Film News

ಐಸ್ ಬಾತ್ ಪೊಟೋ ಹಂಚಿಕೊಂಡ ಸ್ಯಾಮ್, ಇದು ಟಾರ್ಚರ್ ಸಮಯ ಎಂದ ಸ್ಟಾರ್ ನಟಿ ಸಮಂತಾ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಬಾಲಿವುಡ್ ನಲ್ಲೂ ಸಹ ಸದ್ದು ಮಾಡಲಿದ್ದಾರೆ. ಆಕೆ ವೈಯುಕ್ತಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ಹೊರಬಂದು ಇದೀಗ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಇನ್ನೂ ಆಕೆ ಮಯೋಸೈಟಿಸ್ ಎಂಬ ವ್ಯಾದಿಗೆ ತುತ್ತಾದ ಬಳಿಕ ಇದೀಗ ಚೇತರಿಸಿಕೊಳ್ಳುತ್ತಾ ಸಿನೆಮಾಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಐಸ್ ಬಾತ್ ಮಾಡಿದ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಸಮಂತಾ ಅಭಿನಯದ ಶಾಕುಂತಲಂ ಸಿನೆಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಭಾರಿ ನಿರೀಕ್ಷೆಯಿಂದ ಈ ಸಿನೆಮಾ ತೆರೆಗೆ ಬಂದಿದ್ದು ಬಾಕ್ಸ್ ಆಫೀಸ್ ನಲ್ಲಿ ಡಿಜಾಸ್ಟರ್‍ ಸಿನೆಮಾ ಆಯಿತು. ಸಿನೆಮಾದ ಪ್ರಮೋಷನ್ ಸಹ ಅದ್ದೂರಿಯಾಗಿಯೇ ನಿರ್ವಹಿಸಿದ್ದರು. ಆದರೆ ಸಿನೆಮಾದ ಮೇಲೆ ಎಲ್ಲಾ ನಿರೀಕ್ಷೆ ಹುಸಿಯಾಗಿತ್ತು. ದೊಡ್ಡ ಡಿಜಾಸ್ಟರ್‍ ಸಿನೆಮಾ ಆಗಿದೆ. ಇದೀಗ ಸಮಂತಾ ಸಿನೆಮಾಗಳ ಜೊತೆಗೆ ವೆಬ್ ಸಿರೀಸ್ ನಲ್ಲೂ ಸಹ ನಟಿಸುತ್ತಿದ್ದಾರೆ. ಸದ್ಯ ಆಕೆ ಖುಷಿ ಹಾಗೂ ಸಿಟಾಡೆಲ್ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಸಿಟಾಡೆಲ್ ವೆಬ್ ಸಿರೀಸ್ ಪಕ್ಕಾ ಆಕ್ಷನ್ ಸನ್ನಿವೇಶಗಳಿಂದ ಕೂಡಿ ವೆಬ್ ಸಿರೀಸ್ ಆಗಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿ ಸಮಂತಾ ಸಹ ತುಂಬಾನೆ ಕಷ್ಟ ಪಟ್ಟಿದ್ದಾರೆ. ಜಿಮ್ ನಲ್ಲಿ ಹೆವಿ ವರ್ಕೌಟ್ಸ್, ಮಾರ್ಷಲ್ ಆರ್ಟ್ಸ್ ತರಬೇತಿ ಸಹ ಪಡೆದುಕೊಂಡಿದ್ದಾರೆ. ಈ ಸಿರೀಸ್ ಗಾಗಿ ಆಕೆ ಗಾಯಗಳನ್ನು ಮಾಡಿಕೊಂಡ ಪೊಟೋಗಳನ್ನು ಸಹ ಶೇರ್‍ ಮಾಡಿದ್ದರು.

ಇದೀಗ ಸಮಂತಾ ಮತ್ತೊಂದು ಪೊಟೋ ಮೂಲಕ ಸುದ್ದಿಯಾಗಿದ್ದಾರೆ. ಐಸ್ ಬಾತ್ ಮಾಡುವ ಪೊಟೋ ಶೇರ್‍ ಮಾಡಿ ಇಂಟ್ರಸ್ಟಿಂಗ್ ಕ್ಯಾಪ್ಷನ್ ಹಾಕಿದ್ದಾರೆ. ಸಮಸ್ಯೆಗಳಿಂದ ಹೊರಬರಲು ಈ ರೀತಿ ಮಾಡುತ್ತಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ಆಕೆ ಆಕ್ಷನ್ ದೃಶ್ಯಗಳಲ್ಲಿ ನಟಿಸಬೇಕಾದ ಕಾರಣದಿಂದ ಅದರಿಂದ ಉಪಶಮನಕ್ಕಾಗಿ ಐಸ್ ಬಾತ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಐಸ್ ಬಾತ್ ಅಂದರೇ ಸಾಮಾನ್ಯವಾದ ವಿಚಾರವಲ್ಲ. ಸಿನೆಮಾಗಾಗಿ ಸಮಂತಾ ಭಾರಿ ಕಷ್ಟ ಪಡುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನೂ ಸಮಂತಾ ಶೇರ್‍ ಮಾಡಿದ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳು ಸೇರಿದಂತೆ ಅನೇಕರಿಂದ ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ.

ಇನ್ನೂ ಸಮಂತಾ ಈ ಪೊಟೋ ನೋಡಿದ ಅನೇಕರು ಶಾಕ್ ಆಗಿದ್ದಾರೆ. ಆಕೆಯ ಕರ್ತವ್ಯ ನಿಷ್ಟೆ ಹಾಗೂ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹಾಲಿವುಡ್ ನ ಸಿಟಾಡೆಲ್ ಸಿರೀಸ್ ನ ಇಂಡಿಯನ್ ವರ್ಷನ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಸಮಂತಾ ಜೊತೆಗೆ ವರುಣ್ ಧವನ್ ನಟಿಸುತ್ತಿದ್ದು, ರಾಜ್ ಅಂಡ್ ಡಿಕೆ ಈ ಸಿರೀಸ್ ನಿರ್ದೇಶನ ಮಾಡುತ್ತಿದ್ದು, ಈ ಸಿರೀಸ್ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇನ್ನೂ ಈ ಸಿನೆಮಾದ ಜೊತೆಗೆ ತೆಲುಗಿನ ಖುಷಿ ಸಿನೆಮಾದಲ್ಲಿ ಸಹ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ವಿಜಯ್ ದೇವರಕೊಂಡಗೆ ಜೊತೆಯಾಗಿದ್ದಾರೆ.

Most Popular

To Top