ಮದುವೆಯಾಗುತ್ತೇನೆ ಹುಡುಗನನ್ನು ಹುಡುಕಿಕೊಡಿ ಎಂದ ಮೋಹಕ ತಾರೆ ರಮ್ಯಾ, ವೈರಲ್ ಆದ ಕಾಮೆಂಟ್ಸ್….!

Follow Us :

ಚಂದನವನದಲ್ಲಿ ಅನೇಕ ವರ್ಷಗಳ ಕಾಲ ಸ್ಟಾರ್‍ ನಟಿಯಾಗಿ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ರಮ್ಯಾ ಒಬ್ಬರಾಗಿದ್ದಾರೆ. ಆಕೆ ಸಿನೆಮಾಗಳಿಂದ ದೂರ ಉಳಿದು ವರ್ಷಗಳು ಕಳೆದರೂ ಸಹ ಆಕೆಯ ಕ್ರೇಜ್ ಹಾಗೂ ಫಾಲೋಯಿಂಗ್ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಇತ್ತಿಚಿಗಷ್ಟೆ ತಾವು ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇದೀಗ ರಮ್ಯಾ ಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಆಕೆ ನಗುತ್ತಾ ಉತ್ತರ ನೀಡಿದ್ದಾರೆ. ಹುಡುಗನನ್ನು ಹುಡುಕಿಕೊಡಿ ಮದುವೆಯಾಗುತ್ತೇನೆ ಎಂದಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ಸ್ ಗಳು ವೈರಲ್ ಆಗುತ್ತಿದೆ.

ನಟಿ ರಮ್ಯಾ ಸದ್ಯ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಆಕೆ ಚುನಾವಣಾ ಪ್ರಚಾರ ಮಾಡುತ್ತಿದ್ದು, ಈ ವೇಳೆ ರಮ್ಯಾ ರವರಿಗೆ ಅನೇಕ ಪ್ರಶ್ನೆಗಳು ಸಹ ಎದುರಾಗಿದೆ. ಇನ್ನೂ ರಮ್ಯಾ ರವರಿಗೆ ಕೇಳಿದ ಬಹುತೇಕ ಹೆಚ್ಚು ಪ್ರಶ್ನೆಗಳು ಮದುವೆಗೆ ಸಂಬಂಧಿಸಿದ್ದಾಗಿದೆ. ಅದಕ್ಕೆ ಆಕೆ ಸಹ ಫನ್ನಿಯಾಗಿ ಉತ್ತರ ನೀಡಿದ್ದಾರೆ. ಸದ್ಯ ನನಗೆ ಹುಡುಗ ಸಿಗುತ್ತಿಲ್ಲ. ನೀವೇ ಹುಡುಗನನ್ನು ಹುಡುಕಿಕೊಡಿ ಎಂದು ಅಲ್ಲಿದ್ದ ಮಾದ್ಯಮದವರಿಗೆ ತಿಳಿಸಿದ್ದಾರೆ. ನನಗೂ ಸಹ ಹುಡುಗನನ್ನು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ಗೌಡರ ಹುಡುಗನನ್ನು ಹುಡುಕಿಕೊಡಿ ನಾನು ಮದುವೆಗೆ ಸಿದ್ದವಾಗಿದ್ದೇನೆ. ಮಂಡ್ಯದಲ್ಲೇ ಸ್ವಯಂ ವರ ಏರ್ಪಡಿಸಿ ಇಲ್ಲೇ ಹುಡುಗನನ್ನು ನೋಡಿ ಮದುವೆಯಾಗುತ್ತೇನೆ ಎಂದು ಫನ್ನಿಯಾಗಿ ಮಾತನಾಡಿದ್ದಾರೆ.

ಇನ್ನೂ ರಮ್ಯಾ ಎಲ್ಲೇ ಕಾಣಿಸಿಕೊಂಡರೂ ಸಹ ಆಕೆಗೆ ಮದುವೆ ಕುರಿತು ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ. ಆದರೆ ರಮ್ಯಾ ಮಾತ್ರ ಆ ಪ್ರಶ್ನೆಗಳಿಗೆ ಬೇಸರ ಗೊಳ್ಳದೇ ನಗುತ್ತಲೇ ಉತ್ತರ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಮಂಡ್ಯ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಸಹ ಮದುವೆಯ ಬಗ್ಗೆ ಪ್ರಶ್ನೆ ಬಂದಿದ್ದು ಅದಕ್ಕೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇನ್ನೂ ಸಿನೆಮಾ ಹಾಗೂ ರಾಜಕೀಯದಿಂದ ಸುಮಾರು ವರ್ಷಗಳ ಕಾಲ ದೂರವೇ ಇದ್ದ ರಮ್ಯಾ ಕೆಲವು ತಿಂಗಳುಗಳ ಹಿಂದೆಯಷ್ಟೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದರು. ತಮ್ಮದೇ ನಿರ್ಮಾಣ ಸಂಸ್ಥೆಯೊಂದನ್ನು ಸಹ ಶುರು ಮಾಡಿ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ರಾಜ್ ಬಿ ಶಟ್ಟಿ ನಿರ್ದೇಶನ ಹಾಗೂ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಈ ಸಿನೆಮಾದಲ್ಲಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಆಕೆ ಕೇವಲ ನಿರ್ಮಾಪಕಿಯಾಗಿದ್ದಾರೆ.

ಆದರೆ ರಮ್ಯಾ ಡಾಲಿ ಧನಂಜಯ್ ರವರ ಉತ್ತರಾಕಾಂಡ ಸಿನೆಮಾದಲ್ಲಿ ರಮ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ರಮ್ಯಾ ಕನ್ನಡ ಸಿನೆಮಾಗಲ ಫಂಕ್ಷನ್ ಗಳಲ್ಲಿ ಹಾಜರಾಗುತ್ತಾ ಕನ್ನಡ ಸಿನೆಮಾಗಳನ್ನು ಪ್ರೋತ್ಸಾಹ ಮಾಡುತ್ತಿರುತ್ತಾರೆ. ಜೊತೆಗೆ ಕನ್ನಡದ ಸಿನೆಮಾಗಳ ಬಗ್ಗೆ ಅನೇಕ ಬಾರಿ ಧ್ವನಿ ಎತ್ತುತ್ತಿರುತ್ತಾರೆ. ಇದೀಗ ಕಾಂಗ್ರೇಸ್ ಪಕ್ಷದ ಸ್ಟಾರ್‍ ಪ್ರಚಾರಕಿಯಾಗಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.