News

ಕೇರಳ-ತಮಿಳುನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ, ಕರ್ನಾಟಕದಲ್ಲೂ ಸಹ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ…!

ಕೇರಳ, ತಮಿಳುನಾಡು, ಕರ್ನಾಟಕ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರ ಭಾಗದಲ್ಲಿ ಅ.24 ರಿಂದ ಅ.25 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲೂ ಈಶಾನ್ಯ ರಾಜ್ಯಗಳ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಹಿಮಪಾತದೊಂದಿಗೆ ಶೀತ ಅಲೆಯು ಸಹ ಬರಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ದೇಶದಾದ್ಯಂತ ಮುಂಗಾರು ಮಳೆ ಕಡಿಮೆಯಾದರೂ ಸಹ ಕೆಲವೊಂದು ರಾಜ್ಯಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ದಕ್ಷಿಣ ಭಾರತದ ಹಲವು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಅ.25 ರವರೆಗೆ ಭಾರಿ ಮಳೆಯ ಮುನ್ಸೂಚನೆ ಸಹ ನೀಡಲಾಗಿತ್ತು. ಇದೀಗ ಬಿಹಾರ ಭಾಗದಲ್ಲಿ ದುರ್ಗಾ ಪೂಜೆ, ನವಮಿ ಹಾಗೂ ದಶಮಿ ಸಮಯದಲ್ಲಿ ಭಾರಿ ಮಳೆಯಾಗಬಹುದು ಎನ್ನಲಾಗಿದೆ. ಈಶಾನ್ಯ ಭಾರತದ ಸಿಕ್ಕಿಂ, ನಾಗಲ್ಯಾಂಡ್ ನಲ್ಲೂ ಸಹ ಮಳೆಯಾಗಬಹುದು ಎನ್ನಲಾಗಿದೆ. ಐಎಂಡಿ ನೀಡಿ ಮುನ್ಸೂಚನೆಯಂತೆ ಅ.25 ರವರೆಗೆ ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರದಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.

ಇನ್ನೂ ಕೇರಳ, ತಮಿಳುನಾಡಿನ ಕೆಲವು ಕಡೆ ಭಾರೀ ಮಳೆಯಾಗಲಿದೆ. ಆಂಧ್ರಪ್ರದೇಶ, ಕರ್ನಾಟಕ ಹಾಗೂ ಪಶ್ಚಿಮ ಹಿಮಾಲಯದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹೇಳಲಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಮುಂಗಾರು ಮಳೆ ಪೂರ್ಣಗೊಂಡಿದ್ದು, ಹಿಂಗಾರು ಶುರುವಾಗಿದೆ. ರಾಜ್ಯದಲ್ಲೂ ಸಹ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಅ.24 ರವರೆಗೆ ಮಳೆ ಮುಂದುವರೆಯಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಮೈಸೂರು, ಹಾಸನ, ಕೋಲಾರ, ಚಿಕ್ಕಮಗಳೂರು ಹಾಗೂ ಚಾಮರಾಜನಗರದ ವ್ಯಾಪ್ತಿಯಲ್ಲಿ ಹಗುರ ಮಳೆಯಾಗಲಿದೆ ಐಎಂಡಿ ಸೂಚನೆ ನೀಡಿದೆ.

Most Popular

To Top