ಬಾವಿ ಪತಿಯ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಆಂಕರ್ ರಶ್ಮಿ, ಪರೋಕ್ಷವಾಗಿ ಆತನ ಬಗ್ಗೆ ಹೇಳಿದ್ರಾ?

Follow Us :

ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಸ್ಟಾರ್‍ ಆಂಕರ್‍ ರಶ್ಮಿ ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತಿರುತ್ತಾರೆ. ತೆಲುಗಿನ ಕಾಮಿಡಿ ಶೋ ಜಬರ್ದಸ್ತ್ ಶೋ ನಿಂದ ಅನಸೂಯ ಹೊರಬಂದ ಬಳಿಕ ರಶ್ಮಿ ಶೋ ಅನ್ನು ನಡೆಸುತ್ತಿದ್ದಾರೆ. ಈ ಶೋ ನಲ್ಲಿ ಸುಡಿಗಾಲಿ ಸುಧೀರ್‍ ಹಾಗೂ ರಶ್ಮಿ ನಡುವಣ ಕೆಮಿಸ್ಟ್ರಿ ಶೋ ಗೆ ಮತಷ್ಟು ಹೈಲೈಟ್ ಎಂದೇ ಹೇಳಬಹುದಾಗಿದೆ. ಜೊತೆಗೆ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳೂ ಸಹ ಪ್ರಚಲಿತದಲ್ಲಿವೆ. ಇದೀಗ ರಶ್ಮಿ ತಾನು ಮದುವೆಯಾಗಲಿರುವ ಹುಡುಗನ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು ಅವರು ವೈರಲ್ ಆಗುತ್ತಿವೆ. ಜೊತೆಗೆ ಪರೋಕ್ಷವಾಗಿ ಸುಡಿಗಾಲಿ ಸುಧೀರ್‍ ಬಗ್ಗೆ ಹೇಳಿದ್ರಾ ಎಂಬ ಅನುಮಾನ ಮೂಡುವಂತೆ ಮಾಡಿದೆ.

ಆಂಕರ್‍ ಕಂ ನಟಿ ರಶ್ಮಿ ಜಬರ್ದಸ್ತ್ ಶೋ ಮೂಲಕ ತುಂಬಾನೆ ಫೇಂ ಪಡೆದುಕೊಂಡರು. ಸದ್ಯ ತೆಲುಗು ಕಿರುತೆರೆಯಲ್ಲಿ ಟಾಪ್ ಸ್ಥಾನದಲ್ಲಿದ್ದಾರೆ. ಅನೇಕ ಶೋಗಳನ್ನು, ಸಿನೆಮಾ ಕಾರ್ಯಕ್ರಮಗಳು, ಕಿರುತೆರೆ ಕಾರ್ಯಕ್ರಮಗಳ ಜೊತೆಗೆ ಆಗಾಗ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಆದರೆ ಕಿರುತೆರೆಯಲ್ಲಿ ಆಕೆಗೆ ಸಿಕ್ಕಿದ ಸಕ್ಸಸ್ ಸಿನೆಮಾಗಳಲ್ಲಿ ಇನ್ನೂ ಸಿಗಲಿಲ್ಲ ಎಂದು ಹೇಳಬಹುದಾಗಿದೆ. ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಅನಸೂಯ ರವರಂತೆ ಕ್ರೇಜ್ ಸಿಗಲಿಲ್ಲ ಎಂದೇ ಹೇಳಬಹುದು. ಇನ್ನೂ ರಶ್ಮಿ ಸಹ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಇನ್ನೂ ರಶ್ಮಿ ಅಭಿಮಾನಿಗಳಲ್ಲಿ ಸದಾ ಕಾಡುತ್ತಿರುವ ಪ್ರಶ್ನೆ ಆಕೆಯ ಮದುವೆ ಯಾವಾಗ ಎಂಬುದು. ಸುಮಾರು ದಿನಗಳಿಂದ ರಶ್ಮಿ ಹಾಗೂ ಸುಧೀರ್‍ ನಡುವೆ ಪ್ರೇಮಾಯಣ ನಡೆಯುತ್ತಿದೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಈ ಬಗ್ಗೆ ಅವರಿಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಲ್ಲ.

ಇದೀಗ ರಶ್ಮಿ ತಾನು ಮದುವೆಯಾಗುವಂತಹ ಹುಡುಗನ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ಸುಮಾರು ದಿನಗಳಿಂದ ರಶ್ಮಿ ಹಾಗೂ ಸುಧೀರ್‍ ನಡುವೆ ಪ್ರೇಮಾಯಣ ಸಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ಅವರಿಬ್ಬರಲ್ಲಿ ಯಾರೂ ಸಹ ಈ ಬಗ್ಗೆ ಅಫಿಷಿಯಲ್ ಅನೌನ್ಸ್ ಮೆಂಟ್ ಮಾಡಿಲ್ಲ. ಆದರೆ ಆಗಾಗ ಪರೋಕ್ಷವಾಗಿ ತಮ್ಮಲ್ಲಿನ ಭಾವನೆಗಳನ್ನು ಹೊರಹಾಕುತ್ತಿರುತ್ತಾರೆ. ಇನ್ನೂ ಶ್ರೀದೇವಿ ಡ್ರಾಮಾ ಕಂಪನಿ ಎಂಬ ಕಾರ್ಯಕ್ರಮದಲ್ಲಿ ರಶ್ಮಿ ಆಂಕರ್‍ ಆಗಿದ್ದಾರೆ. ಕಳೆದ ಎಪಿಸೋಡ್ ನಲ್ಲಿ ಕಿರುತೆರೆ ನಟಿಯರು ಮದುವೆಯಾಗುವ ಹುಡುಗರ ಬಗ್ಗೆ ಕಾಮೆಂಟ್ಸ್ ಮಾಡಿದ್ದರು. ಈ ವೇಳೆ ರಶ್ಮಿ ಸಹ ತನ್ನ ಮನಸ್ಸಿನಲ್ಲಿನ ಮಾತುಗಳನ್ನು ಹೊರಹಾಕಿದ್ದಾರೆ. ರಶ್ಮಿ ಹೇಳುತ್ತಾ ನಾನು ಮದುವೆಯಾಗುವ ಹುಡುಗ ನಾನು ಹೇಳಿದ್ದು ಮಾಡಬೇಕು, ಮಾಡಿದ್ದು ಹೇಳಬೇಕು ಎಂದು ಹೇಳಿದ್ದಾರೆ. ಇನ್ನೂ ಆಕೆ ಈ ಕಾಮೆಂಟ್ಸ್ ಮಾಡಿದ ಕೂಡಲೇ ಅನೇಕರು ಸುಧೀರ್‍ ರವರ ಬಗ್ಗೆ ಹೇಳಿದ್ದಾರೆ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ರಶ್ಮಿ ಮನಸ್ಸಿನಲ್ಲಿ ಸುಧೀರ್‍ ಮಾತ್ರವೇ ಇದ್ದಾರೆ ಎಂಬ ವಿಚಾರವನ್ನು ಮತ್ತೊಮ್ಮೆ ಆಕೆ ಸುಳಿವು ಕೊಟ್ರಾ ಎಂಬ ಅನುಮಾನಗಳು ಮೂಡವಂತೆ ಮಾಡಿದ್ದಾರೆ. ಇನ್ನೂ ಆಕೆ ಮದುವೆಯಾಗುವ ಯುವಕನ್ನು ಯಾವಾಗ ಪರಿಚಯಿಸುತ್ತಾರೆ ಎಂಬ ಸುದ್ದಿಗಾಗಿ ಆಕೆಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ರಶ್ಮಿ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.