ಆಕೆ ನನ್ನ ಕ್ರಷ್ ಎಂದ ಅಕ್ಕಿನೇನಿ ನಾಗಚೈತನ್ಯ, ಕ್ರಷ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಚೈತು…..!

Follow Us :

ತೆಲುಗು ಸಿನಿರಂಗದ ಸ್ಟಾರ್‍ ಎವರ್‍ ಗ್ರೀನ್ ಹಿರೋ ಅಕ್ಕಿನೇನಿ ನಾಗಾರ್ಜುನ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಕಸ್ಟಡಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಚೈತು ಕೆರಿಯರ್‍ ನಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಸಿನೆಮಾ ತೆರೆಗೆ ಬರಲಿದೆ. ಇದೀಗ ಸಂದರ್ಶನವೊಂದರಲ್ಲಿ ಚೈತನ್ಯ ಸಂಚಲನಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆತನ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ಕಸ್ಟಡಿ ಸಿನೆಮಾ ಶ್ರೀನಿವಾಸ ಸಿಲ್ವರ್‍ ಸ್ಕ್ರೀನ್ ಬ್ಯಾನರ್‍ ನಡಿ ಚಿತ್ತೂರಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನೆಮಾ ರಿಲೀಸ್ ಸಹ ಆಗಲಿದ್ದು ಸಿನೆಮಾ ಪ್ರಮೊಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ಅಕ್ಕಿನೇನಿ ನಾಗಾರ್ಜುನ ಸಹ ಸಿನೆಮಾ ಪ್ರಮೋಷನ್ ನಿಮಿತ್ತ ಅನೇಕ ಸಂದರ್ಶನಗಳಲ್ಲಿ ಸಹ ಭಾಗಿಯಾಗುತ್ತಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ವಿಚ್ಚೇದನದ ಬಳಿಕ ಸಿನೆಮಾಗಳ ವಿಚಾರದಲ್ಲಿ ತುಂಬಾ ಪಶ್ಚಾತ್ಥಾಪ ಪಟ್ಟಿರುವುದಾಗಿ ಆತ ಹೇಳಿದ್ದರು. ಇದೀಗ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಲೇಟೆಸ್ಟ್ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಇಂಟ್ರಸ್ಟಿಂಗ್ ಸೀಕ್ರೇಟ್ ಹೊರಹಾಕಿದ್ದಾರೆ. ಚೈತು ಗೆ ತನ್ನ ರೀಸೆಂಟ್ ಕ್ರಷ್ ಬಗ್ಗೆ ಪ್ರಶ್ನೆ ಎದುರಾಗಿದ್ದು ಅದಕ್ಕೆ ಚೈತು ರಿಯಾಕ್ಟ್ ಆಗಿದ್ದಾರೆ.

ಸಂದರ್ಶನದಲ್ಲಿ ನಾಗಚೈತನ್ಯ ರವರಿಗೆ ಅನೇಕ ಪ್ರಶ್ನೆಗಳು ಎದುರಾಗಿದೆ. ಈ ಹಾದಿಯಲ್ಲೇ ಚೈತುಗೆ ತನ್ನ ಲೇಟೆಸ್ಟ್ ಸೀಕ್ರೇಟ್ ಕ್ರಷ್ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಚೈತು ನನಗೆ ಕ್ರಷ್ ಇರುವಾಗಿ ನಾನು ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತೇನೆ. ಕೆಲವು ದಿನಗಳ ಹಿಂದೆಯಷ್ಟೆ ನಾನು ಬಾಬಿಲೋನ್ ಎಂಬ ಹಾಲಿವುಡ್ ಸಿನೆಮಾ ನೋಡಿದ್ದೇ. ಈ ಸಿನೆಮಾದಲ್ಲಿ ನಟಿಯಾಗಿ ಕಾಣಿಸಿಕೊಂಡ ಮಾರ್ಗೆಟ್ ರಾಬಿ ನಟನೆ ನನಗೆ ತುಂಬಾ ಇಷ್ಟವಾಗಿತ್ತು. ಆಕೆಯ ಅಭಿನಯ ನನಗೆ ತುಂಬಾ ಇಷ್ಟವಾಗಿದೆ. ಆಕೆಯ ನಟನೆ ಇಷ್ಟಪಡುತ್ತೇನೆ, ಆ ರೀತಿಯಲ್ಲಿ ಆಕೆ ನನ್ನ ಕ್ರಷ್ ಎಂದು ಹೇಳಿದ್ದಾರೆ. ಸದ್ಯ ಚೈತನ್ಯ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದುಕೊಂಡ ಬಳಿಕ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿದೆ. ಸುಮಾರು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದ್ದು, ಇತ್ತಿಚಿಗಷ್ಟೆ ಅವರು ಲಂಡನ್ ನಲ್ಲಿ ಹೋಟೆಲ್ ನಲ್ಲಿ ಡಿನ್ನರ್‍ ಗೆ ಹೋಗಿದ್ದ ಪೊಟೋ ಸಹ ವೈರಲ್ ಆಗಿತ್ತು. ಇನ್ನೂ ಈ ಸಿನೆಮಾದಲ್ಲಿ ನಾಗಚೈತನ್ಯ ಜೊತೆಗೆ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನೆಮಾ ಮೆ.12 ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ.