ನಮ್ಮ ನಡುವೆ ಇರೋದು ಆ ಸಂಬಂಧ, ರೆಜಿನಾ-ಸಂದೀಪ್ ನಡುವಣ ರೂಮರ್ ಗಳಿಗೆ ಸಂದೀಪ್ ಕೊಟ್ಟ ಸ್ಪಷ್ಟನೆ…!

Follow Us :

ಸಿನಿರಂಗದಲ್ಲಿ ನಟ ಹಾಗೂ ನಟಿಯರ ಬಗ್ಗೆ ಅನೇಕ ಗಾಸಿಫ್ ಗಳು ಹರಿದಾಡುತ್ತಿರುತ್ತವೆ. ಬ್ಯಾಕ್ ಟು ಬ್ಯಾಕ್ ಒಂದೆರಡು ಸಿನೆಮಾಗಳಲ್ಲಿ ನಟಿಸಿದರೇ ಸಾಕು ಅವರಿಬ್ಬರ ನಡುವೆ ಅನೇಕ ರೂಮರ್‍ ಗಳು ಹುಟ್ಟಿಕೊಳ್ಳುತ್ತವೆ. ಈ ಹಾದಿಯಲ್ಲೇ ಸುಮಾರು ದಿನಗಳಿಂದ ತೆಲುಗು ಯಂಗ್ ಹಿರೋ ಸಂದೀಪ್ ಕಿಷನ್ ಹಾಗೂ ನಟಿ ರೆಜಿನಾ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಅವರಿಬ್ಬರ ಮದುವೆ ಸಹ ನಡೆಯಲಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಸಂದೀಪ್ ಕಿಷನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಿನೆಮಾ ಸೆಲೆಬ್ರೆಟಿಗಳ ಸುದ್ದಿ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದು ನಿಜವಾಗಿರಲಿ ಅಥವಾ ಸುಳ್ಳಾಗಿರಲಿ ಎಂಬುದನ್ನು ನೋಡದೇ ಕೂಡಲೇ ಎಲ್ಲಾ ಕಡೆ ವೈರಲ್ ಮಾಡಿಬಿಡುತ್ತಾರೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳ ವೈಯುಕ್ತಿಕ ವಿಚಾರಗಳಂತೂ ಬಿರುಗಾಳಿಯಂತೆ ಕ್ಷಣಗಳಲ್ಲೇ ವೈರಲ್ ಆಗಿಬಿಡುತ್ತದೆ. ಇದೇ ಹಾದಿಯಲ್ಲೇ ನಟ ಸಂದೀಪ್ ಕಿಷನ್ ಹಾಗೂ ರೆಜಿನಾ ಕಾಸಂಡ್ರ ರವರೂ ಸಹ ಈ ರೂಮರ್‍ ಗಳಿಗೆ ಬಿದ್ದಿದ್ದಾರೆ. ಸಾಮಾನ್ಯವಾಗಿ ಇಂತಹ ರೂಮರ್‍ ಗಳು ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ತುಂಬಾನೆ ಹರಿದಾಡುತ್ತಿರುತ್ತವೆ. ಈ ರೂಮರ್‍ ಗಳಿಗೆ ಕೆಲವರು ಕೌಂಟರ್‍ ನೀಡುತ್ತಾರೆ ಕೆಲವರು ಸುಮ್ಮನಿದ್ದು ಬಿಡುತ್ತಾರೆ. ಇದೀಗ ಸಂದೀಪ್ ಅವರ ಬಗ್ಗೆ ಹರಿದಾಡುತ್ತಿರುವ ರೂಮರ್‍ ಗಳಿಗೆ ಉತ್ತರ ನೀಡಿದ್ದಾರೆ.

ಸುಮಾರು ಹತ್ತುವರ್ಷಗಳಿಂದ ಈ ಜೋಡಿಯ ಬಗ್ಗೆ ರೂಮರ್‍ ಗಳು ಕೇಳಿಬರುತ್ತಲೇ ಇದೆ. ನಮ್ಮಿಬ್ಬರ ನಡುವೆ ಏನು ಇಲ್ಲ ಎಂದರೂ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ಸಂದೀಪ್ ಕಿಷನ್ ಈ ಕುರಿತು ಸ್ಪಂದಿಸಿದ್ದಾರೆ. ನಾವಿಬ್ಬರು ನಾಲ್ಕು ಸಿನೆಮಾಗಳನ್ನು ಮಾಡಿದ್ದೇವೆ. ರೆಜಿನಾ ನನಗೆ ಒಳ್ಳೆಯ ಸ್ನೇಹಿತೆ. ಸುಮಾರು 12 ವರ್ಷಗಳಿಂದ ನಾವಿಬ್ಬರು ಸ್ನೇಹಿತರು. ನಮ್ಮ ನಡುವೆ ಒಳ್ಳೆಯ ಸ್ನೇಹ ಇದೆ. ಆಕೆ ಬಾಂಬೆಗೆ ಬಂದರೇ, ನಮ್ಮ ತಂಗಿಯ ಮನೆಯಲ್ಲೇ ಇರುತ್ತಾರೆ. ನಾವು ಸ್ನೇಹಿತರು ಎಂದರೇ ನಿಮಗೆ ಆಸಕ್ತಿ ಇರುವುದಿಲ್ಲ ಅಲ್ಲವೇ, ನಮ್ಮ ಮಧ್ಯೆ ಏನೋ ಒಂದು ಇದೆ ಎಂದು ಹೇಳುವವರೆಗೂ ನಿಮಗೆ ಪ್ರಶಾಂತತೆ ಇರುವುದಿಲ್ಲ. ನಮ್ಮ ಮಧ್ಯೆ ಏನೋ ಇದೆ ಅಮದರೇ ನೀವು ಸರ್ಪೈಸ್ ಆಗುತ್ತೀರಾ. ಈಗಲೂ ನಾನು ಒಂದು ಹೇಳುತ್ತೇನೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೆ ಎಂದು ಹೇಳಿದ್ದಾರೆ.

ನಟ ಸಂದೀಪ್ ಪ್ರಸ್ತಾನಂ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ವೆಂಕಟಾದ್ರಿ ಎಕ್ಸ್ ಪ್ರೆಸ್, ಬಿರುವಾ ಸೇರಿದಂತೆ ಕೆಲವೊಂದು ಹಿಟ್ ಸಿನೆಮಾಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಹೊಂದಿರುವ ರೆಜಿನಾ ಸಂದೀಪ್ ಗೂ ಮುಂಚೆಯೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.  ಸಂದೀಪ್ ಹಾಗೂ ರೆಜಿನಾ ಇಬ್ಬರೂ ರಾರಾ ಕೃಷ್ಣಯ್ಯಮ ನಕ್ಷತ್ರಂ ಎಂಬ ತೆಲುಗು ಸಿನೆಮಾಗಳಲ್ಲಿ ನಟಿಸಿದ್ದರು. ಇನ್ನೂ ಇತ್ತೀಚಿಗಷ್ಟೆ ಸಂದೀಪ್ ಕಿಷನ್ ಮೈಖಲ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.