Film News

ಸ್ಲೀವ್ ಲೆಸ್ ಬ್ಲಾಕ್ ಜಾಕೆಟ್, ಟೈಟ್ ಟಾಪ್ ಧರಿಸಿ ಮುಂಬೈನಲ್ಲಿ ಕಾಣಿಸಿಕೊಂಡ ಸಮಂತಾ, ಕ್ಯೂಟ್ ನೆಸ್ ಓವರ್ ಲೋಡ್ ಎಂದ ಫ್ಯಾನ್ಸ್….!

ಸ್ಟಾರ್‍ ನಟಿ ಸಮಂತಾ ಆರೋಗ್ಯದ ದೃಷ್ಟಿಯಿಂದ 1 ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡು ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗಿದ್ದ ವಿಚಾರ ತಿಳಿದೇ ಇದೆ. ಆಕೆ ಒಪ್ಪಿಕೊಂಡ ಸಿನೆಮಾ ಶೂಟಿಂಗ್ ಮುಗಿಸಿ ಆಕೆ  ಮಾನಸಿಕ ನೆಮ್ಮದಿ ಹಾಗೂ ಆರೋಗ್ಯದ ದೃಷ್ಟಿಯಿಂದ ನ್ಯೂಯಾರ್ಕ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆಕೆ ಕೊನೆಯದಾಗಿ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಸಹ ಕಂಡಿದೆ. ವಿಜಯ್ ಹಾಗೂ ಸಮಂತಾ ಇಬ್ಬರಿಗೂ ಈ ಸಿನೆಮಾ ಬೂಸ್ಟ್ ನೀಡಿದೆ ಎಂದೇ ಹೇಳಲಾಗುತ್ತಿದೆ.

ಕಳೆದ ವರ್ಷ ಸಮಂತಾ ತಾನು ಮಯೋಸೈಟೀಸ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿದ್ದಾಗಿ ಸೋಷಿಯಲ್ ಮಿಡಿಯಾ ಮೂಲಕ ಹೇಳಿಕೊಂಡಿದ್ದರು. ಈ ಸುದ್ದಿ ತಿಳಿದ ಸಮಂತಾ ಅಭಿಮಾನಿಗಳು ಶಾಕ್ ಆಗಿದ್ದರು. ಬಳಿಕ ಆಕೆ ದೃತಿಗೆಡದೆ ಮಯೋಸೈಟಿಸ್ ವ್ಯಾಧಿಯನ್ನು ಸಹ ಎದುರಿಸಿ ನಿಂತರು. ಈ ವ್ಯಾದಿಯಿಂದ ಕೊಂಚ ಚೇತರಿಸಿಕೊಂಡ ಸಿನೆಮಾಗಳಲ್ಲಿ ಮತ್ತೆ ಕಾಣಿಸಿಕೊಂಡರು. ಮಯೋಸೈಟೀಸ್ ಬಳಿಕ ಆಕೆ ಯಶೋಧ, ಶಾಕುಂತಲಂ ಎಂಬ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಯಶೋಧ ಕೊಂಚ ಸಕ್ಸಸ್ ಕಂಡರೂ, ಶಾಕುಂತಲಂ ಸಿನೆಮಾ ಮಾತ್ರ ಆಲ್ ಟೈಂ ಡಿಜಾಸ್ಟರ್‍ ಆಗಿಯೇ ಉಳಿಯಿತು. ಬಳಿಕ ವಿಜಯ್ ದೇವರಕೊಂಡ ಹಾಗೂ ಸಮಂತಾ ರವರ ಕಾಂಬಿನೇಷನ್ ನಲ್ಲಿ ತೆರೆಕಂಡ ಖುಷಿ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿತ್ತು. ಇನ್ನೂ ಸಮಂತಾ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷದ ಕಾಲ ಸಿನೆಮಾಗಳಿಂದ ದೂರ ಉಳಿಯುವುದಾಗಿ ತಾನು ಸೈನ್ ಮಾಡಿದ ಖುಷಿ ಸಿನೆಮಾ ಹಾಗೂ ಸಿಟಾಡೆಲ್ ವೆಬ್ ಸಿರೀಸ್ ಮುಗಿಸಿ ಬ್ರೇಕ್ ಪಡೆದುಕೊಂಡಿದ್ದಾರೆ.

ಸಂಪೂರ್ಣ ಆರೋಗ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಮಂತಾ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡು ಆಧ್ಯಾತ್ಮಿಕ ಪ್ರದೇಶಗಳು, ಪ್ರಾಕೃತಿಕ ಪ್ರದೇಶಗಳಲ್ಲಿ ಸುತ್ತಾಡಿದರು. ಆಗಾಗ ಸ್ಪೇಷಲ್ ಈವೆಂಟ್ ಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಆಕೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆಕೆ ಸ್ಲೀವ್ ಲೆಸ್ ಬ್ಲಾಖ್ ಜಾಕೆಟ್, ಟೈಟ್ ಡ್ರೆಸ್ ಧರಿಸಿ, ಬ್ಲಾಕ್ ಜೀನ್ಸ್ ಹಾಕಿಕೊಂಡು ಪ್ರಸಿದ್ದ ಸ್ಟುಡಿಯೋ ದಿಂದ ಹೊರಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಕ್ಯಾಮೆರಾಮೆನ್ ಗಳು ಆಕೆಯ ಪೊಟೋ ತೆಗೆಯಲು ಮುಗಿಬಿದ್ದರು. ಈ ವೇಳೆ ಸಮಂತಾ ಸಹ ಅವರಿಗೆ ನಗುತ್ತಾ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಪೊಟೋಗಳನ್ನು ನೋಡಿದ ಅಭಿಮಾನಿಗಳು ಕ್ಯೂಟ್ ನೆಸ್ ಓವರ್‍ ಲೋಡೆಡ್, ಬ್ಯೂಟಿಪುಲ್ ಎಂಬೆಲ್ಲಾ ಕಾಮೆಂಟ್ ಗಳೊಂದಿಗೆ ಪೊಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಕೆಲವು ತಿಂಗಳುಗಳಿಂದ ಹೆಚ್ಚಾಗಿ ವಿದೇಶದಲ್ಲೇ ಕಾಣಿಸುತ್ತಿದ್ದ ಸಮಂತಾ ರವರನ್ನು ಮುಂಬೈನಲ್ಲಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೊತೆಗೆ ಸ್ಟುಡಿಯೋ ದಿಂದ ಹೊರಬಂದ ಕಾರಣದಿಂದ ಆಕೆ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಾರಾ ಎಂಬ ಭಾವನೆ ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಸಮಂತಾ ಯಾವಾಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಶೀಘ್ರದಲ್ಲೇ ಸಮಂತಾ ಸಿಟಾಡೆಲ್ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Most Popular

To Top