ರಾಹುಲ್ ಗಾಂಧಿ ಹೊಸ ಅವತಾರ, ರಸ್ತೆ ಬದಿಯ ಹೋಟೆಲ್ ನಲ್ಲಿ ದೋಸೆ ಹಾಕಿದ ರಾಹುಲ್ ಗಾಂಧಿ….!

Follow Us :

ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರು ರಾಜಕೀಯದ ಜೊತೆಗೆ ಆಗಾಗ ಕೆಲವೊಂದು ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಸದ್ಯ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಪ್ರಚಾರ ಭರದಲ್ಲಿದೆ. ಇದೇ ಸಮಯದಲ್ಲಿ ರಾಹುಲ್ ಗಾಂಧಿ ಕರೀಂ ನಗರ ಜಿಲ್ಲೆಯಿಂದ ಜಗಿತ್ಯಾಲಗೆ ಹೋಗುವ ಮಾರ್ಗಮಧ್ಯೆಯಲ್ಲಿ ರಸ್ತೆ ಬದಿಯಲ್ಲಿರುವ ಹೋಟೆಲ್ ಒಂದರಲ್ಲಿ ದೋಸೆ ಹಾಕಿ ಎಲ್ಲರ ಗಮನ ಸೆಳೆದರು.

ತೆಲಂಗಾಣದ ಜಿಗಿತ್ಯಾಲಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ರಸ್ತೆ ಬದಿಯಲ್ಲಿದ್ದ ಚಿಕ್ಕ ಹೋಟೆಲ್ ನಲ್ಲಿ ಸ್ಥಳೀಯ ಮುಖಂಡರ ಜೊತೆಗೆ ಹೋಗಿ ದೋಸೆ ಹಾಕಿ ಎಲ್ಲರ ಗಮನ ಸೆಳೆದರು. ಜೊತೆಗೆ ಆ ದೋಸೆಯನ್ನು ಮುಖಂಡರೊಂದಿಗೆ ಸವಿದರು. ಇದೇ ಸಮಯದಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದವರನ್ನು ಕರೆದು, ಮಕ್ಕಳಿಗೆ ಚಾಕಲೇಟ್ ನೀಡಿ ಅವರೊಂದಿಗೆ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಸದ್ಯ ತೆಲಂಗಾಣದಲ್ಲಿ ಸಿರಿವಂತರ ಆಡಳಿತವಿದೆ. ಸಾರ್ವಜನಿಕ ತೆಲಂಗಾಣ ಬಯಸುತ್ತಿದ್ದಾರೆ. ಈ ಕನಸು ಶೀಘ್ರದಲ್ಲೇ ಈಡೇರಲಿದೆ. ಜನಬಯಸಿದ ಸರ್ಕಾರ ಬರಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಇನ್ನೂ ತೆಲಂಗಾಣದಲ್ಲಿ ರಾಜಕೀಯ ದಿನೇ ದಿನೇ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿವೆ. ಜೊತೆಗೆ ಕಾಂಗ್ರೇಸ್ ಪಕ್ಷ ಸಹ ವಿವಿಧ ಗ್ಯಾರಂಟಿಗಳನ್ನು ಜಾರಿ ಗೊಳಿಸುವುದಾಗಿ ಭರವಸೆ ನೀಡಿದೆ. ಬಿಜೆಪಿ ಹಾಗೂ ಬಿ.ಆರ್‍.ಎಸ್ ನಡುವೆ ಒಪ್ಪಂದ ಮಾಡಿಕೊಂಡಿದೆ ಎಂದು ಗಂಭೀರ ಆರೋಪಗಳನ್ನು ಸಹ ರಾಹುಲ್ ಗಾಂಧಿ ಮಾಡಿದ್ದಾರೆ.