್ನಡಿಯ ಮುಂದೆ ನಿಂತು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನೂ ವಿಡಿಯೋದಲ್ಲಿ ರಮ್ಯಾ ತುಂಬಾ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಅನೇಕರು ನೀವು ಎವರ್‍ ಗ್ರೀನ್ ಸುಂದರಿ ಎಂದು, ಮತ್ತೆ ಕೆಲವರು ನಿಮ್ಮನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಕಾಮೆಂಟ್ ಗಳು ಹರಿದು ಬರುತ್ತಿವೆ. ಇನ್ನೂ ರಮ್ಯಾ ಸ್ಲಿಮ್ ಆಗುವ ನಿಟ್ಟಿನಲ್ಲಿ ಲಂಡನ್ ಗೆ ತೆರಳಿದ್ದಾರೆ ಎನ್ನಲಾಗಿದೆ. ಲಂಡನ್ ನಲ್ಲಿ ಒಂದು ತಿಂಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದುಕೊಂಡಿದ್ದಾರಂತೆ. ಇದೀಗ ರಮ್ಯಾ ಫಿಟ್ ಆಗಿ ಮತ್ತೆ ವರ್ಕೌಟ್ ಆರಂಭಿಸಿದ್ದಾರೆ. ಜಿಮ್ ಮಾಡಿ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.

ಇನ್ನೂ ರಮ್ಯಾ ಉತ್ತರಾಕಾಂಡ ಸಿನೆಮಾದಲ್ಲಿ ನಟಿಸುತ್ತಿರುವುದಾಗಿ ಹೇಳಲಾಗಿತ್ತು. ಆದರೆ ಆಕೆ ಕೆಲವೊಂದು ಕಾರಣಗಳಿಂದ ಈ ಸಿನೆಮಾದಿಂದ ಹೊರಬಂದಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಈ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಇಲ್ಲ. ಜೊತೆಗೆ ರಮ್ಯಾ ತಮ್ಮ ಸ್ವಂತ ಬ್ಯಾನರ್‍ ನಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ.