Film News

ಶಾಕುಂತಲಂ ಸಿನೆಮಾದ ಪ್ರಮೋಷನ್ ವೇಳೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಸಮಂತಾ, ನಾನು ಶೇ.100 ರಷ್ಟು ಫರ್ಪೆಕ್ಟ್ ಆಗಿದ್ದಿನಿ ಎಂದ ನಟಿ…!

ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ಮದುವೆಯಾದ ಬಳಿಕ ಟಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಬೆಸ್ಟ್ ಜೋಡಿ ಎಂದು ಹೇಳಲಾಗುತ್ತಿತ್ತು. ಆದರೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡರು. ಬಳಿಕ ವಿಚ್ಚೇದನದ ಬಗ್ಗೆ ನಾಗಚೈತನ್ಯ ಸೈಲೆಂಟ್ ಆಗಿಯೇ ಇದ್ದಾರೆ. ಆದರೆ ಸಮಂತಾ ಅವಕಾಶ ಸಿಕ್ಕಾಗಲೆಲ್ಲಾ ಸೋಷಿಯಲ್ ಮಿಡಿಯಾ ಮೂಲಕ ಫೈರ್‍ ಆಗುತ್ತಲೇ ಇರುತ್ತಾರೆ. ಇದೀಗ ಶಾಕುಂತಲಂ ಸಿನೆಮಾ ಪ್ರಮೋಷನ್ ವೇಳೆಯಲ್ಲೂ ಸಹ ಸಮಂತಾ ವಿಚ್ಚೇದನದ ಬಗ್ಗೆ ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ನಟಿ ಸಮಂತಾ ಮಯೋಸೈಟೀಸ್ ಕಾರಣದಿಂದ ಸೋಷಿಯಲ್ ಮಿಡಿಯಾ ಹಾಗೂ ಸಿನೆಮಾಗಳಿಂದಲೂ ದೂರವೇ ಉಳಿದಿದ್ದರು. ಯಶೋಧ ಸಿನೆಮಾದ ಬಳಿಕ ಆಕೆ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಕೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದೀಗ ಪುಷ್ಪಾ ಸಿನೆಮಾದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಪುಷ್ಪಾ ಸಿನೆಮಾದಲ್ಲಿ ಊ ಅಂಟಾವಾ ಮಾಮ ಹಾಡಿನ ಆಫರ್‍ ಬಂದಾಗ ನಾನು ಒಪ್ಪಿ ಸೈನ್ ಹಾಕಿದ್ದೆ. ಆಗ ನನ್ನ ಹತ್ತಿರದವರು ಹಾಗೂ ಬಂದುಗಳು ಇದನ್ನು ವಿರೋಧಿಸಿದ್ದರು. ಈ ಹಾಡನ್ನು ಮಾಡಬೇಡ ಎಂದರು. ನಿನಗೆ ವಿಚ್ಚೇದನ ಆಗಿ ಜಾಸ್ತಿ ದಿನಗಳಾಗಿಲ್ಲ. ನೀನು ಐಟಂ ಸಾಂಗ್ ಮಾಡಿದರೇ ಜನರಲ್ಲಿ ತಪ್ಪಾಗಿ ಗುರ್ತಿಸಿಕೊಳ್ಳುತ್ತಿಯಾ. ಈ ಆಲೋಚನೆಯನ್ನು ಬಿಡು ಎಂದು ಹೇಳಿದ್ದರಂತೆ.

ಆದರೆ ಸಮಂತಾ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲವಂತೆ. ವೈವಾಹಿಕ ಜೀವನದಲ್ಲಿ ನಾನು ನೂರಕ್ಕೆ ನೂರರಷ್ಟು ಫರ್ಪೆಕ್ಟ್ ಆಗಿದ್ದೇನೆ. ನಾನು ಪ್ರಾಮಾಣಿಕವಾಗಿದಿದ್ದು ವರ್ಕೌಟ್ ಆಗಲಿಲ್ಲ. ನಾನು ಏನು ತಪ್ಪು ಮಾಡದಿದ್ದಾಗ ಶಿಕ್ಷೆಯನ್ನು ನಾನ್ಯಾಕೆ ಅನುಭವಿಸಬೇಕು. ನಾನು ಏಕೆ ಬಚ್ಚಿಟ್ಟುಕೊಳ್ಳಬೇಕು ಎಂದು ಸಮಂತಾ ಸ್ಟ್ರಾಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ತಮ್ಮ ಮೇಲೆ ಬಂದಂತಹ ರೂಮರ್‍ ಗಳಿಗೆ ಸಮಂತಾ ಈ ರೀತಿಯಲ್ಲಿ ಕೌಂಟರ್‍ ಕೊಟ್ಟಿದ್ದಾರೆ ಎನ್ನಬಹುದಾಗಿದೆ. ವಿಚ್ಚೇದನದ ಬಳಿಕ ಸಮಂತಾ ಪುಷ್ಪಾ ಸಿನೆಮಾದಲ್ಲಿನ ಊ ಅಂಟಾವಾ ಮಾಮ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ನಾಗಚೈತನ್ಯ ಮೇಲಿನ ಕೋಪದಿಂದಲೇ ಆಕೆ ಈ ಸಾಂಗ್ ಮಾಡಿದ್ದರು ಎಂಬ ರೂಮರ್‍ ಗಳೂ ಸಹ ಕೇಳಿಬಂದವು. ಇದೀಗ ಸಮಂತಾ ನೀಡಿದ ಕಾಮೆಂಟ್ ಗಳೂ ಸಹ ಆ ರೂಮರ್‍ ಗೆ ಮತಷ್ಟು ಬಲ ತಂದುಕೊಟ್ಟಿದೆ ಎನ್ನಬಹುದಾಗಿದೆ.

ಸದ್ಯ ಸಮಂತಾ ಪೌರಾಣಿಕ ಶಾಕುಂತಲಂ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಏ.14 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ಸ್ ಸಹ ಭರ್ಜರಿಯಾಗಿಯೇ ನಡೆಯುತ್ತಿದ್ದು, ಶಾಕುಂತಲಂ ಸಿನೆಮಾವನ್ನು ಸಕ್ಸಸ್ ಮಾಡುವ ನಿಟ್ಟಿನಲ್ಲಿ ಸಮಂತಾ ಸಹ ಪ್ರಮೋಷನ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ.

Most Popular

To Top