Film News

ಕ್ಯೂಟ್ ಸೆಲ್ಫಿ ಜೊತೆಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಶ್ಮಿಕಾ ಮಂದಣ್ಣ, ಫ್ಲೈಯಿಂಗ್ ಕಿಸ್ ಗಳ ಮೂಲಕ ಟೆಂಪ್ಟ್ ಮಾಡಿದ ನ್ಯಾಷನಲ್ ಕ್ರಷ್….!

ಬಣ್ಣದ ಲೋಕದಲ್ಲಿ ಮೊದಲನೇ ಸಿನೆಮಾದ ಮೂಲಕವೇ ಕೆಲ ನಟಿಯರು ಸ್ಟಾರ್‍ ಗಳಾಗುತ್ತಾರೆ, ಕೆಲವರು ಮರೆಯಾಗುತ್ತಾರೆ. ಮೊದಲನೆ ಸಿನೆಮಾದ ಮೂಲಕ ಫೇಂ ಪಡೆದುಕೊಂಡು ಸ್ಟಾರ್‍ ಆದ ನಟಿಯರ ಸಾಲಿಗೆ ನಟಿ ರಶ್ಮಿಕಾ ಮಂದಣ್ಣ ಸೇರುತ್ತಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆ ನಟಿಯಾಗಿ ಭಾರಿ ಸಂಭಾವನೆಯನ್ನು ಪಡೆದುಕೊಳ್ಳುವ ನಟಿಯಾದರು. ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಹೊಂಧಿರುವ ಈಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದರು. ಆಕೆ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಆಕೆ ಹಂಚಿಕೊಂಡ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಸಹ ಆಗುತ್ತಿರುತ್ತದೆ. ಜೊತೆಗೆ ಅದೇ ಮಾದರಿಯಲ್ಲಿ ಆಕೆಯನ್ನು ವಿಮರ್ಶೆ ಸಹ ಮಾಡುತ್ತಿರುತ್ತಾರೆ. ಇನ್ನೂ ಆಗಾಗ ಆಕೆ ಕೆಲವೊಮ್ಮೆ ಜಾಹಿರಾತುಗಳಲ್ಲೂ ಸಹ ನಟಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳು ರಂಜಿಸುತ್ತಲೇ ಇರುತ್ತಾರೆ. ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇದೀಗ ಕ್ಯೂಟ್ ಸೆಲ್ಫಿಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇನ್ನೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ತನ್ನ ಇನ್ಸ್ಟಾ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಕ್ಯೂಟ್ ಸೆಲ್ಫಿ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಟ್ರೇಡ್ ಮಾರ್ಕ್ ಎಂದೇ ಕರೆಯಲಾಗುವ ಕ್ಯೂಟ್ ಸ್ಮೈಲ್ ಮೂಲಕ ಅಭಿಮಾನಿಗಳನ್ನು ಕಟ್ಟಿಹಾಕಿದ್ದಾರೆ. ಅದು ಸಾಲದು ಎಂಬಂತೆ ಕ್ಯೂಟ್ ಆಗಿ ಸ್ಮೈಲ್ ಕೊಡುತ್ತಲೇ ಫ್ಲೈಯಿಂಗ್ ಕಿಸ್ ಗಳನ್ನು ಕೊಟ್ಟಿದ್ದಾರೆ. ಮತ್ತೇರಿಸುವ ಕಣ್ಣುಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆ ಈ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಪೊಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳ ಜೊತೆಗೆ ಅನೇಕರು ಆಕೆಯ ಸೌಂದರ್ಯವನ್ನು ಹೊಗಳುತ್ತಾ ಕಾಮೆಂಟ್ ಗಳು ಲೈಕ್ ಗಳ ಸುರಿಮಳೆಗೈಯುತ್ತಿದ್ದಾರೆ.

ಇನ್ನೂ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಮಂದಣ್ಣ ಕೈಯಲ್ಲಿ ಭಾರಿ ಪ್ರಾಜೆಕ್ಟ್ ಗಳಿವೆ. ಬಾಲಿವುಡ್ ನಲ್ಲಿ ಯಾನಿಮಲ್ ಎಂಬ ಸಿನೆಮಾದಲ್ಲಿ ಹಾಗೂ ಪುಷ್ಪಾ-2 ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಪುಷ್ಪಾ-2 ಸಿನೆಮಾದ ಮೇಲೆ ರಶ್ಮಿಕಾ ಭಾರಿ ನಿರೀಕ್ಷೆಯನ್ನು ಸಹ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ರೈನ್ ಬೋ ಹಾಗೂ ಕಾಲಿವುಡ್ ಸ್ಟಾರ್‍ ನಟ ಧನುಷ್ ರವರ D51 ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ.

Most Popular

To Top