Film News

ಬೆಳಕನ್ನು ಹುಡುಕಿಕೊಳ್ಳಬೇಕು ಎಂದ ಸಮಂತಾ, ವೈರಲ್ ಆದ ಇಂಟ್ರಸ್ಟಿಂಗ್ ಪೋಸ್ಟ್, ಧೈರ್ಯ ತುಂಬಿದ ಅಭಿಮಾನಿಗಳು…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇತ್ತೀಚಿಗೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾಗಿ ಸಿನೆಮಾಗಳು, ಸೋಷಿಯಲ್ ಮಿಡಿಯಾದಿಂದ ದೂರವಾಗಿ ಅಜ್ಞಾತದಲ್ಲಿದ್ದರು. ಯಶೋಧ ಸಿನೆಮಾದ ಪ್ರಮೋಷನ್ ನಲ್ಲಿ ಸಮಂತಾ ಕಾಣಿಸಿಕೊಂಡು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಜೊತೆಗೆ ತಾನು ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿರುವುದಾಗಿ ಸೋಷಿಯಲ್ ಮಿಡಿಯಾ ಮೂಲಕ ಹೇಳಿಕೊಂಡಿದ್ದರು. ಇದೀಗ ಸಮಂತಾ ಸೋಷಿಯಲ್ ಮಿಡಿಯಾ ಹಾಗೂ ಸಿನೆಮಾಗಳಲ್ಲೂ ಸಹ ಕಮ್ ಬ್ಯಾಕ್ ಆಗಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಸಖತ್ ವೈರಲ್ ಆಗಿದೆ.

ಸ್ಟಾರ್‍ ನಟಿ ಸಮಂತಾ ಇದೀಗ ಸೌತ್ ಅಂಡ್ ನಾರ್ತ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳಲ್ಲೇ ಸಮಂತಾ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ಶಾಕುಂತಲಂ ಸಹ ಬಿಡುಗಡೆಯಾಗಲಿದೆ. ಸಿಡಾಟೆಲ್ ವೆಬ್ ಸಿರೀಸ್ ಹಾಗೂ ಖುಷಿ ಸಿನೆಮಾದಲ್ಲೂ ಸಹ ಸಮಂತಾ ನಟಿಸುತ್ತಿದ್ದಾರೆ. ಹಾಲಿವುಡ್ ನ ಖ್ಯಾತ ನಿರ್ದೇಶಕರಾದ ರುಸ್ಸೋ ಬ್ರದರ್ಸ್ ನಿರ್ಮಾಣ ಮಾಡಿದ ಆಕ್ಷನ್ ಥ್ರಿಲ್ಲರ್‍ ಸಿಟಾಡೆಕ್ ಇಂಡಿಯನ್ ವರ್ಷನ್ ನಲ್ಲಿ ಸಮಂತಾ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಸಮಂತಾ ಫಸ್ಟ್ ಲುಕ್ ಸಹ ರಿಲೀಸ್ ಮಾಡಿದ್ದಾರೆ. ಇನ್ನೂ ಇದೀಗ ಸೊಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸಮಂತಾ ಸದಾ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಈ ಹಾದಿಯಲ್ಲೇ ಸಮಂತಾ ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆಕೆ ಹಂಚಿಕೊಂಡ ಪೋಸ್ಟ್ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ರವರಿಗೆ ತುಂಬಾನೆ ಫ್ಯಾನ್ ಫಾಲೋಯಿಂಗ್ ಇದೆ. ಬಾಲಿವುಡ್ ಸಿನೆಮಾಗಳ ಮೇಲೂ ಸಹ ಪುಲ್ ಪೋಕಸ್ ಇಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಅಪ್ಡೇಟ್ಸ್ ನೀಡುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೋಸ್ಟ್ ತುಂಬಾ ವೈರಲ್ ಆಗುತ್ತಿದೆ. ಸಮಂತಾ ಸದಾ ವೈಯುಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ತನ್ನ ಆರೋಗ್ಯ, ಸಿನೆಮಾಗಳ ವಿಚಾರಗಳು ಸೇರಿದಂತೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೂರ್ಯ ಕಿರಣಗಳಿಗೆ ಮುಖವನ್ನು ಕೊಟ್ಟು ಪೊಟೋ ಒಂದಕ್ಕೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗೆ ಆಕೆ ಬೆಳಕನ್ನು ಹುಡುಕಿಕೊಳ್ಳಬೇಕು ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ನೂ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಈ ಪೋಸ್ಟ್ ಗೆ ಕಾಮೆಂಟ್ ಗಳನ್ನು ಹಾಕುತ್ತಾ ನೀವು ಆರೋಗ್ಯವಾಗಿರುವುದು, ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿರುವುದು ನಮಗೆ ತುಂಬಾ ಸಂತೋಷ ತಂದಿದೆ ಎಂದು ಹೇಳುತ್ತಾ ಆಕೆಗೆ ಧೈರ್ಯ ಸಹ ತುಂಬುತ್ತಿದ್ದಾರೆ. ಮತ್ತೆ ಕೆಲವರು ಆಕೆಯ ಸೌಂದರ್ಯವನ್ನು ಹೊಗಳುತ್ತಿದ್ದಾರೆ.

Most Popular

To Top