Film News

ಯು.ಎಸ್. ನಲ್ಲಿ ಪುಲ್ ಎಂಜಾಯ್ ಮೋಡ್ ನಲ್ಲಿ ಸಮಂತಾ, ಜಿಮ್ ನಲ್ಲಿ ಕಾಣಿಸಿಕೊಂಡ ಮಿಸ್ಟರಿ ಮ್ಯಾನ್, ಯಾರು ಎಂದ ನೆಟ್ಟಿಗರು….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಖುಷಿ ಸಿನೆಮಾ ಹಾಗೂ ಸಿಟಾಡೆಲ್ ಎಂಬ ವೆಬ್ ಸಿರೀಸ್ ಬಳಿಕ ಆಕೆ ಒಂದು ವರ್ಷದ ಮಟ್ಟಿಗೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಆಕೆ ವಿರಾಮ ಪಡೆದುಕೊಂಡಿದ್ದಾಗಿ ಹೇಳಲಾಗಿತ್ತು. ಆದರೆ ಆಕೆ ವೆಕೇಷನ್ ಗಳಿಗೆ ಹಾರುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಸಮಂತಾ ಚಿಕಿತ್ಸೆಗಾಗಿ ಅಮೇರಿಕಾಗೆ ಹೋಗಿದ್ದರು ಎನ್ನಲಾಗಿತ್ತು. ಆದರೆ ಸಮಂತಾ ಅಮೇರಿಕಾದಲ್ಲಿ ಪುಲ್ ಹ್ಯಾಪಿ ಮೋಡ್ ನಲ್ಲಿದ್ದು, ಅಲ್ಲಿನ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಈ ಹಿಂದೆ ಸಮಂತಾ ಮಯೋಸೈಟೀಸ್ ವ್ಯಾದಿಗೆ ಗುರಿಯಾಗಿದ್ದರ ಬಗ್ಗೆ ತಿಳಿದೇ ಇದೆ ಆ ಸಮಯದಲ್ಲಿ ಆಕೆ ಅಮೇರಿಕಾದಲ್ಲಿ ಈ ವ್ಯಾದಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಸಂಪೂರ್ಣವಾಗಿ ಆಕೆ ಗುಣಮುಖರಾಗಿಲ್ಲ. ಬಳಿಕ ಸಿನೆಮಾಗಳಲ್ಲಿ ಮತ್ತೆ ಸಕ್ರಿಯರಾದರು. ಇದೀಗ ಮಯೋಸೈಟಿಸ್ ವ್ಯಾಧಿಯಿಂದ ಸಂಪೂರ್ಣವಾಗಿ ಗುಣಮುಖರಾಗಲು ಆಕೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾಗಿ ತಿಳಿಸಿದ್ದರು. ಕಳೆದೆರಡು ದಿನಗಳ ಹಿಂದೆಯಷ್ಟೆ ಆಕೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅಮೇರಿಕಾಗೆ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸಮಂತಾ ಅಮೇರಿಕಾ ತಲುಪಿದ್ದು, ಅಲ್ಲಿ ಪುಲ್ ಖುಷಿಯಾಗಿದ್ದಾರೆ. ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಜಿಮ್ ನಲ್ಲಿ ಮಿಸ್ಟರಿ ಮ್ಯಾನ್ ಒಬ್ಬರು ಸಹ ಕಾಣಿಸಿಕೊಂಡಿದ್ದು, ಈ ಪೊಟೋ ಮತಷ್ಟು ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ತನ್ನ ತಾಯಿಯೊಂದಿಗೆ ಚಿಕಿತ್ಸೆ ಪಡೆದುಕೊಳ್ಳಲು ಅಮೇರಿಕಾಗೆ ಹೋಗಿದ್ದಾರೆ. ಕೆಲವು ದಿನಗಳ ಕಾಲ ಅಲ್ಲಿಯೇ ಆಕೆ ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ. ಆದರೆ ಸಮಂತಾ ಅಭಿಮಾನಿಗಳಿಗೆ ಶಾಕ್ ಒಂದನ್ನು ಕೊಟ್ಟಿದ್ದಾರೆ. ನ್ಯೂಯಾರ್ಕ್ ಹೋದ ಕೂಡಲೇ ಆಕೆ ಪುಲ್ ಹ್ಯಾಪಿ ಮೋಡ್ ಗೆ ತಲುಪಿದ್ದಾರೆ. ತನ್ನ ಸ್ನೇಹಿತರೊಂದಿಗೆ ಕೂಡಿ ನ್ಯೂಯಾರ್ಕ್ ಸಿಟಿಯಲ್ಲಿ ಸಖತ್ ಸದ್ದು ಮಾಡಿದ್ದಾರೆ. ಪುಲ್ ಖುಷಿಯಿಂದ ಕಾಣಿಸಿಕೊಂಡಿದ್ದು ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರ ಜೊತೆಗೆ ಸಮಂತಾ ಜಿಮ್ ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಈ ಪೊಟೋದಲ್ಲಿ ಓರ್ವ ವ್ಯಕ್ತಿ ಇದ್ದಾನೆ. ಸದ್ಯ ಆ ಮಿಸ್ಟರಿ ಮ್ಯಾನ್ ಯಾರು ಎಂಬ ಅನುಮಾನಗಳು ಮೂಡಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಆ ಮಿಸ್ಟರಿ ಮ್ಯಾನ್ ಯಾರು ಎಂದು ಕಾಮೆಂಟ್ ಗಳ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೂ ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನೆಮಾ ಇದೇ ಸೆ.1 ರಂದು ಅದ್ದೂರಿಯಾಗಿ ತೆರೆ ಕಾಣಲಿದೆ. ಇದೀಗ ಸಮಂತಾ ಸಿನೆಮಾ ಪ್ರಮೋಷನ್ ಗೆ ಕೈ ಕೊಟ್ಟು ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ವಿಜಯ್ ಅಭಿಮಾನಿಗಳೂ ವಿಮರ್ಶೆ ಮಾಡುತ್ತಿದ್ದಾರೆ. ಈ ಸಿನೆಮಾದ ಜೊತೆಗೆ ಸಮಂತಾ ಸಿಟಾಡೆಲ್ ಸಿರೀಸ್ ನಲ್ಲೂ ಸಹ ನಟಿಸಿದ್ದು, ಶೀಘ್ರದಲ್ಲೇ ಈ ಸಿರೀಸ್ ಸಹ ಸ್ಟ್ರೀಮಿಂಗ್ ಆಗಲಿದೆ.

Most Popular

To Top